More

    ಟ್ರೋಲ್​ಗೆ ಹೆದರಿದ ಆಲಿಯಾ; ಟ್ವಿಟರ್ ಕಮೆಂಟ್​ ಬಾಕ್ಸ್ ಬ್ಲಾಕ್​ ಮಾಡಿ ‘ಸಡಕ್​ 2’ ಬಿಡುಗಡೆ ದಿನಾಂಕ ಘೋಷಣೆ

    ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಬೆನ್ನಲ್ಲೆ ನೆಪೋಟಿಸಂ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ನೆಪೋಟಿಸಂ ಪೋಷಿಸುತ್ತಿದ್ದಾರೆಂಬ ಆರೋಪ ಎದುರಿಸುತ್ತಿದ್ದ ಬಾಲಿವುಡ್​ನ ಘಟಾನುಘಟಿಗಳಾದ ಕರಣ್​ ಜೋಹರ್​, ಆಲಿಯಾ ಭಟ್​ ಸೇರಿ ಹಲವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಸಿನಿಮಾ ಬ್ಯಾನ್​ ಮಾಡುವ ಅಭಿಯಾನ ಒಂದೆಡೆ ನಡೆದರೆ, ಸೋಷಿಯಲ್​ ಮೀಡಿಯಾದಲ್ಲೂ ಅವರ ವಿರುದ್ಧ ಟ್ರೋಲ್​ ಮಾಡಲಾಗುತ್ತಿತ್ತು. ಇದೀಗ ಇಷ್ಟರ ಮೇಲೂ ಆಲಿಯಾ ಭಟ್​ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ಸುಶಾಂತ್​ ಪ್ರಕರಣ ಮುಗಿಯುವವರೆಗೂ ಮುಂಬೈ ಕಮಿಷನರ್​ಗೆ ರಜೆ ನೀಡಿ; ಮಹಾ ಸರ್ಕಾರಕ್ಕೆ ಬಿಜೆಪಿ ಪತ್ರ

    ಇಲ್ಲಿಯವರೆಗೂ ಡಿಸ್ನಿ ಹಾಟ್​ಸ್ಟಾರ್ನಲ್ಲಿ ಸಿನಿಮಾ ಬಿತ್ತರ ಆಗಲಿದೆ ಎಂಭ ಘೋಷಣೆ ಆಗಿತ್ತಾದರೂ, ಸಿನಿಮಾ ಯಾವತ್ತು ಬಿಡುಗಡೆ ಆಗಲಿದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಆ ವಿಚಾರವನ್ನು ಚಿತ್ರತಂಡ ಹೊರಹಾಕಿದ್ದು, ಆಗಸ್ಟ್ 28ಕ್ಕೆ ಚಿತ್ರ ರಿಲೀಸ್ ಆಗಲಿದೆ.

    ಆಲಿಯಾ ಭಟ್​ ಈ ವಿಚಾರವನ್ನು ಟ್ವಿಟರ್ ಮತ್ತು ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ಅಚ್ಚರಿ ವಿಚಾರ ಏನೆಂದರೆ, ಟ್ವಿಟರ್​ನಲ್ಲಿ ಕಮೆಂಟ್​ ಆಯ್ಕೆಯನ್ನೇ ನಿಷೇಧಿಸಿ ಫೋಟೋ ಹಂಚಿಕೊಂಡಿದ್ದಾರೆ. ಈ ಮೊದಲು ನೆಪೋಟಿಸಂ ವಿಚಾರವಾಗಿ ಆಲಿಯಾ ಮತ್ತು ಕರಣ್​ ಜೋಹರ್​, ಮಹೇಶ್ ಭಟ್​ ಸೇರಿ ಹಲವರ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಗಿತ್ತು. ಸಡಕ್​ ಸಿನಿಮಾ ಬ್ಯಾನ್​ ಮಾಡುವಂತೆ ನೆಟ್ಟಿಗರು ಅಭಿಯಾನವನ್ನೇ ಆರಂಭಿಸಿದ್ದರು.

    ಇದನ್ನೂ ಓದಿ: ಬಾಲಿವುಡ್​ ಕಾಮಕಾಂಡ!; ನಟಿ ಊರ್ವಶಿ ರೌಟೇಲಾ ಕಡೆಯಿಂದ ಅಚ್ಚರಿಯ ಹೇಳಿಕೆ!

    ಇದೀಗ ಅದೆಲ್ಲವನ್ನು ಮೀರಿ ಆಲಿಯಾ ಸಿನಿಮಾ ಬಿಡುಗಡೆ ಘೋಷಣೆ ಮಾಡಿಕೊಂಡಿದ್ದಾರೆ. ಮಹೇಶ್ ಭಟ್​ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಸಂಜಯ್​ ದತ್​, ಆಲಿಯಾ ಭಟ್​, ಆದಿತ್ಯ ರಾಯ್​ ಕಪೂರ್​ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. (ಏಜೆನ್ಸೀಸ್​)

    PHOTOS: ರಾಣಾ ದಗ್ಗುಬಾಟಿ- ಮಿಹಿಕಾ ಮದುವೆಗೆ ಶುರುವಾಗಿದೆ ತಯಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts