ನೀಲಿ ತಾರೆ ಜತೆ ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ!

rvg
Published on

ಮುಂಬೈ: ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ(RVG) ಏನೆ ಮಾಡಿದ್ರು ಸುದ್ದಿ ಎನ್ನುವಷ್ಟು ಖ್ಯಾತಿಯನ್ನು ಪಡೆದಿದ್ದಾರೆ. ಒಂದು ಕಾಲದಲ್ಲಿ ತಮ್ಮ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ಅವರು, ಈಗ ಟ್ವೀಟ್ ಹಾಗೂ ಫೋಟೋಗಳ ಮೂಲಕ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗಷ್ಟೇ ಆರ್‌ಜಿವಿ ಅಮೆರಿಕಕ್ಕೆ ಹೋಗಿದ್ದರು. ಅಮೆರಿಕದಲ್ಲಿರುವ ತೆಲುಗು ಜನರಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆರ್‌ಜಿವಿ ಅಮೆರಿಕಕ್ಕೆ ತೆರಳಿದ್ದರು. ಅಮೆರಿಕದ ಪೋರ್ನ್ ಸ್ಟಾರ್ ಜತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ.

ಮಿಯಾ ಮಲ್ಕೋವಾ ಅಮೆರಿಕದ ಪೋರ್ನ್ ತಾರೆ. ಈ ಹಿಂದೆ, ಆರ್‌ಜಿವಿ ಮಿಯಾ ಮಲ್ಕೋವಾ ಅವರೊಂದಿಗೆ ಜಿಎಸ್‌ಟಿ ಎಂಬ ಬೋಲ್ಡ್ ಕಿರುಚಿತ್ರವನ್ನೂ ಮಾಡಿದ್ದರು. ಆ ಸಿನಿಮಾದಿಂದ ಇಬ್ಬರೂ ಒಬ್ಬರಿಗೊಬ್ಬರು ಚೆನ್ನಾಗಿ ಪರಿಚಿತರಾದರು. ಆರ್‌ಜಿವಿ ಈಗ ಅಮೆರಿಕಕ್ಕೆ ಹೋಗಿ ಮತ್ತೊಮ್ಮೆ ಮಿಯಾ ಮಲ್ಕೋವಾ ಅವರನ್ನು ಭೇಟಿಯಾಗಿದ್ದಾರೆ. ಅವರು ಮಿಯಾ ಅವರೊಂದಿಗೆ ವಿಶೇಷ ಸೆಲ್ಫಿಗಳನ್ನು ತೆಗೆದುಕೊಂಡು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಅದು ವೈರಲ್ ಆಗಿದೆ.

ಎಂದಿನಂತೆ ಅನೇಕ ನೆಟಿಜನ್‌ಗಳು ಆರ್‌ಜಿವಿ ಅವರನ್ನು ಟೀಕಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆದರೆ ಅವರ ಅಭಿಮಾನಿಗಳು ಬೆಂಬಲವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಆರ್‌ಜಿವಿ ತಲೆಕೆಡಿಸಿಕೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net