ಬಹುನಿರೀಕ್ಷಿತ ‘ಸಲಾರ್’ ಟೀಸರ್ ಬಿಡುಗಡೆ: ಪ್ರಶಾಂತ್ ನೀಲ್ ಅದ್ದೂರಿ ಮೇಕಿಂಗ್, ಮಾಸ್​ ಲುಕ್‌ನಲ್ಲಿ ಪ್ರಭಾಸ್​..!

salar
Published on

ಹೈದರಾಬಾದ್​​: ಬಹುದಿನಗಳದಿಂದ ಅಭಿಮಾನಿಗಳು ನಿರೀಕ್ಷೆಯಿಟ್ಟುಗೊಂಡು ಕಾಯುತ್ತಿರುವ ನಟ ಪ್ರಭಾಸ ಅಭಿನಯದ ಸಲಾರ್​ ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

ಟೀಸರ್​ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಪರಿಚಯಿಸುವ, ಶಕ್ತಿಯುತ ಸಂಭಾಷಣೆಗಳಿಂದ ಕೂಡಿದ ಅದ್ಭುತ ಟೀಸರ್ ಇದಾಗಿದೆ. ಅತಿದೊಡ್ಡ ಬ್ಲಾಕ್‌ಬಸ್ಟರ್ ಕೆಜಿಎಫ್‌ ನೀಡಿದ ಸಾಹಸ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದಲ್ಲಿ ಹೊಸ ಜಗತ್ತನ್ನು ಸೃಷ್ಟಿಸಿದ್ದು. ಚಿತ್ರವೂ ಭವಿಷ್ಯದಲ್ಲಿ ಅನೇಕ ಸೀಕ್ವೆಲ್‌ಗಳಿಗೆ ಕಾರಣವಾಗುವ ನಿರೀಕ್ಷಿಯಿದೆ.

ಆಕ್ಷನ್ ಮತ್ತು ಬೆರಗುಗೊಳಿಸುವ ದೃಶ್ಯಗಳಿಂದ ತುಂಬಿರುವ ಸಲಾರ್ ಟೀಸರ್​ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳವಲ್ಲಿ ಸಫಲವಾಗಿದ್ದು. ಪ್ರಶಾಂತ್​ ನೀಲ್​ ಮತ್ತೊಮ್ಮೆ ಇಂಡಸ್ಟ್ರಿಯಲ್ಲಿ ಸದ್ದು ಮಾಡಲಿದ್ದಾರೆ. ಟೀಸರ್ ನೋಡಿದ ನಂತರ ಈ ಚಿತ್ರವು ಬಹುನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ, ಉತ್ಸಾಹ ಗಗನ ಮುಟ್ಟುತ್ತಿದೆ.

ಈ ಟೀಸರ್​ ಹೈ-ಆಕ್ಷನ್​​ನ್ನು ಒಳಗೊಂಡಿದ್ದು, ಪ್ರಭಾಸ್​​​ರ ಮಾಸ್​ ಲುಕ್‌, ಬಿಜಿಎಂ ರೋಮಾಂಚಕವಾಗಿದೆ. 'ಸಾಲಾರ್' ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ನಟಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಯಾರಾದ ಈ ಚಿತ್ರವು ಸೆಪ್ಟೆಂಬರ್ 28, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net