ಶವಗಳ ಮಾರಾಟ.. ಒಂದೆರಡಲ್ಲ, ಕೋಲ್ಕತ್ತಾ ಮೆಡಿಕಲ್ ಕಾಲೇಜು ಮಾಜಿ ಪ್ರಿನ್ಸಿಪಾಲ್​ ಕರ್ಮಕಾಂಡ!

prin
Published on

ಕೋಲ್ಕತ್ತಾ: ಟ್ರೈನಿವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದ್ದರೆ, ಆರ್ ಜಿ ಕಾರ್ ಮೆಡಿಕಲ್ ಕಾಲೇಜು ಭ್ರಷ್ಟಾಚಾರದ ಕೇಂದ್ರವಾಗಿ ಮಾರ್ಪಟ್ಟಿದೆ. ತನಿಖೆ ಮುಂದುವರಿದಂತೆ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಡೆಸಿರುವ ಭ್ರಷ್ಟಾಚಾರಗಳೂ ಒಂದೊಂದೇ ಬಯಲಾಗ್ತಿವೆ. ಆತ ಮೃತದೇಹಗಳನ್ನು ಮಾರಾಟ ಮಾಡುತ್ತಿದ್ದ ಎಂಬ ಆಘಾತಕಾರಿ ಸುದ್ದಿ ಬಹಿರಂಗಗೊಂಡಿದೆ.

ಸಂದೀಪ್ ಘೋಷ್ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಡ್ರಗ್ಸ್ ರಫ್ತು ಮಾಡುತ್ತಿದ್ದರು ಎಂದು ಮಾಜಿ ಉದ್ಯೋಗಿ ಹೇಳಿದ್ದಾರೆ. ಬಳಸಿದ ಸಿರಿಂಜ್ ಮತ್ತಿತರ ಉಪಕರಣಗಳನ್ನು ಮರುಬಳಕೆ ಮಾಡಿ ಈತ ಹಣ ಸಂಪಾದಿಸುತ್ತಿದ್ದಎಂದು ತಿಳಿದುಬಂದಿದೆ.

ಕಳೆದ ವರ್ಷದವರೆಗೂ ಇದೇ ಕಾಲೇಜಿನಲ್ಲಿ ಕೆಲಸ ಮಾಡಿದ, ಪ್ರಸ್ತುತ ಮುರ್ಷಿದಾಬಾದ್ ಉಪ ವೈದ್ಯಕೀಯ ಕಾಲೇಜಿನ ಅಧೀಕ್ಷಕರಾಗಿರುವ ಅತ್ತರ್ ಅಲಿ ಈ ಹಿಂದೆ ಹಲವು ವಿಷಯಗಳ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇತ್ತೀಚೆಗೆ, ಈ ಆರೋಪಗಳ ಮೇಲೆ ರಚಿಸಲಾದ ಎಸ್‌ಐಟಿ ಅಖ್ತರ್‌ ರನ್ನು ವಿಚಾರಣೆಗೆ ಕರೆಸಿತ್ತು.

ಅಲಿ ಪತ್ರದ ಪ್ರಕಾರ, ಸಂದೀಪ್, ಕಾಲೇಜು ಕೌನ್ಸಿಲ್ ಅಥವಾ ಸ್ವಸ್ತ್ ಭವನದ ಅನುಮತಿಯಿಲ್ಲದೆ ಆಸ್ಪತ್ರೆಯ ಆಸ್ತಿಯನ್ನು ಗುತ್ತಿಗೆಗೆ ನೀಡುತ್ತಿದ್ದರು. ಆಸ್ಪತ್ರೆಗೆ ಅಗತ್ಯವಾದ ಉಪಕರಣಗಳು ಮತ್ತು ಔಷಧಿಗಳ ಪೂರೈಕೆದಾರರ ಆಯ್ಕೆಯಲ್ಲಿ ಸ್ವಜನಪಕ್ಷಪಾತ ತೋರಿಸಿದ್ದರು. ಕೋಟ್ಯಂತರ ರೂ. ಮೌಲ್ಯದ ಕೊಟೇಶನ್ ಗಳನ್ನು ಅನರ್ಹರಿಗೆ ನೀಡಲಾಗಿದೆ. ಸರಬರಾಜುದಾರರಿಂದ 20 ಪ್ರತಿಶತ ಕಮಿಷನ್ ಸಂಗ್ರಹಿಸುತ್ತಿದ್ದರು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಆರೋಪಿಸಿದ್ದರು.

ಆಸ್ಪತ್ರೆಯಲ್ಲಿ ಎರಡು ದಿನಕ್ಕೊಮ್ಮೆ ಅನಾಥ ಶವಗಳು, ಬಳಸಿದ ಸಿರಿಂಜ್, ಸಲೈನ್ ಬಾಟಲಿಗಳು, ರಬ್ಬರ್ ಬ್ಲೌಸ್ ಗಳನ್ನು ಇಬ್ಬರು ಬಾಂಗ್ಲಾದೇಶಿಯರ ಸಹಾಯದಿಂದ ಮರುಬಳಕೆ ಮಾಡುತ್ತಿದ್ದರು. ಈ ಬಗ್ಗೆ ವಿಜಿಲೆನ್ಸ್ ಕಮಿಷನ್, ಎಸಿಬಿ ಮತ್ತು ಆರೋಗ್ಯ ಇಲಾಖೆಗೆ ಅಲಿ ದೂರು ನೀಡಿದ್ದಾರೆ. ಈ ಹಿಂದೆ ತಪ್ಪಿತಸ್ಥರೆಂದು ಕಂಡುಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net