'ಏನೋ ಅಣ್ಣನನ್ನು ಆಟೋ ಡ್ರೈವರ್​ಗೆ ಕರೆದಂತೆ ಕರೀತೀಯಾ'..ಈ ಸ್ಟಾರ್​ ನಟನ ಫ್ಯಾನ್ಸ್​ ಟಾಕ್​ ವೈರಲ್​!

prabhas
Published on

ಹೈದರಾಬಾದ್: ಟಾಲಿವುಡ್ ನಿಂದ ಬಾಲಿವುಡ್ ವರೆಗೆ ಕೋಟಿಗಟ್ಟಲೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ನಾಯಕ ಪ್ರಭಾಸ್. ಅವರ ಕಲ್ಕಿ ಚಿತ್ರದ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿರುವ ಬೆನ್ನಲ್ಲೇ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಪ್ರಭಾಸ್ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು ಬಂದಿದ್ದು, ಅಭಿಮಾನಿಯೊಬ್ಬ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಆದರೆ ಅವರು ಕರೆದ ರೀತಿ ಸ್ಥಳೀಯ ಶೈಲಿಯಾಗಿತ್ತು. "ಅಣ್ಣಾ ಭೀಮಾವರಂ ಬರ್ತೀಯಾ" ಎಂದು ಗೋದಾರಿ ಭಾಗದ ಶೈಲಿಯಲ್ಲಿ ಕೇಳಿದಾಗ, ಪ್ರಭಾಸ್​ ಹಿಂದೆ ತಿರುಗಿ ನೋಡಿದ್ದಾರೆ. ಯಾರೋ ನೀನು ನಮ್ಮ ಗೋದಾರಿ ಅಭಿಮಾನಿಯಂತೆ ಕಾಣುತ್ತಿರುವೆ ಎಂದು ಸ್ಪಂದಿಸಿ ಮುಗುಳ್ನಕ್ಕಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದು ಹೊಸ ವಿಡಿಯೋ ಅಲ್ಲ. ಇದು ಪ್ರಭಾಸ್ ಅಭಿನಯದ ಸಾಹೋ ಸಿನಿಮಾದ ಬಿಡುಗಡೆಯ ಸಂದರ್ಭದಲ್ಲಿ ನಡೆದ ಘಟನೆಯಂತೆ.

ಈ ವೀಡಿಯೋ ನೋಡಿದ ನೆಟಿಜನ್‌ಗಳು ಏನೋ ಇದು ಆಟೋ ಡ್ರೈವರ್‌ಗೆ ಕರೆದಂತೆ ಅಣ್ಣನನ್ನು ಕರೆದಿದ್ದೀಯಾ ಎಂದು ಕೆಲವರು ಸ್ಪಂದಿಸಿದರೆ, ಮತ್ತೆ ಕೆಲವರು ಆ ಹುಡುಗ ಒರಟಾಗಿ ಕರೆದಿದ್ದರೂ, ಅದರ ಹಿಂದಿನ ಪ್ರೀತಿ ಗೋದಾರಿಯವರಿಗೆ ಮಾತ್ರ ಗೊತ್ತು ಎಂದು ಉತ್ತರಿಸುತ್ತಿದ್ದಾರೆ. ಇನ್ನೂ ಕೆಲವರು, ಏನೇ ಕರೆದರೂ ಪ್ರಭಾಸ್​ ಅವರಲ್ಲಿ ಒಳ್ಳೆಯತನ, ಪ್ರೀತಿ ಇದೆ ಎಂದು ಅಭಿಮಾನಿಗಳು ಪೋಸ್ಟ್ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net