ನಾಳೆ ನಿವೃತ್ತ ನೌಕರ ಸಮ್ಮೇಳನ

Nanjundaswamy
ಮಾ.ಸ.ನಂಜುಂಡಸ್ವಾಮಿ
Published on

ಸಾಗರ : ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯ ಸಮ್ಮೇಳನ ಮತ್ತು ಕಾರ್ಯಾಗಾರ ಏ.4ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ.9ರಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾ.ಸ.ನಂಜುಂಡಸ್ವಾಮಿ ತಿಳಿಸಿದರು.

ನಿವೃತ್ತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮ್ಮೇಳನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು. 2022ರ ಜು.1ರಂದು ನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗೆ ವೇತನ ನಿಗದೀಕರಣ ಮಾಡಿದ್ದು, ಫೈನಾನ್ಸಿಯಲ್ ಬೆನಿಫಿಟ್ ನೀಡಿಲ್ಲ. ಇದನ್ನು ತಕ್ಷಣ ವಿಸ್ತರಿಸಬೇಕು. ನಿವೃತ್ತ ನೌಕರರಿಗೆ ಮತ್ತು ಪಿಂಚಣಿದಾರರಿಗೆ ನಗದು ರಹಿತ ಆರೋಗ್ಯ ಭಾಗ್ಯ ಸಂಧ್ಯಾಕಿರಣ ನೀಡಬೇಕು. ಸಂಧ್ಯಾಕಿರಣಕ್ಕಿಂತ ಮೊದಲು ಕನಿಷ್ಠ 500 ರೂ. ವೈದ್ಯಕೀಯ ವೆಚ್ಚ ನೀಡಬೇಕು. 70 ರಿಂದ 80 ವರ್ಷ ತುಂಬಿರುವ ಸರ್ಕಾರಿ ನಿವೃತ್ತ ನೌಕರರಿಗೆ ಶೇ.10ರಷ್ಟು ಮೂಲ ಪಿಂಚಣಿಯಲ್ಲಿ ಸೌಲಭ್ಯ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸರ್ಕಾರಕ್ಕೆ ಈಗಾಗಲೇ ಪೇ ಕಮಿಷನ್ ವರದಿ ನೀಡಿದೆ. ತಕ್ಷಣ ಅದನ್ನು ಅನುಷ್ಠಾನಕ್ಕೆ ತರಬೇಕು. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಂಘದ ರಾಜ್ಯಾಧ್ಯಕ್ಷ ಬೈರಪ್ಪ, ಸಚಿವರು ಪಾಲ್ಗೊಳ್ಳಲಿದ್ದಾರೆ. ತಾಲೂಕಿನ ಎಲ್ಲ ನಿವೃತ್ತ ನೌಕರರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ತಾಲೂಕು ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಗೌರವಾಧ್ಯಕ್ಷ ಎಸ್.ಬಸವರಾಜ್, ಪ್ರಮುಖರಾದ ಎಂ.ಸಿ.ಪರಶುರಾಮಪ್ಪ, ಸೋಮರಾಜ್, ದಮಯಂತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net