

ನವದೆಹಲಿ: ಪ್ರತಿಕೂಲ ಹವಾಮಾನ ಮತ್ತು ತರಕಾರಿಗಳ ದರ ಹೆಚ್ಚಳದ ಪರಿಣಾಮ ಸೆಪ್ಟೆಂಬರ್ನಲ್ಲಿ ಚಿಲ್ಲರೆ ಹಣದುಬ್ಬರ (Inflation) ಶೇ.5.49ಕ್ಕೆ ಏರಿಕೆ ಆಗಿದೆ. ಇದು ಕಳೆದ 9 ತಿಂಗಳಲ್ಲೇ ಗರಿಷ್ಠವಾಗಿದೆ.
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಪ್ರಕಾರ ಹಣದುಬ್ಬರ ದರ 2024ರ ಆಗಸ್ಟ್ನಲ್ಲಿ 3.65%, ಜುಲೈನಲ್ಲಿ 3.54%, ಜೂನ್ನಲ್ಲಿ ಶೇ. 5.08, ಮೇ ತಿಂಗಳಲ್ಲಿ ಶೇ. 4.80 ಆಗಿತ್ತು. ಸೆಪ್ಟೆಂಬರ್ನಲ್ಲಿ ಆಹಾರ ಹಣದುಬ್ಬರ ಕೂಡ ಭಾರಿ ಏರಿಕೆ ಕಂಡಿದೆ. 5.66%ರಿಂದ 9.24%ಕ್ಕೆ ಜಿಗಿದಿದೆ. ಆಹಾರ ಹಣದುಬ್ಬರ ಜುಲೈನಲ್ಲಿ 5.42%, ಜೂನ್ನಲ್ಲಿ ಶೇ. 9.36, ಮೇ ತಿಂಗಳಲ್ಲಿ ಶೇ. 8.69 ಆಗಿತ್ತು.
2023ರ ಜುಲೈನಲ್ಲಿ 11.51%ರಷ್ಟಿತ್ತು. ನಗರ ಹಣದುಬ್ಬರ 3.14% (ಆಗಸ್ಟ್)ರಿಂದ 5.05%ಕ್ಕೆ (ಸೆಪ್ಟೆಂಬರ್) ತಲುಪಿದೆ. ನಗರ ಹಣದುಬ್ಬರ ಆಗಸ್ಟ್ನಲ್ಲಿ 3.14%, ಜುಲೈನಲ್ಲಿ 2.98%, ಜೂನ್ನಲ್ಲಿ 4.39% ಆಗಿತ್ತು. ಗ್ರಾಮೀಣ ಹಣದುಬ್ಬರ 4.16%ರಿಂದ 5.87%ಕ್ಕೆ ತಲುಪಿದೆ. ಜುಲೈನಲ್ಲಿ 4.10%, ಜೂನ್ನಲ್ಲಿ 5.66% ರಷ್ಟಿತ್ತು.