VIDEO: 24 ಕ್ಯಾ. ಚಿನ್ನದ ದೋಸೆ ಸವಿಯಲು ಸಿದ್ಧ; ಬೆಲೆ ಮಾತ್ರ ಸಾವಿರ ರೂ.!

Gold Dosa
Published on

ಬೆಂಗಳೂರು: ದೋಸೆ ಎಂದರೆ ಆಹಾರ ಪ್ರಿಯರಿಗೆ ಅಚ್ಚುಮೆಚ್ಚು. ಯಾವುದೇ ಹೊಟೇಲ್​ಗೆ ಹೋದರೂ ಅಲ್ಲೊಂದು ವಿಶೇಷ ರುಚಿಯ ದೋಸೆ ಇದ್ದೇ ಇರುತ್ತದೆ. ಈಗಂತೂ ವಿಭಿನ್ನ ಬಗೆಯ ದೋಸೆಗಳು, ದೋಸೆ ಪ್ರಿಯರ ಮನಗೆಲ್ಲುತ್ತಿವೆ. ಇದೇ ಸಾಲಿಗೆ, ಚಿನ್ನದ ದೋಸೆಯೊಂದು ಸೇರ್ಪಡೆಯಾಗಿದೆ.

ಚಿನ್ನದ ದೋಸೆಯಾ... ಹೇಗಪ್ಪಾ ಸೇವಿಸುವುದು ಅಂತಾ ಯೋಚಿಸ್ತಿದ್ದೀರಾ? ಹೌದು, ತುಮಕೂರಿನ ಹೊಟೇಲೊಂದರಲ್ಲಿ ಚಿನ್ನದ ದೋಸೆ ಸವಿಯಲು ಸಿಗುತ್ತಿದೆ. ಆಹಾರ ಪ್ರಿಯರಂತೂ ಚಿನ್ನದ ದೋಸೆಯ ರುಚಿ ನೋಡಲು ಹೊಟೇಲಿನ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

ತುಮಕೂರಿನ ಹೊಟೇಲೊಂದರಲ್ಲಿ ಚಿನ್ನದ ದೋಸೆ ಲಭ್ಯವಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾ ವ್ಲಾಗರ್ ಒಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಜನರಂತೂ ಚಿನ್ನದ ದೋಸೆಯ ಲಭ್ಯತೆಯ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದಾಗ ಬಿಸಿಬಿಸಿ ದೋಸೆಗೆ ಚಿನ್ನದ ಅಂಶವಿರುವ ಕಾಗದದ (ಸಿಲ್ವರ್ ಪೇಪರ್ ಮಾದರಿ) ಮಾದರಿಯನ್ನು ಲೇಪನ ಮಾಡಿದ್ದಾರೆ. ಇದು ದೋಸೆಯ ಬಿಸಿಗೆ ಅಂಟಿಕೊಳ್ಳುತ್ತದೆ. ಗೋಲ್ಡ್​ ಪೇಪರ್ ಲೇಪನವಾಗಿರುವ ಈ ಚಿನ್ನದ ಮಸಾಲೆ ದೋಸೆಯ ಬೆಲೆ 1000 ರೂ. ಮಾಹಿತಿಯ ಪ್ರಕಾರ ಇದು 24 ಕ್ಯಾರೆಟ್​ ಚಿನ್ನದ ಗೋಲ್ಡ್​​ ಪೇಪರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net