ದೆಹಲಿಯಲ್ಲಿ ದೀಪಾವಳಿ ನಂತರ ಉಸಿರಾಟದ ಸಮಸ್ಯೆ ಹೆಚ್ಚಳ

Health (4)
Published on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದೀಪಾವಳಿ ನಂತರ ಉಸಿರಾಟದ ಸಮಸ್ಯೆಗಳ ಪ್ರಕರಣಗಳಲ್ಲಿ ಶೇಕಡ 30ರಷ್ಟು ಏರಿಕೆ ದಾಖಲಾಗಿದೆ. ಹೊಗೆ, ವಿಷಾನಿಲ ಮತ್ತು ಫೈನ್ ಪಾರ್ಟಿಕ್ಯುಲೇಟ್ ಅಂಶಗಳಿಂದಾಗಿ ವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ಉಸಿರಾಟದ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಅಧಿಕ ತೊಂದರೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ವಿಶೇಷವಾಗಿ ರಾತ್ರಿ ಹೊತ್ತು ಸುಡುಮದ್ದುಗಳ ಸಿಡಿತದಿಂದಾಗಿ ಉಂಟಾದ ವಾಯು ಹಾಗೂ ಶಬ್ದ ಮಾಲಿನ್ಯದ ಸಂಯುಕ್ತ ಪರಿಣಾಮವು ಆರೋಗ್ಯ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆಯೆಂದು ವೈದ್ಯರು ಹೇಳಿದ್ದಾರೆ. ಅಕ್ಟೋಬರ್ 20ರಿಂದ 23ರ ನಡುವೆ ಹೊರರೋಗಿ ಮತ್ತು ತುರ್ತು ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂದು ಶ್ವಾಸಕೋಶ ಶಾಸ್ತ್ರಜ್ಞರು ಹಾಗೂ ಪ್ರಸೂತಿತಜ್ಞರು ಹೇಳಿದ್ದಾರೆ. ಮಾಲಿನ್ಯವು ಅನುಮತಿಸಲಾದ ಮಟ್ಟಕ್ಕಿಂತ ತೀರಾ ಹದಗೆಟ್ಟಿದ್ದು ಇದಕ್ಕೆ ಕಾರಣ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net