

ತರೀಕೆರೆ: ಸಮರ್ಪಕ ಮಳೆ ಇಲ್ಲದೆ ಅಡಕೆ, ತೆಂಗು ಇನ್ನಿತರ ವಾಣಿಜ್ಯ ಬೆಳೆಗಳು ಹಾನಿಗೀಡಾಗುತ್ತಿವೆ. ಹಾಗಾಗಿ ಟ್ರಾನ್ಸ್ ಾರ್ಮರ್‌ಗಳು ಸುಟ್ಟು ಹೋದರೆ ತಕ್ಷಣ ಹೊಸದನ್ನು ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಪರಮೇಶ್ವರಪ್ಪ ಆಗ್ರಹಿಸಿದರು.
ಪಟ್ಟಣದ ಮೆಸ್ಕಾಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಪ ವಿಭಾಗೀಯ ಮಟ್ಟದ ವಿದ್ಯುತ್ ಬಳಕೆದಾರರ ಹಾಗೂ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ತಾಲೂಕಿನ ಸುಣ್ಣದಹಳ್ಳಿ, ಲಿಂಗದಹಳ್ಳಿ, ಅಮೃತಾಪುರ ಮತ್ತಿತರ ಗ್ರಾಮಗಳಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಕ್ಕೆ 50 ವರ್ಷಗಳ ಹಿಂದೆ ಅಳವಡಿಸಿದ್ದ ಹಳೇ ರ‌್ಯಾಬಿಟ್ ವೈರ್‌ಗಳು ತುಂಡಾಗಿ ಬೀಳುತ್ತಿವೆ. ತಂತಿಗಳನ್ನು ಬದಲಾಯಿಸಲು ಕಳೆದ 10 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್ ಪ್ರತಿಕ್ರಿಯಿಸಿ, ಉಪ ವಿಭಾಗದಲ್ಲಿ ಸಾಕಷ್ಟು ಟ್ರಾನ್‌ಸ್ಾರ್ಮರ್‌ಗಳು ಲಭ್ಯವಿದೆ. 24 ಗಂಟೆಯೊಳಗೆ ಕ್ರಿಯಾಯೋಜನೆ ತಯಾರಿಸಿ ಸುಟ್ಟುಹೋದ ಟ್ರಾನ್‌ಸ್ಾರ್ಮರ್‌ಗಳಿಗೆ ಬದಲಿ ವ್ಯವಸ್ಥೆ ಮಾಡಿಕೊಡಲಾಗುವುದು. ವಿದ್ಯುತ್ ಮಾರ್ಗಗಳಲ್ಲಿ ತುಂಡಾಗಿ ಬೀಳುತ್ತಿರುವ ಹಳೇ ರ‌್ಯಾಬಿಟ್ ತಂತಿಗಳನ್ನು ಬದಲಾಯಿಸಿ ಹೊಸದನ್ನು ಅಳವಡಿಸಲು ಮುಂದಿನ ಬಜೆಟ್‌ನಲ್ಲಿ ಅಂದಾಜು ಪಟ್ಟಿ ತಯಾರಿಸಿ 6 ತಿಂಗಳೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಎಸ್.ಪಿ.ಚಂದಪ್ಪ ಮಾತನಾಡಿ, ಎಲ್ಲ ಶಾಖೆಗಳಲ್ಲಿ ರೈತರು ಗುತ್ತಿಗೆದಾರರ ಮೂಲಕ ಅನಧಿಕೃತ ವಿದ್ಯುತ್ ಪರಿರ್ವತಕ ಪಡೆದು ಅಲ್ಲಲ್ಲಿ ಅಳವಡಿಸಿಕೊಂಡಿದ್ದಾರೆ. ಆದರೆ ಅಂತಹ ಟ್ರಾನ್ಸ್‌ಫಾರ್ಮರ್‌ಗಳನ್ನು ಸಕ್ರಮಗೊಳಿಸಿ ಆರ್‌ಆರ್ ನಂಬರ್ ಕೊಟ್ಟಿಲ್ಲ. ಸುಣ್ಣದಹಳ್ಳಿ, ನಂದಿ, ಲಿಂಗದಹಳ್ಳಿ ಕಡೆ ನಿರಂತರ ಜ್ಯೋತಿ ಪೂರೈಕೆಯಿದ್ದರೂ ಆಗಾಗ ಮನೆಯ ವಿದ್ಯುತ್ ಕಡಿತಗೊಳ್ಳುತ್ತಿರುವುದು ಮಾತ್ರವಲ್ಲ, ತ್ರೀ ೇಸ್‌ನಲ್ಲೂ ವ್ಯತ್ಯಯವಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಂಜಿನಿಯರ್ ಸೋಮಶೇಖರ್ ಮಾತನಾಡಿ, ಉಪ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ. ನಂದಿ ಹೊಸಳ್ಳಿ ಗ್ರಾಮದಲ್ಲಿ ಎಂಯುಎಸ್‌ಎಚ್ ಘಟಕ ಸ್ಥಾಪನೆಯಾದರೆ ಅನಿಯಮಿತ ಲೋಡ್ ಶೆಡ್ಡಿಂಗ್ ಸಮಸ್ಯೆ ನಿವಾರಣೆಯಾಗಲಿದೆ. ವಿದ್ಯುತ್ ಕಂಬಗಳು ಬಿದ್ದು ತೊಂದರೆಯಾದರೆ ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೆಸ್ಕಾಂ ಇಇ ಲಿಂಗರಾಜು, ಎಇಇ ಬಿ.ಕುಮುದಾ, ಶಾಖಾಧಿಕಾರಿಗಳಾದ ಜೆ.ಅಜೇಯ್, ಗುರುಪಾದಪ್ಪ, ರಂಗೇಗೌಡ, ತಿಪ್ಪೇಶಪ್ಪ, ರಘುನಂದನ್, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಎಸ್.ಸುರೇಶಾಚಾರ್ ಇತರರಿದ್ದರು.