ಕಾಲಮಿತಿಯೊಳಗೆ ವಿದ್ಯುತ್ ಟಿಸಿ ದುರಸ್ತಿಪಡಿಸಿ

srl sabhe
ಶಿರಾಳಕೊಪ್ಪ ಸಮೀಪದ ಮಾಳಗೊಂಡನಕೊಪ್ಪದಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರಾದ ಪ್ಯಾಟಿ ಈರಣ್ಣ, ರಾಜಣ್ಣ, ಪುಟ್ಟನಗೌಡ, ರಾಜು ಇತರರಿದ್ದರು.
Published on

ಶಿರಾಳಕೊಪ್ಪ: ರೈತರ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟು 24 ತಾಸಿನೊಳಗೆ ದುರಸ್ತಿ ಮಾಡಿ ರೈತರಿಗೆ ನೀಡಬೇಕೆಂಬ ಸರ್ಕಾರದ ನಿರ್ದೇಶನವಿದ್ದರೂ ಶಿಕಾರಿಪುರ ಮತ್ತು ಶಿರಾಳಕೊಪ್ಪ ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ ಹೇಳಿದರು.

ಪಟ್ಟಣ ಸಮೀಪದ ಮಾಳಗೊಂಡನಕೊಪ್ಪದಲ್ಲಿ ರೈತ ಮುಖಂಡರೊಡನೆ ಸಭೆ ನಡೆಸಿ ಮಾತನಾಡಿದ ಅವರು, ಈ ಭಾಗದಲ್ಲಿ ಟಿ.ಸಿ ಸುಟ್ಟು ಎಂಟು ದಿನ ಕಳೆದರೂ ದುರಸ್ತಿಯಾಗುತ್ತಿಲ್ಲ. ಬಿಸಿಲಿನ ತಾಪ ಏರುತ್ತಿದ್ದು, ನಾಟಿ ಮಾಡಿದ ಭತ್ತ, ತೆನೆ ಕಟ್ಟುವ ಹಂತದಲ್ಲಿರುವ ಮೆಕ್ಕೆಜೋಳಕ್ಕೆ ನೀರಿನ ಅಗತ್ಯವಿದೆ. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಇಲ್ಲವಾದರೆ ಮೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಹಾಲಿನ ಪ್ರೋತ್ಸಾಹ ಧನ 2 ರೂ. ನೀಡಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ 3 ರೂ. ಸೇರಿಸಿ ಒಟ್ಟು 5 ರೂ. ರೈತರಿಗೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇದು ಭರವಸೆಯಾಗಿಯೇ ಉಳಿದಿದೆ. ರೈತರ ಪರ, ಸಾಮಾಜಿಕ ನ್ಯಾಯ ನೀಡಬೇಕಾದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ರಾಜಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನಗೌಡ, ತಾಲೂಕು ಕಾರ್ಯದರ್ಶಿ ರಾಜು ತಾಳಗುಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net