'ಮೋದಿಯವರನ್ನು ಘಟಾಘಟ್​ ಅಂತ ತೆಗೆಯಿರಿ, ನಿಮ್ಮ ಇಂಜಿನ್‌ಗಳು ಖಟಾಖಟ್​ ಅಂತ ಚಲಿಸುತ್ತವೆ': ರಾಹುಲ್‌ ಗಾಂಧಿ

rahul
Published on

ಜಲಂಧರ್: ಸಂವಿಧಾನವು ಪುಸ್ತಕವಲ್ಲ ಮತ್ತು ಆಧುನಿಕ ಭಾರತದಲ್ಲಿ ಗುರುನಾನಕ್ ಅವರ ಸಿದ್ಧಾಂತದ ಪ್ರಾತಿನಿಧ್ಯ ತೋರುವ ಗ್ರಂಥವಿದ್ದಂತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಜೂನ್ 1 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ 7 ನೇ ಹಂತದ ಪ್ರಚಾರದ ಕೊನೆಯ ದಿನವಾದ ಗುರುವಾರ(ಮೇ 30)ರಂದು ಕಾಂಗ್ರೆಸ್ ನಾಯಕ ಪಂಜಾಬ್​ನ ಶಹೀದ್ ಭಗತ್ ಸಿಂಗ್ ನಗರ ಜಿಲ್ಲೆಯ ಕಹ್ಮಾ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಂವಿಧಾನ ಬದಲಿಸಲು ಮುಂದಾಗಿರುವ ಆರೆಸ್ಸೆಸ್ ಮತ್ತು ಬಿಜೆಪಿ ಆ ಚಿಂತನೆಯ ಮೇಲೆ ದಾಳಿ ನಡೆಸುತ್ತಿದ್ದೇವೆ. ಈ ಲೋಕಸಭೆ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ ಎಂದು ಬಣ್ಣಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿ ರಾಹುಲ್ ಗಾಂಧಿ, "ಖಟಾಖಾಟ್ ಎಂಜಿನ್ ಪ್ರಾರಂಭವಾಗುತ್ತದೆ ... ಅದಕ್ಕೂ ಮೊದಲು ನೀವು ಮೋದಿ ಘಟಾಘಟ್​ ಅನ್ನು ತೆಗೆದುಹಾಕಬೇಕು" ಎಂದು ಹೇಳಿದರು.

ಸಾರ್ವಜನಿಕ ವಲಯದಲ್ಲಿ ಗುತ್ತಿಗೆ ಉದ್ಯೋಗದ ಹೊಸ ಟ್ರೆಂಡ್ ಬಂದಿದ್ದು, ಇದಕ್ಕೆ ಕಡಿವಾಣ ಹಾಕುತ್ತೇವೆ ಎಂದರು.

"ಡ್ರಗ್ಸ್ ಹಾವಳಿಯ ವಿಷಯವನ್ನು ನಾನು ಮೊದಲು ಎತ್ತಿದ್ದೆ ಮತ್ತು ಎಲ್ಲರೂ ಅದನ್ನು ಗೇಲಿ ಮಾಡಿದರು. ನಾವು ಅದನ್ನು ಕೊನೆಗೊಳಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಸ್ಥಳೀಯರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಮೋದಿ ಸರ್ಕಾರವು ದೇಶದ ಆರ್ಥಿಕತೆಯ ಮೇಲೆ ವಿಶೇಷವಾಗಿ ಕುಶಲಕರ್ಮಿಗಳ ಮೇಲೆ ಗಧಾಪ್ರಹಾರ ನಡೆಸಿದೆ ಎಂದು ಹೇಳಿದರು.

"ಮೋದಿ ದೊಡ್ಡ ಕೈಗಾರಿಕೋದ್ಯಮಿಗಳ ಪರವಾಗಿದ್ದಾರೆ. ತಪ್ಪು ಜಿಎಸ್ಟಿ ನೀತಿಗಳಿಂದಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಇಂಡಿ ಒಕ್ಕೂಟದಿಂದ ರೈತರಿಗೆ ಬೆಂಬಲ ಸಿಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net