ಹಬ್ಬಗಳಾಚರಣೆಯಿಂದ ಸಂಬಂಧ ಗಟ್ಟಿ

24 nrp 1
ಎನ್.ಆರ್.ಪುರ ತಾಲೂಕು ಶೆಟ್ಟಿಕೊಪ್ಪ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಂ.ಜಗದೀಶ್, ಪದಾಧಿಕಾರಿಗಳನ್ನು ನ್ಮಾನಿಸಲಾಯಿತು. ಎನ್.ಎಂ.ಕಾಂತರಾಜ್, ಎಸ್.ಎಸ್.ಸೋಮಣ್ಣ, ಕೆ.ಜಿ.ಲೋಹಿತಾಶ್ವ, ಎನ್.ಎಲ್.ತೀರ್ಥೇಶ್ ಇತರರಿದ್ದರು.
Published on

ಎನ್.ಆರ್.ಪುರ: ಹಬ್ಬಗಳು ಮನಸ್ಸಿಗೆ ಸಂತಸ ಕೊಡುವುದರ ಜತೆಗೆ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್ ಅಭಿಪ್ರಾಯಪಟ್ಟರು.

ಭಾನುವಾರ ತಾಲೂಕಿನ ಶೆಟ್ಟಿಕೊಪ್ಪದ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ ವಿದ್ಯಾಗಣಪತಿ ವಿಸರ್ಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗೌರಿ-ಗಣೇಶ ಹಬ್ಬ ಗ್ರಾಮೀಣ ಭಾಗದ ಜನರಿಗೆ ವಿಶೇಷ. ಗೌರಿ ಹಬ್ಬದಂದು ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಬಾಗಿನ ರೂಪದಲ್ಲಿ ವಿವಿಧ ಉಡುಗೊರೆ ನೀಡಲಾಗುತ್ತದೆ. ನಮ್ಮಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಗಣೇಶೋತ್ಸವ ಆಚರಿಸುತ್ತಿದ್ದೇವೆ. ಶಾಂತಿ, ಸೌಹಾರ್ದಕ್ಕೂ ಗಣೇಶ ಹಬ್ಬ ಮಾದರಿ ಎಂದರು.
ಸೇವಾ ಸಮಿತಿ ಅಧ್ಯಕ್ಷ ಎಂ.ಜಗದೀಶ್ ಮಾತನಾಡಿ, ಗಣೇಶನನ್ನು ಪ್ರತಿಷ್ಠಾಪಿಸಲು ಎಲ್ಲ ಧರ್ಮೀಯರೂ ಸಹಕಾರ ನೀಡಿದ್ದಾರೆ. ಊರಿನಲ್ಲಿ 7 ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಡೆ ಸಂತಸ ಮನೆ ಮಾಡಿತ್ತು. ಅನೇಕ ಕಾರ್ಯಕ್ರಮಗಳ ಮೂಲಕ ಜನರು ಒಗ್ಗೂಡುವಂತಾಗಿತ್ತು. ಗ್ರಾಮೀಣ ಭಾಗದ ಅನೇಕ ಕ್ರೀಡೆಗಳು ಜನರಿಗೆ ಮುದ ನೀಡಿದ್ದವು ಎಂದು ಹೇಳಿದರು.
ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಬಾರಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಿದ್ದರಿಂದ ಸಮಿತಿ ಅಧ್ಯಕ್ಷ ಎಂ.ಜಗದೀಶ್ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಮಿತಿ ಸ್ಥಾಪಕ ಅಧ್ಯಕ್ಷ ಎಸ್.ಎಸ್.ಸೋಮಣ್ಣ, ಮಾಜಿ ಅಧ್ಯಕ್ಷರಾದ ಕೆ.ಜಿ.ಲೋಹಿತಾಶ್ವ, ಬಿ.ಆರ್.ವೆಂಕಟೇಶ್, ಎ.ಡಿ.ಉಮೇಶ್, ಬಿ.ಎಲ್.ನಿಶಾಂತ್, ಅನೂಪ್‌ಕುಮಾರ್, ಎನ್.ಎಲ್.ತೀರ್ಥೇಶ್, ಕಿರಣ್, ಗ್ರಾಪಂ ಸದಸ್ಯೆ ಪೂರ್ಣಿಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net