

Relationship : ವೈವಾಹಿಕ ಅಥವಾ ಪ್ರೀತಿ ಎರಡರಲ್ಲಿ ನೀವು ಯಾವುದೇ ಸಂಬಂಧದಲ್ಲಿದ್ದರೂ ನಿಮ್ಮ ಸಂಗಾತಿ ಜತೆ ಬಹಳಷ್ಟು ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕಾಗುತ್ತದೆ. ಆ ರೀತಿ ಹಂಚಿಕೊಳ್ಳುವುದರಿಂದ ಬಾಂಧವ್ಯ ಭಾವನಾತ್ಮಕವಾಗಿ ಮತ್ತಷ್ಟು ಗಟ್ಟಿಯಾಗುತ್ತದೆ. ಹಾಗಾಂತ ಎಲ್ಲವನ್ನು ಹಂಚಿಕೊಳ್ಳುವುದು ಒಳ್ಳೆಯದಲ್ಲ, ಕೆಲವೊಮ್ಮೆ ನೆಗಿಟಿವ್ ಪರಿಣಾಮಗಳನ್ನು ಸಹ ಉಂಟುಮಾಡಬಹುದು.
ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಎಂದಿಗೂ ಹಂಚಿಕೊಳ್ಳಬಾರದ ಕೆಲವು ವಿಷಯಗಳಿವೆ. ಅವು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
* ಪ್ರತಿಯೊಬ್ಬರಿಗೂ ತಮ್ಮದೇಯಾದ ಹಳೆಯ ನೆನಪುಗಳಿರುತ್ತವೆ. ಹಿಂದಿನ ಸಂಬಂಧಗಳೂ ಇವೆ. ನಿಮ್ಮ ಪ್ರಸ್ತುತ ಸಂಗಾತಿಯೊಂದಿಗೆ ಆ ಸಂಬಂಧಗಳನ್ನು ಎಂದಿಗೂ ಚರ್ಚಿಸಬೇಡಿ. ವಿಶೇಷವಾಗಿ, ನಿಮ್ಮ ಸಂಗಾತಿಯನ್ನು ನಿಮ್ಮ ಮಾಜಿ ಗೆಳತಿ/ಗೆಳೆಯರೊಂದಿಗೆ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಬೇಡಿ.
* ನಿಮ್ಮ ಸಂಗಾತಿಯ ಬಗ್ಗೆ ಸಂಬಂಧಿಕರು ಅಥವಾ ಸ್ನೇಹಿತರು ಏನಾದರೂ ಹೇಳುತ್ತಾರೆ ಎಂದು ಭಾವಿಸೋಣ. ಅದನ್ನು ನೇರವಾಗಿ ನಿಮ್ಮ ಸಂಗಾತಿಯ ಬಳಿ ಹೋಗಿ ಹೇಳಬಾರದು. ಇದರಿಂದ ನಿಮ್ಮ ಸಂಗಾತಿಯ ಮನಸ್ಸು ನೋಯಬಹುದು.
* ನಿಮ್ಮ ಸಂಗಾತಿಗೆ ಸುಂದರವಾಗಿಲ್ಲ ಅಥವಾ ನೀವು ಆಕರ್ಷಕವಾಗಿ ಕಾಣುತ್ತಿಲ್ಲ ಎಂಬ ನೆಗೆಟಿವ್ ಕಾಮೆಂಟ್‌ಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಆಗಾಗ ನಿಮ್ಮ ಸಂಗಾತಿಯನ್ನು ಹೊಗಳಬೇಕು. ಇದರಿಂದ ನಿಮ್ಮ ಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
* ಪ್ರತಿಯೊಬ್ಬರಲ್ಲೂ ಕೆಲವು ಕೆಟ್ಟ ಗುಣಗಳಿರುತ್ತವೆ. ಎಲ್ಲರೂ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿಯ ಕುಟುಂಬದ ಕೆಲ ಸಣ್ಣಪುಟ್ಟ ಅಭ್ಯಾಸಗಳು ನಿಮಗೆ ಇಷ್ಟವಾಗದಿದ್ದರೆ, ಅದನ್ನು ಅವರೊಂದಿಗೆ ಚರ್ಚಿಸಬೇಡಿ.
* ಮದುವೆಯ ನಂತರವೂ ಕ್ರಶ್ ಫೀಲಿಂಗ್ಸ್ ಇರುವುದು ಸಹಜ. ನಿಮಗೆ ಅಂತಹ ಭಾವನೆಗಳಿದ್ದರೆ, ಅದನ್ನು ನಿಮ್ಮ ಸಂಗಾತಿಗೆ ಯಾವುದೇ ಕಾರಣಕ್ಕೂ ತಿಳಿಸಬೇಡಿ.
* ಸಂಗಾತಿಯ ಮುಂದೆ ಯಾವುದೇ ಕಾರಣಕ್ಕೂ ಬೇರೊಬ್ಬನ್ನು ಹೊಗಳಬೇಡಿ. ಇದರಿಂದ ಅವರಲ್ಲಿ ಕೀಳರಿಮೆ ಭಾವನೆ ಮೂಡಿ, ಮನಸ್ಸಿಗೆ ನೋವಾಗಬಹುದು.