ಅಂದು ಹರಿದಾಡಿದ್ದ ಸುದ್ದಿ ನೂರಕ್ಕೆ ನೂರರಷ್ಟು ಸತ್ಯ: ಅಚ್ಚರಿಯ ಹೇಳಿಕೆ ನೀಡಿದ ಶ್ರುತಿ ಹಾಸನ್! Shruti Haasan ​

Shruti Haasan
Published on

Shruti Haasan : ಸಕಲಕಲಾವಲ್ಲಭ ಕಮಲ್​ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್​, ಗ್ಲಾಮರ್​ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಅಂದಹಾಗೆ ತಾರೆಯರ ಬದುಕು ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಭಿನ್ನವಾಗಿರುತ್ತದೆ. ಅದಕ್ಕೆ ಶ್ರುತಿ ಹಾಸನ್ ಕೂಡ ಹೊರತಾಗಿಲ್ಲ. ಏಕೆಂದರೆ, ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸಾಕಷ್ಟು ಸುದ್ದಿಯಾಗುತ್ತಿರುತ್ತಾರೆ.

ಎರಡು ವರ್ಷ ಡೇಟಿಂಗ್​ ಮಾಡಿ ಬಾಯ್​ಪ್ರೆಂಡ್​ ಮೈಕಲ್​ ಕೊರ್ಸಲೆ ಜತೆ ಬ್ರೇಕಪ್​ ಮಾಡಿಕೊಂಡಿದ್ದರು. ಇದೀಗ ಬಾಯ್​ಫ್ರೆಂಡ್​ ಶಂತನು ಹಜಾರಿಕಾ ಜತೆಯೂ ಸಂಬಂಧ ಮುರಿದುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಶ್ರುತಿ ಜೀವನದಲ್ಲಿ ಅನೇಕರು ಬಂದು ಹೋಗಿದ್ದಾರೆ. ಸದ್ಯ ಶ್ರುತಿ ಹಾಸನ್ ಅವರ ಬಾಯ್ ಫ್ರೆಂಡ್ ಹುದ್ದೆ ಖಾಲಿ ಇದೆ. ಹೀಗಾಗಿ ಮತ್ತೆ ಸಿನಿಮಾಗಳತ್ತ ಶ್ರುತಿ ಬಿಜಿಯಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ, ಇತ್ತೀಚಿನ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ರುತಿ, ತನ್ನ ಕುಡಿತದ ಚಟಕ್ಕೆ ನನ್ನ ಅಪ್ಪ-ಅಮ್ಮನೇ ಕಾರಣರಾಗಿದ್ದರು ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನನ್ನ ಹೆತ್ತವರು ಡಿವೋರ್ಸ್​ ಆದಾಗ ನನಗೆ 18 ವರ್ಷ ವಯಸ್ಸಾಗಿತ್ತು. ಅದು ಬಾಲ್ಯದಿಂದ ಪ್ರೌಢಾವಸ್ಥೆಗೆ ಪರಿವರ್ತನೆಯಾಗುವ ಸಮಯ. ಆ ಸಂದರ್ಭದಲ್ಲೇ ನನ್ನ ಹೆತ್ತವರು ಬೇರೆಯಾದಾಗ ನಾನು ಕುಗ್ಗಿ ಹೋದೆ. ಈ ಘಟನೆಯಿಂದಾಗಿ ನಾನು ಕುಡಿತದ ಚಟಕ್ಕೆ ಬಿದ್ದೆ. ಅಲ್ಲದೆ, ಖಿನ್ನತೆಗೆ ಒಳಗಾಗಿ ಹುಚ್ಚು ಹಿಡಿದಂತೆ ಆಡಿದೆ ಎಂದು ಶ್ರುತಿ ಹೇಳಿದ್ದಾರೆ.

ಆ ಸಮಯದಲ್ಲಿ ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ಹರಿದಾಡಿತು. ಹೇಳಬೇಕೆಂದರೆ ಆ ಸುದ್ದಿ ನೂರಕ್ಕೆ ನೂರರಷ್ಟು ನಿಜವಾಗಿತ್ತು. ಆದರೆ, ಇದಕ್ಕೆ ಕಾರಣ ಏನು ಎಂಬುದು ಹಲವರಿಗೆ ತಿಳಿದಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ನನ್ನ ಹೆತ್ತವರ ವಿಚ್ಛೇದನ. ಇದರಿಂದ ನನ್ನ ಹೃದಯದಲ್ಲಿ ತುಂಬಾ ನೋವಾಗಿದೆ ಎಂದು ಶ್ರುತಿ ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಶ್ರುತಿ ಅವರ ನಟನೆಯ ಸಲಾರ್​ 1 ಸಿನಿಮಾ ಕೊನೆಯದಾಗಿ ಬಿಡುಗಡೆಯಾಯಿತು. ಸದ್ಯ ಅವರು ರಜಿನಿಕಾಂತ್ ಅಭಿನಯದ ಕೂಲಿ ಹಾಗೂ ಸಲಾರ್​ ಭಾಗ 2 ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net