ರಾಷ್ಟ್ರೀಯ ಪಕ್ಷಗಳನ್ನು ಎದುರಿಸಬೇಕಾದ್ರೆ ಕನ್ನಡ ನಾಡಿನಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು: ಎಚ್​ಡಿಕೆ

Untitled design (40)
Published on

ಬೆಂಗಳೂರು: ಇಂದು ಬೆಂಗಳೂರಿನ ತಾವರೆಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ನಾಯಕ ಎಚ್​.ಡಿ. ಕುಮಾರಸ್ವಾಮಿ, ರಾಷ್ಟ್ರೀಯ ಪಕ್ಷಗಳನ್ನು ಎದುರಿಸಬೇಕಾದ್ರೆ, ಕನ್ನಡ ನಾಡಿನಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

"ಈ ಕಾಂಗ್ರೆಸ್‌ ಸರ್ಕಾರದಿಂದ ನಿಮಗೆ ಏನು ದೊರಯುವುದಿಲ್ಲ. ಇವರ ಸರ್ಕಾರ ಈಸ್ಟ್ ಇಂಡಿಯಾ ಕಂಪೆನಿಯ ರೀತಿ, ಅವರಿಂದ ತಾನೇ ಇವರು ಅಧಿಕಾರ ಪಡೆದಿದ್ದು, ಹಾಗಾಗಿ ಇವರು ಸಹ ಈಸ್ಟ್ ಇಂಡಿಯಾ ಕಂಪೆನಿಯ ರೀತಿ ಆಗಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ನಾವು ಎದುರಿಸಬೇಕಾದರೆ, ಕನ್ನಡ ನಾಡಿನಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು. ಬಿಜೆಪಿಯವರು ವಿಪಕ್ಷ ನಾಯಕನನ್ನು ಮಾಡಲು, ರಾಜ್ಯಾಧ್ಯಕ್ಷ ಮಾಡಲು ದೆಹಲಿಯಲ್ಲಿ ಅರ್ಜಿಹಾಕಿ ಕೂರಬೇಕು" ಎಂದು ಹೇಳಿದರು.

ಗುತ್ತಿಗೆದಾರರು, ವರ್ಗಾವಣೆ ದಂಧೆ ಬಗ್ಗೆ ಮಾತನಾಡಿದ ಎಚ್​ಡಿಕೆ, "ಪೋಲಿಸರು ತಾವರೆಕೆರೆ ಪೋಲಿಸ್ ಠಾಣೆಗೆ 70 ಲಕ್ಷ ರೂ. ಕೊಟ್ಟು ಬಂದ್ರೆ ಅವನು ವಸೂಲಿ ಮಾಡಬೇಕಾದ್ರೆ ನಿಮ್ಮನ್ನ ಅಡ್ಡಹಾಕ್ತಾರೆ. ನಮ್ಮ ಕಾಲದಲ್ಲಿ ವರ್ಗಾವಣೆ ಆಗಿಲ್ವಾ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಸಿದ್ದರಾಮಯ್ಯನವರೇ ನನ್ನ ಕಾಲದಲ್ಲಿ ವರ್ಗಾವಣೆಯಾಗಿದೆ, ಆದರೆ ನಿಮ್ಮ ರೀತಿಯಲ್ಲಿ ವರ್ಗಾವಣೆ ಮಾಡಿಲ್ಲ. ನಾನು ಒಂದೇ ಒಂದು ವರ್ಗಾವಣೆ ದಂಧೆ ನಡೆಸಿರುವ ಬಗ್ಗೆ ಸಾಬೀತು ಮಾಡಿದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ" ಎಂದು ಸಿಎಂಗೆ ನೇರ ಸವಾಲ್​ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net