

ನವದೆಹಲಿ: ಪ್ರಚಾರದ ಹುಚ್ಚಿಗೆ ಬಿದ್ದು ರೀಲ್ಸ್ ಮಾಡುವುದು, ಅದಕ್ಕಾಗಿ ಪ್ರಾಣ ಪಣಕ್ಕಿಡುವುದು, ಇನ್ನೊಬ್ಬರ ಪ್ರಾಣ, ಆಸ್ತಿಗೆ ಹಾನಿಯುಂಟು ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಹೀಗೆ ರೀಲ್ ಮಾಡುವವರ ಹಿಂದೆ ಕಾನೂನು ಹಿಂಬಾಲಿಸುತ್ತದೆ ಎಂಬ ಅರಿವು ಅಂತಹವರಿಗೆ ಇರುವುದಿಲ್ಲ...ಹೌದು, ಇದಕ್ಕೆ ಉತ್ತಮ ನಿದರ್ಶನ ಇಲ್ಲಿದೆ. ಇಲ್ಲಿನ ಗುರಗಾಂವ್ ದಲ್ಲಿ ಮಾಡಿದ್ದ ಕಾರ್ ಸ್ಟಂಟ್ ವಿಡಿಯೋ ವೈರಲ್ ಆಗಿದ್ದು, ಸ್ಟಂಟ್ ಮಾಡಿದ ಮೂವರು ಜೈಲುಪಾಲಾಗಿದ್ದಾರೆ.
ಇದನ್ನೂ ಓದಿ: ಗದ್ದೆಗಿಳಿದು ಭತ್ತ ಕಟಾವು ಮಾಡಿದ ರಾಹುಲ್ ಗಾಂಧಿ
ಇನ್‌ಸ್ಟಾಗ್ರಾಮ್ ರೀಲ್ ಮೂಲಕ ಫೇಮಸ್ ಆಗಬೇಕೆಂಬ ಆಸೆಗೆ ಬಿದ್ದು ಮೂವರು ಯುವಕರು ರಸ್ತೆಯಲ್ಲಿ 3ಕಾರ್ಗಳನ್ನು ಬಳಸಿ ರಿವರ್ಸ್ ಗೇರ್‌ನಲ್ಲಿ ಹಾಡು ಕೇಳಿಕೊಂಡು ಓಡಿಸುತ್ತಿರುವುದು, ಬಳಿಕ ಸ್ಟಂಟ್ ಮಾಡಿ ರೀಲ್ ಅನ್ನು ಚಿತ್ರೀಕರಿಸಿದ್ದದುದು ಕಂಡುಬಂದಿತ್ತು. ಇದು ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು.
ಬಳಿಕ ಈ ವೀಡಿಯೊವನ್ನು ಯುವಕರು ಇನ್ ಸ್ಟಾಗ್ರಾಮ್ ದಲ್ಲಿ ಹಾಕಿದ್ದರು. ವೀಡಿಯೊ ವೈರಲ್ ಆದ ನಂತರ ಗುರಗಾಂವ್ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ 3 ಕೆಂಪು ಕಾರುಗಳಲ್ಲಿ ಸ್ಟಂಟ್ ಮಾಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ನಂತರ ಮೂವರು ಯುವಕರನ್ನು ಬಂಧಿಸಿ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದ್ದಾದರು.
ಸ್ಟಂಟ್ ಮಾಡಿದ ಸ್ವಿಫ್ಟ್ ಕಾರ್ನ ಬಣ್ಣವನ್ನು ಬಿಳಿಯ ಬಣ್ಣದಿಂದ ಕೆಂಪು ಬಣ್ಣಕ್ಕೆ ಬದಲಾಯಿಸಲಾಗಿತ್ತು. ಅ.23ರಂದು ಕಾರ್ ಗಳನ್ನು ಅತಿವೇಗ, ಅಜಾಗರೂಕತೆಯಿಂದ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಅವರು ಕಾರುಗಳನ್ಲ್ಲಿನು ಸ್ಟಂಟ್ ಮಾಡುತ್ವಾತ, ರೀಲ್ ತಯಾರಿಸುತ್ತಿದ್ದರು ಎಂದು ಸಹಾಯಕ ಪೊಲೀಸ್ ಕಮಿಷನರ್ ಕಪಿಲ್ ಅಹ್ಲಾವತ್ ಹೇಳಿದ್ದಾರೆ.
ಇಂತಹ ವಿಡಿಯೋಗಳನ್ನು ಮಾಡಲು ಹೋಗಬೇಡಿ ಎಂದು ನಾನು ಯುವಕರಲ್ಲಿ ಮನವಿ ಮಾಡುತ್ತೇನೆ. ಇದು ನಿಮಗೆ ಅಪಾಯಕಾರಿ. ಅಲ್ಲದೆ ನೀವು ಇತರರನ್ನು ಸಹ ಪ್ರಾಣಾಪಾಯಕ್ಕೆ ಒಡ್ಡುತ್ತೀರಿ ಎಂದು ಎಚ್ಚರಿಸಿದ್ದಾರೆ.
ಇನ್ನು ಗುರುಗ್ರಾಮ್ ದಲ್ಲಿ ಇಂತಹ ಪ್ರಕರಣಗಳು ಇದೇ ಮೊದಲಲ್ಲ. ಇಂತಹ ಅಪಾಯಕಾರಿ ಸ್ಟಂಟ್‌ಗಳಿಗೆ ಇಲ್ಲಿನ ಎಲ್ಲ ರಸ್ತೆಗಳು ಸಾಕ್ಷಿಯಾಗಿವೆ. ವಾಹನಗಳ ಟಾಪ್ ಮೇಲೆ ಪಟಾಕಿ ಸಿಡಿಸುವುದು ಸೇರಿದಂತೆ ಇಂತಹ ಹಲವು ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು.