ಭಯಾನಕ ಲುಕ್​ನಲ್ಲಿ ನಟಿ ಹನ್ಸಿಕಾ; 'ಗಾರ್ಡಿಯನ್'​​ಗೆ ಫ್ಯಾನ್ಸ್​ ಕಾತರ!

Untitled-design-2023-10-29T170143.040
Published on

ತಮಿಳುನಾಡು: ತಮಿಳು ಮತ್ತು ತೆಲುಗು ಚಿತ್ರರಂಗದ ನಟಿ ಹನ್ಸಿಕಾ ಮೋಟ್ವಾನಿ ಇದೀಗ ಹಾರರ್​ ಜಾನರ್​ನ 'ಗಾರ್ಡಿಯನ್'​ ಸಿನಿಮಾದ ಮುಖೇನ ಮತ್ತೊಮ್ಮೆ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳನ್ನು ಮನರಂಜಿಸಲು ಸಜ್ಜಾಗಿದ್ದಾರೆ.

ಹೆಚ್ಚಾಗಿ ರೊಮ್ಯಾಂಟಿಕ್​, ಮಾಸ್​ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಹನ್ಸಿಕಾ ಇದೀಗ ಬಹುದಿನಗಳ ನಂತರ ಮತ್ತೊಮ್ಮೆ ಹಾರರ್​ ಚಿತ್ರದ ಮೂಲಕ ತೆರೆ ಮೇಲೆ ಬರಲಿದ್ದಾರೆ. ಈ ಹಿಂದೆ 'ಅರಮನೆ' ಎಂಬ ಹಾರರ್​ ಕಥಾಹಂದರದಲ್ಲಿ ನಟಿಸಿದ್ದ ನಟಿ ಈಗ ಅದೇ ಜಾನರ್​ನಲ್ಲಿ ತಯಾರಾದ 'ಗಾರ್ಡಿಯನ್'​ನಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ವೆಬ್ ಸರಣಿ 'MY3' ನಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಿದ್ದ ನಟಿ, ಒಟಿಟಿ ವೀಕ್ಷಕರನ್ನು ಮನರಂಜಿಸುವಲ್ಲಿ ಕೊಂಚ ವಿಫಲರಾದರು. ಆದಾಗ್ಯೂ,  ತಮ್ಮ ಅಭಿಮಾನಿಗಳು ಮತ್ತು ವೀಕ್ಷಕರನ್ನು ಇದೀಗ ದೊಡ್ಡ ಪರದೆಯ ಮೇಲೆ 'ಗಾರ್ಡಿಯನ್' ಮೂಲಕ ಹೆದರಿಸಲು ಸಜ್ಜಾಗಿದ್ದಾರೆ. ಶಬರಿ ಮತ್ತು ಗುರು ಸರವಣನ್ ನಿರ್ದೇಶನದ ಈ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ.

ಚಿತ್ರದ ಟೀಸರ್ ಬಗ್ಗೆ ನಟಿಯ ಅಭಿಮಾನಿಗಳು ಕಾತರ ವ್ಯಕ್ತಪಡಿಸಿದ್ದರು. ಅದರಂತೆಯೇ ಟೀಸರ್ ನಾಳೆ (ಅ.30) ಅನಾವರಣಗೊಳ್ಳಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ಬಗ್ಗೆ ಸ್ವತಃ ಹನ್ಸಿಕಾ ಕೂಡ ತಮ್ಮ ಇನ್ಸ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟರ್​ ಹಾಕಿ, ಅನೌನ್ಸ್​ ಮಾಡಿದ್ದಾರೆ. ಆದ್ರೆ, ಯಾವ ವೇಳೆಗೆ ರಿಲೀಸ್ ಆಗಲಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ನಿರ್ದೇಶಕ ವಿಜಯ್ ಚಂದರ್ ಗಾರ್ಡಿಯನ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸ್ಯಾಮ್ ಸಿ.ಎಸ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net