ಸುಪ್ರೀಂಕೋರ್ಟ್ ರಜೆ ಕಡಿತ

Supreme Court
Published on

ನವದೆಹಲಿ: ಮೇ 17ರಂದು ಆರಂಭವಾಗಲಿರುವ ಏಳು ವಾರಗಳ ಬೇಸಿಗೆ ರಜೆಯನ್ನು ಕಡಿತ ಮಾಡಲು ಹಾಗೂ ವಸ್ತ್ರ ಸಂಹಿತೆ ಜಾರಿಗೊಳಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಕರೊನಾ ಲಾಕ್​ಡೌನ್​ನಿಂದಾಗಿ ನಷ್ಟವಾಗಿರುವ ಸಮಯವನ್ನು ಸರಿಹೊಂದಿಸಲು ಹಾಗೂ ಸೋಂಕು ಹರಡುವುದನ್ನು ತಡೆಯುವ ಪ್ರಯತ್ನವಾಗಿ ಕೋರ್ಟ್ ಈ ಕ್ರಮಗಳಿಗೆ ಮುಂದಾಗಿದೆ. ರಜೆ ಅವಧಿಯಲ್ಲಿ ವಿಡಿಯೊ ಕಾನ್ಪರೆನ್ಸಿಂಗ್ ಸೌಲಭ್ಯದ ಮೂಲಕ ಕೆಲಸ ಮುಂದುವರಿಸಲು ಅದು ನಿರ್ಧರಿಸಿದೆ. ನ್ಯಾಯಮೂರ್ತಿಗಳು, ವಕೀಲರು ಹಾಗೂ ನ್ಯಾಯಾಲಯ ಸಿಬ್ಬಂದಿ ಧರಿಸುವ ರೋಬ್ ಹಾಗೂ ಗೌನ್​ಗಳು ಕರೊನಾ ವೈರಸ್​ಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವುದರಿಂದ ಹೊಸ ವಸ್ತ್ರ ಸಂಹಿತೆ ಜಾರಿ ಮಾಡಲೂ ಕೋರ್ಟ್ ಚಿಂತಿಸುತ್ತಿದೆ ಎಂದು ಹೇಳಲಾಗಿದೆ. ‘ನ್ಯಾಯಮೂರ್ತಿಗಳು ಮತ್ತು ವಕೀಲರು ತಾತ್ಕಾಲಿಕವಾಗಿ ರೋಬ್​ಗಳನ್ನು ತ್ಯಜಿಸಬೇಕಾಗುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್.ಎ. ಬೊಬ್ಡೆ ಹೇಳಿದ್ದಾರೆ.

ಸಮಿತಿ ಶಿಫಾರಸು ಪರಿಣಾಮ: ನ್ಯಾಯಾಧೀಶರ ಸಮಿತಿಯೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಶಿಫಾರಸು ಮಾಡಿದೆ. ಸಮಿತಿ ಇತ್ತೀಚೆಗೆ ಸಿಜೆಐಗೆ ವರದಿ ಸಲ್ಲಿಸಿತ್ತು. ಲಾಕ್​ಡೌನ್ ಅವಧಿಯಲ್ಲಿ ಹಾಗೂ ಅದರ ನಂತರ ಉನ್ನತ ನ್ಯಾಯಾಲಯ ಕಾರ್ಯ ನಿರ್ವಹಿಸಬೇಕಾದ ರೀತಿಯ ಬಗ್ಗೆ ಸಲಹೆಗಳನ್ನು ನೀಡುವಂತೆ ಸಮಿತಿಗೆ ಸೂಚಿಸಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಖಾತರಿಪಡಿಸುವುದು ಅಗತ್ಯ. ತೀರಾ ಅಪರೂಪದ

ಸಂದರ್ಭದಲ್ಲಿ ಮಾತ್ರವೇ ಕೋರ್ಟ್ ಕಲಾಪಗಳಲ್ಲಿ ಹೆಚ್ಚು ಜನರು ಭಾಗವಹಿಸಲು ಅವಕಾಶ ಕಲ್ಪಿಸಬಹುದು ಎಂದು ಸಮಿತಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net