

ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರ ವಿರುದ್ಧ ಸಿಆರ್ಪಿಎಫ್ ಯೋಧನ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಿನ್ನೆ(ಮಂಗಳವಾರ) ರಾತ್ರಿ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಮನೆ ಮುಂದೆ ಮಾಟ ಮಾಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆಂದು ರಮೇಶ್ ಜಾರಕಿಹೊಳಿ ಬೆಂಬಲಿಗ ರಾಜು ತಳವಾರ ಹಾಗೂ ಅವರ ಗುಂಪಿನ ವಿರುದ್ದ ದೂರಿದ್ದಾರೆ.
ರಾಜಕೀಯ ಒತ್ತಡದ ಹಿನ್ನೆಲೆ ಎಫ್ಐಆರ್ ದಾಖಲಿಸಲು ಪೊಲೀಸರ ಹಿಂದೇಟು ಹಾಕಿದ್ದರಿಂದ ಯೋಧನ ಕುಟುಂಬ ರಾತ್ರಿಯೆಲ್ಲಾ ಠಾಣೆಯಲ್ಲೇ ಕಳೆದಿದೆ. ಕೊನೆಗೆ ಪೊಲೀಸರು ಬೆಳಗ್ಗೆ 3 ಗಂಟೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)