More

    ಕರೊನಾ ಗೆದ್ದ 113 ವರ್ಷದ ಅಜ್ಜಿ ..!

    ಮ್ಯಾಡ್ರಿಡ್ (ಸ್ಪೇನ್): ವಿಶ್ವದಾದ್ಯಂತ ಮರಣ ಮೃದಂಗವನ್ನೇ ಬಾರಿಸುತ್ತಿರುವ ಮಹಾಮಾರಿ ಕರೊನಾ ಸೋಂಕಿನ ವಿರುದ್ಧ ಸ್ಪೇನ್​ ದೇಶದ 113 ವರ್ಷದ ಅಜ್ಜಿ ಗೆದ್ದಿದ್ದಾರೆ!
    ಕರೊನಾ ಪೀಡಿತರ ಸಂಖ್ಯೆ ಮಿತಿಮೀರಿರುವ ಸ್ಪೇನ್​ ದೇಶದಲ್ಲಿ, ಸಾವಿನ ಸಂಖ್ಯೆ 27 ಸಾವಿರ ಗಡಿ ದಾಟಿದೆ. ವಯೋವೃದ್ಧರಿಗೆ ಸೋಂಕು ತಗುಲಿದರೆ ಬದುಕುವ ಸಾಧ್ಯತೆ ಕಡಿಮೆ. ಅಂತಹದ್ದರಲ್ಲಿ ಈ ಅಜ್ಜಿ ಮಾರಕ ರೋಗವನ್ನೇ ಜಯಿಸಿ ಕುತೂಹಲ ಮೂಡಿಸಿದ್ದಾರೆ.

    ಇದನ್ನೂ ಓದಿ VIDEO: ಕಟ್ಟಿಗೆ ತುಂಡಿನಿಂದ ಮರುಜೀವ ಪಡೆದ ಯುವಕ! ವೀಡಿಯೋ ಭಾರಿ ವೈರಲ್​

    ಸ್ಪೇನ್ ದೇಶದ ಅತ್ಯಂತ ಹಿರಿಯ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟ ಮರಿಯಾ ಬ್ರಾನ್ಯಾಸ್, ಹಲವರ ಪ್ರಾಣಹಾನಿ ಸಂಭವಿಸಿದ ಮೂರ್ನಾಲ್ಕು ಘಟನೆಯಲ್ಲೂ ಬದುಕುಳಿದು ಅಚ್ಚರಿ ಮೂಡಿಸಿದ್ದಾರೆ.

    ಸ್ಪೇನ್​ನಲ್ಲಿ 1918-19ರಲ್ಲಿ ಕಾಣಿಸಿಕೊಂಡಿದ್ದ ಸಾಂಕ್ರಾಮಿಕ ರೋಗ ಅಪಾರ ಸಾವು-ನೋವು ಉಂಟು ಮಾಡಿತ್ತು. ಈ ದೇಶದಲ್ಲಿ 1936-39ರಲ್ಲಿ ಸಿವಿಲ್ ವಾರ್ ಕೂಡ ನಡೆದಿತ್ತು. ಇದೆಲ್ಲಕ್ಕೂ ಜೀವಂತ ಸಾಕ್ಷಿಯಂತಿರುವ ಸ್ಪೇನ್​ನ ಹಿರಿಯಜ್ಜಿ ಇಲ್ಲಿನ ಪೂರ್ವ ನಗರದ ಒಲೋಟಾದ ಸಾಂತ ಮರಿಯಾ ಡೆಲ್ ಟುರಾ ಕೇರ್ ಹೋಂನಲ್ಲಿ 20 ವರ್ಷದಿಂದ ನೆಲೆಸಿದ್ದಾರೆ.

    ಇದನ್ನೂ ಓದಿ ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಗೆ ಆಶೀರ್ವದಿಸಿದ ತಂದೆ-ತಾಯಿ!

    ಬ್ರಾನ್ಯಾಸ್ ಅವರಲ್ಲಿ ಕಳೆದ ತಿಂಗಳು ಕರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದರಿಂದ ಕೇರ್ ಹೋಂನಲ್ಲಿ ಪ್ರತ್ಯೇಕ ಕೋಣೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಈ ಆರೈಕೆ ನಿವಾಸದಲ್ಲಿ ನೆಲೆಸಿದ್ದ ಹಲವರು ಸೋಂಕಿಗೆ ಬಲಿಯಾಗಿದ್ದಾರೆ. ಅದೃಷ್ಟವಶಾತ್​ ಸೋಂಕಿನಿಂದ ಹಿರಿಯಜ್ಜಿ ಚೇತರಿಸಿಕೊಂಡಿದ್ದಾರೆ.

    ಕರೊನಾ ಗೆದ್ದ 113 ವರ್ಷದ ಅಜ್ಜಿ ..!
    ಕರೊನಾ ಸೋಂಕಿನಿಂದ ಚೇತರಿಸಿಕೊಂಡ ಸ್ಪೇನ್​ ದೇಶದ ಹಿರಿಯಜ್ಜಿ ಬ್ರಾನ್ಯಾಸ್ ಜತೆ ವೈದ್ಯ ಸಿಬ್ಬಂದಿ.

    ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಆರಂಭಿಕ ಹಂತದಲ್ಲಿಯೇ ಪ್ರತ್ಯೇಕ ಕೋಣೆಯಲ್ಲಿದ್ದರು. ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿದ್ದರು. ಈ ಕೋಣೆಗೆ ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಕವಚ ಧರಿಸಿದ ಒಬ್ಬರಷ್ಟೇ ಪ್ರವೇಶಿಸಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

    ಕಳೆದ ವಾರ ಮತ್ತೊಮ್ಮೆ ಹಿರಿಯಜ್ಜಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕರೊನಾ ವರದಿಯು ನೆಗೆಟಿವ್​ ಬಂದಿದೆ ಎಂದು ಅಲ್ಲಿನ ಮೂಲಗಳು ತಿಳಿಸಿವೆ.

    ಇದನ್ನೂ ಓದಿ ಮತ್ತೆ ಐದು ಸೋಂಕಿತರು ಗುಣಮುಖ

    ಯುಎಸ್​ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1907ರ ಮಾರ್ಚ್ 4ರಂದು ಜನಿಸಿದ್ದ ಮರಿಯಾ ಬ್ರಾನ್ಯಾಸ್ ಮೊದಲನೇ ಮಹಾಯುದ್ಧ ಸಮಯದಲ್ಲಿ ತನ್ನ ಕುಟುಂಬಸ್ಥರ ಜತೆ ದೋಣಿ ಮೂಲಕ ಸ್ಪೇನ್‌ಗೆ ಬಂದು ನೆಲೆಸಿದ್ದರು. ಉತ್ತರ ಸ್ಪೇನ್ ಮೂಲದ ಈಕೆಯ ತಂದೆ ಪತ್ರಕರ್ತರಾಗಿದ್ದರು. ಹಿರಿಯಜ್ಜಿ ಮೂರು ಮಕ್ಕಳ ತಾಯಿ.

    ಹಿರಿಯಜ್ಜಿಯ ಆರೋಗ್ಯದ ಗುಟ್ಟಿನ ಬಗ್ಗೆ ಕುತೂಹಲದಿಂದ ಬ್ರಾನ್ಯಾಸ್​ರನ್ನು ಕೇಳಿದ್ದೆ. ಅದಕ್ಕೆ ಉರತ್ತರಿಸಿದ್ದ ಅಜ್ಜಿ, “ಸುಧೀರ್ಘ ಜೀವನದಲ್ಲಿ ಉತ್ತಮ ಆರೋಗ್ಯ ಪಡೆದ ಅದೃಷ್ಟವಂತೆ ನಾನು” ಎಂದು ಹೇಳಿದ್ದಾಗಿ ಆರೈಕೆ ನಿವಾಸದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಇನ್ನು ಸ್ಪೇನ್ ದೇಶದ ಅತ್ಯಂತ ಹಿರಿಯ ವ್ಯಕ್ತಿ ಬ್ರಾನ್ಯಾಸ್ ಕುರಿತು ಅಲ್ಲಿನ ಮಾಧ್ಯಮಗಳಲ್ಲಿ ಹಲವು ಲೇಖನಗಳೂ ಪ್ರಕಟವಾಗಿವೆ.

    ಇದನ್ನೂ ಓದಿ ಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts