PHOTOS| ಹುಟ್ಟುಹಬ್ಬ ಸಂಭ್ರಮದಲ್ಲಿ ಸನ್ನಿ ಲಿಯೋನ್: ಮಾಜಿ ನೀಲಿ ತಾರೆಯ ಕುತೂಹಲಕಾರಿ ಸಂಗತಿಗಳಿವು!​

Sunny
Published on

ಮಾಜಿ ನೀಲಿ ತಾರೆ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೋನ್ ಅವರಿಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಬಗೆಗಿನ ಕುತೂಹಲಕಾರಿ ಸಂಗತಿಗಳನ್ನು ಫೋಟೋ ಸಹಿತ ಈ ಕೆಳಗೆ ಕಾಣಬಹುದಾಗಿದೆ.

1981ರ ಮೇ 13ರಂದು ಜನಿಸಿದ ಸನ್ನಿ ಲಿಯೋನ್​ ಮೂಲ ಹೆಸರು ಕರೆಂಜಿತ್​ ಕೌರ್​ ವೊಹ್ರಾ

ಸನ್ನಿ ಓರ್ವ ಇಂಡೋ-ಕೆನಡಿಯನ್​ ಮತ್ತು ಅಮೆರಿಕನ್​ ನಟಿ, ಮಹಿಳಾ ಉದ್ಯಮಿಯು ಹೌದು. ಮಾಡೆಲಿಂಗ್​ ಕ್ಷೇತ್ರದಲ್ಲಿಯೂ ಮಿಂಚು ಹರಿಸಿದ್ದ ಸನ್ನಿ ಮಾಜಿ ನೀಲಿ ತಾರೆಯಾಗಿ ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದಾರೆ
ನೀಲಿ ಲೋಕಕ್ಕೆ ಗುಡ್​ ಬೈ ಹೇಳಿದ ಸನ್ನಿ ನಂತರ ಬಾಲಿವುಡ್​ಗೆ ಕಾಲಿಟ್ಟರು. 2011ರಲ್ಲಿ ಹಿಂದಿ ಬಿಗ್​ಬಾಸ್​ ಕಾರ್ಯಕ್ರಮಕ್ಕೆ ಪ್ರವೇಶ ನೀಡಿದ ಸನ್ನಿ ಬಿಗ್​ ಮನೆಯಲ್ಲಿ 49 ದಿನ ಕಳೆದಿದ್ದರು
ಬಿಗ್​ಬಾಸ್​ ಮನೆಯಲ್ಲಿದ್ದಾಗಲೇ ಬಾಲಿವುಡ್​ ನಿರ್ಮಾಪಕ ಮಹೇಶ್​ ಭಟ್, ಅತಿಥಿಯಾಗಿ ಮನೆಗೆ ಭೇಟಿ ನೀಡಿದ್ದ ವೇಳೆ ಜಿಸ್ಮ್​ ಚಿತ್ರದ ಮುಂದವರಿದ ಭಾಗ ಜಿಸ್ಮ್-2​ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ಸನ್ನಿಗೆ ಆಫರ್​ ನೀಡಿದ್ದರು
2012ರ ಆಗಸ್ಟ್ 3ರಂದು ತೆರೆಕಂಡ ಜಿಸ್ಮ್​-2 ಚಿತ್ರ ಟೀಕೆಗಳ ನಡುವೆಯೂ ಗಮನಾರ್ಹ ಯಶಸ್ವಿಯಾಯಿತು. ಮೊದಲ ಚಿತ್ರದಲ್ಲಿ ಸನ್ನಿ ಸಖತ್​ ಬೋಲ್ಡ್​ ಆಗಿ ನಟಿಸಿ, ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದರು
ಜಿಸ್ಮ್​ 2 ಚಿತ್ರದ ಬೆನ್ನಲ್ಲೇ ಸನ್ನಿ ಎಕ್ತಾ ಕಪೂರ್​ ಅವರ ರಾಗಿಣಿ ಎಂಎಂಎಸ್​ ಚಿತ್ರಕ್ಕೆ ಸಹಿ ಹಾಕಿದರು. ಈ ಚಿತ್ರವೂ ಕೂಡ ಸನ್ನಿಗೆ ಮತ್ತಷ್ಟು ಖ್ಯಾತಿಯನ್ನು ತಂದುಕೊಟ್ಟಿತು
ಹಲವು ಐಟಂ ಸಾಂಗ್​ಗಳಲ್ಲೂ ಸನ್ನಿ ಸೊಂಟ ಬಳುಕಿಸಿ ಸಿನಿರಸಿಕರ ಮನಗೆದ್ದಿದ್ದಾರೆ. ಕನ್ನಡದಲ್ಲಿಯೂ ಜೋಗಿ ಪ್ರೇಮ್​ ಅಭಿನಯದ ಡಿಕೆ ಸಿನಿಮಾದ ಶೇಷಮ್ಮ ಹಾಡಿಗೂ ಮತ್ತು ಇಂದ್ರಜಿತ್​ ಲಂಕೇಶ್​ ನಿರ್ದೇಶನದ ಲವ್​ ಯು ಆಲಿಯಾ ಕಾಮಾಕ್ಷಿ... ಕಾಮಾಕ್ಷಿ ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ
ಸದ್ಯ ಸಿನಿಮಾ ಜತೆಗೆ ಸುಖ ದಾಂಪತ್ಯ ಜೀವನ ನಡೆಸುತ್ತಿರುವ ಸನ್ನಿ ಡ್ಯಾನಿಯಲ್​ ವೆಬರ್​ ವರಿಸಿದ್ದು, ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅಲ್ಲದೇ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಮೆಚ್ಚುಗೆಗೂ ಪಾತ್ರರಾಗಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net