ಜನರ ಮೇಲಿನ ಹೊರೆ ಇಳಿಕೆ

skp gst
ಶಿಕಾರಿಪುರದಲ್ಲಿ ಜಿಎಸ್‌ಟಿ ಇಳಿಕೆ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ಡಿ.ಎಲ್.ಬಸವರಾಜ್, ಕರಿಬಸಪ್ಪ ಇತರರಿದ್ದರು.
Published on

ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ತರಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು

ಪಟ್ಟಣದ ಪಕ್ಷದ ಕಚೇರಿಯಲ್ಲಿ ಸೋಮವಾರ ಜಿಎಸ್‌ಟಿ ಇಳಿಕೆ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಇಳಿಕೆ ಮಾಡಿ ನಮ್ಮ ದೇಶದ ಜನರ ಹೊರೆ ಇಳಿಸುವ ಕೆಲಸ ಮಾಡಿದ್ದಾರೆ ಎಂದರು.

ತೆರಿಗೆ ಇಳಿಕೆಯಿಂದ ಹಾಲು, ಮೊಸರಿನಿಂದ ಹಿಡಿದು ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು, ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಿದೆ. ಸುಮಾರು 375 ಪದಾರ್ಥಗಳ ತೆರಿಗೆ ಇಳಿಕೆ ಮಾಡಿದ್ದು ಹೆಚ್ಚಿನ ಅನುಕೂಲವಾಗಿದೆ. ಕೇಂದ್ರ ಸರ್ಕಾರಕ್ಕೆ ನೀವು ಕಟ್ಟುವ ತೆರಿಗೆಯನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ಇಡೀ ಜಿಲ್ಲೆ ಇವತ್ತು ಅಭಿವೃದ್ಧಿಯಿಂದ ಪ್ರಕಾಶಿಸುತ್ತಿದೆ ಎಂದರೆ ನಾವು ಕಟ್ಟಿದ ತೆರಿಗೆ ಹಣದಿಂದ. ಹಿಂದೆ ಇದ್ದವರಿಗೆ ಯಾಕೆ ಅನುದಾನ ತಂದು ಅಭಿವೃದ್ಧಿ ಮಾಡಲು ಆಗಲಿಲ್ಲ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸ್ವಾವಲಂಬಿ ಆಗುವತ್ತ ಮುನ್ನಡೆದಿದೆ. ಒಬ್ಬ ನಾಯಕನಿಗೆ ದೇಶವನ್ನು ಹೇಗೆ ಕಟ್ಟಿ ಬೆಳೆಸಬೇಕು ಎಂಬ ಗುರಿ ಇರಬೇಕು. ಅದನ್ನು ಶತಾಯಗತಾಯ ಮಾಡಿ ಮುಗಿಸುವ ಸಂಕಲ್ಪ ಶಕ್ತಿ ಇರಬೇಕು. ರಾಷ್ಟ್ರದ ಅಭಿವೃದ್ಧಿಯಲ್ಲಿ ದೂರದೃಷ್ಟಿ ಇರಬೇಕು. ಇದು ಮೋದಿ ಅವರಲ್ಲಿರುವ ಬಹುಮುಖ್ಯ ಗುಣ ಎಂದರು.

ಅಭಿವೃದ್ಧಿ ಪಥದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿ ಮುನ್ನೆಡೆಯಬೇಕು. ಜಿಲ್ಲೆಯಲ್ಲಿ ಏರ್‌ಪೋರ್ಟ್, ರೈಲುಮಾರ್ಗ, ಹೆದ್ದಾರಿಗಳು, ಇಎಸ್‌ಐ ಆಸ್ಪತ್ರೆ, ಸಿಗಂದೂರು ಸೇತುವೆ ಸೇರಿ ಹತ್ತಾರು ಕಾರ್ಯಗಳಾಗಿವೆ. ನಾವೆಲ್ಲರೂ ಸ್ವದೇಶಿ ಉತ್ಪನಗಳ ಬಳಕೆಗೆ ಆದ್ಯತೆ ನೀಡೋಣ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಕರಿಬಸಪ್ಪ, ಪಾಂಡುರಂಗ ರಾಯ್ಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್, ಪುರಸಭೆ ಸದಸ್ಯ ರೇಣುಕಸ್ವಾಮಿ, ಪಾಲಾಕ್ಷಪ್ಪ, ಗಿರೀಶ್, ವಸಂತ ಗೌಡ, ವೀರನಗೌಡ, ಬೆಣ್ಣೆ ಪ್ರವೀಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net