ನಾಳೆ ರೆಡ್ಡಿ ಜನ ಸಂಘದಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭ

Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಲಬುರಗಿ ರೆಡ್ಡಿ ಜನ ಸಂಘದಿಂದ ಸೆ.೧೬ ರಂದು ಬೆಳಿಗ್ಗೆ ೧೧ ಕ್ಕೆ ನಗರದ ಕರುಣೇಶ್ವರ ನಗರದ ರಾಮಮಂದಿರ ಹಿಂದುಗಡೆಯಿರುವ ಶಿವಶರಣ ಹರಳಯ್ಯ ಸಭಾ ಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಸೂರ್ಯಕಾಂತರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಸಿದ್ರಾಮರೆಡ್ಡಿ ಘಾಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ೨೦೨೨-೨೩ ನೇ ಸಾಲಿನಲ್ಲಿ ತೇರ್ಗಡೆಯಾದ ಹತ್ತನೇ, ಪಿಯುಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಗದು ಬಹುಮಾನ ಮತ್ತು ೨೦೨೨-೨೩ ನೇ ಸಾಲಿನಲ್ಲಿ ನಿವೃತ್ತಿಗೊಂಡ ಸರಕಾರಿ /ಅರೆ ಸರಕಾರಿ ನೌಕರರ ಸನ್ಮಾನ ಸಮಾರಂಭದ ಸಾನಿಧ್ಯವನ್ನು ಹರಿಹರ ಎರೆಹೊಸಳ್ಳಿ ರೆಡ್ಡಿ ಗುರುಪೀಠದ ಪೂಜ್ಯ ಶ್ರೀ ವೇಮನಾನಂದ ಮಹಾಸ್ವಾಮಿಗಳು ವಹಿಸುವರು. ಸಣ್ಣ ಕೈಗಾರಿಕಾ ಸಚಿವರಾದ ಶರಣಬಸಪ್ಪ ದರ್ಶನಾಪುರ ಸಮಾರಂಭವನ್ನು ಉದ್ಘಾಟಿಸುವರು.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಮುಖ್ಯ ಅತಿಥಿಗಳಾಗಿರುವರು. ರೆಡ್ಡಿ ಜನ ಸಂಘದ ಮುಖಂಡರಾದ ಪ್ರತಾಪರೆಡ್ಡಿ ಬಳ್ಳಾರಿ, ಶೇಖರರೆಡ್ಡಿ ಬೆಂಗಳೂರು, ಪ್ರೊ. ಚೆನ್ನಾರೆಡ್ಡಿ ಪಾಟೀಲ, ಸತೀಶರೆಡ್ಡಿ ಪಾಟೀಲ ರಂಜೋಳ ಸೇಡಂ, ಪ್ರಭಾಕರರೆಡ್ಡಿ ಬೆಂಗಳೂರು, ಶಿವರಾಜ ಪಾಟೀಲ ಕಲಬುರಗಿ, ಡಾ>ರಾಜಶ್ರೀ ವಿಶ್ವನಾಥರೆಡ್ಡಿ ಪಾಟೀಲ, ಮುಖಂಡರಾದ ಕೃಷ್ಣಾರೆಡ್ಡಿ, ಲೇಖಕ ಮಹಿಪಾಲರೆಡ್ಡಿ ಸೇಡಂ ಅತಿಥಿಗಳಾಗಿ ಭಾಗವಹಿಸುವರು. ಕಲಬುರಗಿ ರೆಡ್ಡಿ ಜನ ಸಂಘದ ಗೌರವಾಧ್ಯಕ್ಷರಾದ ತಿರುಪತಿರೆಡ್ಡಿ ದೇಸಾಐಇ ವಡಗೇರಾ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net