ಸಣ್ಣ ದ್ವೀಪದ ಕೆಂಪು ಏಡಿಗಳ ಕೆಂಪು ನದಿ ಕಂಡರೆ ನೀವೂ ಗಾಬರಿಯಾಗುತ್ತೀರ..

crab
Published on

ಮುಂದುವರಿದ ಭಾಗ...

ಆಸ್ಟ್ರೇಲಿಯಾ ಖಂಡದಲ್ಲಿ ಅಂದಾಜು 2,000 ಜನರು ವಾಸಿಸುವ ಕ್ರಿಸ್ಮಸ್ ಐಲ್ಯಾಂಡ್ ಎನ್ನುವುದು ಒಂದು ಸಣ್ಣ ದ್ವೀಪ. ಇಲ್ಲಿನ ಕಾಡಿನ ಪ್ರದೇಶದಲ್ಲಿ, ನಸುಗೆಂಪು ಬಣ್ಣದ, 14 ಜಾತಿಯ, ಅಂದಾಜು ನಾಲ್ಕೈದು ಕೋಟಿ ಏಡಿಗಳು ಆಳವಾದ ಬಿಲವನ್ನು ಮಾಡಿಕೊಂಡು ಜೀವಿಸುತ್ತಿವೆ.

ಇವು ಮೂರ್ನಾಲ್ಕು ವರ್ಷಗಳ ವಯಸ್ಸಿಗೆ ಬಂದಾಗ, ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನ ಮೊದಲ ಮಳೆಯ ನಂತರ, ಸಂತಾನಾಭಿವೃದ್ಧಿಗಾಗಿ ಹಿಂಡು ಹಿಂಡಾಗಿ ಹಿಂದೂ ಮಹಾಸಾಗರದ ಬೆಚ್ಚನೆಯ ನೀರಿನ ಕಡೆಗೆ ವಲಸೆ ಹೊರಡುತ್ತವೆ. ಅಲ್ಲಿಯವರೆಗಿನ ದೂರವನ್ನು ಹತ್ತು ಹದಿನೈದು ದಿನಗಳಲ್ಲಿ ಪಯಣಿಸಿ ಎರಡು ಮೂರು ದಿನಗಳಲ್ಲಿ ಮೊಟ್ಟೆಗಳನ್ನು ಸಮುದ್ರದ ನೀರಿಗೆ ಬಿಟ್ಟು ಮರು ಪ್ರಯಾಣವನ್ನು ಆರಂಭಿಸುತ್ತವೆ.

ಬೆಳಗ್ಗೆ ಅಂದಾಜು ಎಂಟೊಂಬತ್ತು ಗಂಟೆಗೆ ಹೊರಡಲು ಆರಂಭವಾದರೆ ರಸ್ತೆಯ ಮೇಲೆ ಕೆಂಪು ಹಾಸಿಗೆಯನ್ನು ಹಾಸಿರುವ ರೀತಿ ಕಾಣಿಸುತ್ತದೆ. ಆ ಸಮಯದಲ್ಲಿ ನಿರಂತರ ಜಡಿ ಮಳೆ ಅಥವಾ ಗಾಳಿಯ ತೇವಾಂಶ ಈ ಏಡಿಗಳಿಗೆ ಉಸಿರಾಡಲು ಸಹಾಯ ಮಾಡುತ್ತವೆ. ಒಣ ಹವೆ ಇದ್ದರೆ ಪ್ರಯಾಣ ಬೆಳಸುವುದಿಲ್ಲ ಮತ್ತು ಬಿಸಿಲು ಇರುವ ಜಾಗದಲ್ಲಿ ಇವು ಪ್ರಯಾಣಿಸುವುದಿಲ್ಲ.

ಇವುಗಳು ನೆಲದ ಮೇಲೆ ಬಿದ್ದಿರುವ ಎಲೆ, ಹಣ್ಣು, ಸಣ್ಣ ಸಣ್ಣ ಸಸ್ಯಗಳು ಮತ್ತು ಇತರ ಸಣ್ಣ ಕೀಟಗಳನ್ನು ತಿನ್ನುತ್ತವೆ. ಇವುಗಳ ಆಹಾರಕ್ಕೆ ಪೈಪೋಟಿ ನೀಡುವ ಜೀವಿಗಳೇ ಇಲ್ಲ. ಲಕ್ಷಾಂತರ ಏಡಿಗಳು ಹಲವು ವಾರಗಳ ಕಾಲ ನಡೆದು ಹೋಗುವಾಗ ಕೆಂಪು ನದಿಯೇ ಹರಿಯುತ್ತಿದೆಯೇನೋ ಎನಿಸುತ್ತದೆ. ಈ ದೃಶ್ಯವನ್ನು ನೋಡಲು ಸಾವಿರಾರು ಜನರು ಅಲ್ಲಿಗೆ ಭೇಟಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net