Stock Market: ಚೇತರಿಕೆ ಕಂಡ ಷೇರುಪೇಟೆ; ಸೆನ್ಸೆಕ್ಸ್ 555, ನಿಫ್ಟಿ 198 ಅಂಕ ಏರಿಕೆ

photo-2025-09-01t165134118-68b581d316ca2
Published on

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ದಿನವಾದ ಸೋಮವಾರ(ಸೆ.1) ಉತ್ತಮ ಲಾಭದೊಂದಿಗೆ ಮುಕ್ತಾಯಗೊಂಡಿವೆ.

ನಿಫ್ಟಿ50 ಸೂಚ್ಯಂಕವು 198 ಪಾಯಿಂಟ್‌ಗಳೊಂದಿಗೆ 24,625 ಪಾಯಿಂಟ್‌ಗಳಲ್ಲಿ ಮುಕ್ತಾಯಗೊಂಡರೆ, ಬಿಎಸ್‌ಇ ಸೆನ್ಸೆಕ್ಸ್ 555 ಪಾಯಿಂಟ್‌ಗಳೊಂದಿಗೆ 0.70% ಏರಿಕೆಯಾಗಿ 80,364 ಪಾಯಿಂಟ್‌ಗಳಲ್ಲಿ ಮುಕ್ತಾಯಗೊಂಡಿದೆ. ಕಳೆದ ವಾರ ಭಾರೀ ಕುಸಿತ ಕಂಡಿದ್ದ ಷೇರುಪೇಟೆ ಇದೀಗ ಆರೋಗ್ಯಕರ ಲಾಭದೊಂದಿಗೆ ಕೊನೆಗೊಂಡಿದೆ.

ಆದಾಗ್ಯೂ, ಮಿಡ್​ಕ್ಯಾಪ್​ ಮತ್ತು ಸ್ಮಾಲ್​ಕ್ಯಾಪ್​​ ವಿಭಾಗಳು ಕಳಪೆ ಪ್ರದರ್ಶನ ನೀಡಿದವು. ಬಿಎಸ್​​ಇ ಮಿಡ್​ಕ್ಯಾಪ್​ ಸೂಚ್ಯಂಕ 1.64 ಏರಿಕೆಯಾದರೆ, ಸ್ಮಾಲ್​ಕ್ಯಾಪ್​​ ಶೇ.1.49ರಷ್ಟು ಏರಿಕೆಗೊಂಡಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net