

Actor: ಮರಾಠ ಪ್ರತಿಭಟನೆಯಿಂದಾಗಿ ದಕ್ಷಿಣ ಮುಂಬೈನಲ್ಲಿ ಎದುರಿಸಿದ ಭಯಾನಕ ಅನುಭವದ ಬಗ್ಗೆ ಹಿಂದಿ ಟೆಲಿವಿಷನ್ ನಟಿ ಸಮೋನಾ ಚಕ್ರವರ್ತಿ ಭಾನುವಾರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಈಗ ಆ ಪೋಸ್ಟ್ನ್ನು ಅಳಿಸಿ ಹಾಕಿರುವ ವಿಷಯ ಭಾರೀ ಚರ್ಚೆಯಾಗಿದೆ.
ಪ್ರತಿಭಟನಾಕಾರರು ಆಕೆಯ ಕಾರನ್ನು ತಡೆದು ಕಿಟಕಿಯನ್ನು ಬಡಿಯುತ್ತಾ "ಜೈ ಮಹಾರಾಷ್ಟ್ರ" ಎಂದು ಕೂಗುತ್ತಿರುವುದರ ಬಗ್ಗೆ ಸಮೋನಾ ಪೋಸ್ಟ್ ಹಂಚಿಕೊಂಡಿದ್ದರು. ಈಗ ಅಳಿಸಲಾದ ಪೋಸ್ಟ್ನಲ್ಲಿ ನಟಿ ಇಂದು ಮಧ್ಯಾಹ್ನ 12:30 ಗೆ ನಾನು ಕೊಲಬಾದಿಂದ ಕೋಟೆಗೆ ಚಾಲನೆ ಮಾಡುತ್ತಿದ್ದ ಸಮಯದಲ್ಲಿ ಇದ್ದಕ್ಕಿಂದತೆ ನನ್ನ ಕಾರನ್ನು ಗುಂಪೊಂದು ತಡೆಯಿತು.
ಒಬ್ಬ ವ್ಯಕ್ತಿ ನನ್ನ ಕಾರಿಗೆ ತನ್ನ ಹೊಟ್ಟೆಯನ್ನು ಚಾಚಿಕೊಂಡು ನಿಂತು ಕಾರಿನ ಬ್ಯಾನೆಟ್ನ್ನು ಬಡಿದನು. ಇನ್ನು ಆತನ ಸ್ನೇಹಿತರು ಕಿಟಕಿಯನ್ನು ಬಡಿಯುತ್ತಾ, ಜೈ ಮಹಾರಾಷ್ಟ್ರ ಎಂದು ಕೂಗುತ್ತಾ ನಗುತ್ತಿದ್ದರು. ನಾವು ಹಾಗೇ ಸ್ವಲ್ಪ ಮುಂದೆ ಹೋಗಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದೆವು.
ಈ ಪ್ರತಿಭಟನೆ ವೇಳೆ ಪೊಲೀಸರು ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಇಲ್ಲಿನ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ನಾನು ಹಗಲಿನಲ್ಲಿ ಕಾರಿನಲ್ಲಿ ಕೂತು ಅಸುರಕ್ಷಿತ ಭಾವನೆಯನ್ನು ಅನುಭವಿಸಿದ್ದೇನೆ. ಹಾಗೆಯೇ ಬೀದಿಗಳಲ್ಲಿ ಬಾಳೆಹಣ್ಣಿನ ಸಿಪ್ಪೆಗಳು, ಪ್ಲಾಸ್ಟಿಕ್ ಬಾಟಲಿಗಳು, ಹೊಲಸುಗಳಿಂದ ತುಂಬಿವೆ.
ಪ್ರತಿಭಟನಕಾರರು ಆ ಪ್ರದೇಶದಲ್ಲಿಯೇ ತಿನ್ನುತ್ತಿದ್ದಾರೆ, ಸ್ನಾನ ಮಾಡುತ್ತಿದ್ದಾರೆ, ಅಡುಗೆ ಮಾಡುತ್ತಿದ್ದಾರೆ, ವಿಡಿಯೋ ಕರೆ ಮಾಡುತ್ತಿದ್ದಾರೆ. ಇನ್ನು ಪ್ರತಿಭಟನೆಯ ಹೆಸರಿನಲ್ಲಿ ಮುಂಬೈ ದರ್ಶನ ಮಾಡುತ್ತಿದ್ದಾರೆ ಎಂದು ನಟಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಳೆದು ಸುಮಾರು ವರ್ಷಗಳಿಂದ ಮುಂಬೈ ನಗರದಲ್ಲಿ ವಾಸಿಸುತ್ತಿದ್ದೇನೆ. ಎಂದಿಗೂ ಅಸುರಕ್ಷಿತ ಭಾವನೆ ಅನುಭವಿಸಿಲ್ಲ. ಆದರೆ, ಇದೇ ಮೊದಲ ಬಾರಿಗೆ ಹಗಲು ಹೊತ್ತಿನಲ್ಲೇ ಅಸುರಕ್ಷಿತನೆಂದು ಭಾವಿಸಿದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
(ಏಜೆನ್ಸೀಸ್)