

ಬೆಳಗಾವಿ: ಕನ್ನಡ ರಾಜ್ಯೋತ್ಸವದ ಉತ್ಸಾಹವೇ ಹಾಗೆ, ಅದು ದಣಿವರಿಯದ ಉಲ್ಲಾಸ. ಅಂಥದ್ದೊಂದು ಉತ್ಸಾಹ-ಉಲ್ಲಾಸಕ್ಕೆ ಈ ಸುದೀರ್ಘ ಮೆರವಣಿಗೆ ಸಾಕ್ಷಿಯಾಗಿದೆ. ಹಗಲಿಡೀ ಎಂಬಂತೆ ನಡೆದ ಈ ಮೆರವಣಿಗೆ ದಾಖಲೆಯನ್ನೂ ನಿರ್ಮಿಸಿದೆ.
ಗಡಿನಾಡು ಬೆಳಗಾವಿ ನಗರದಲ್ಲಿ ಅದ್ದೂರಿಯಾಗಿ ನಡೆದ ರಾಜ್ಯೋತ್ಸವ ಮೆರವಣಿಗೆ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾದ ಮೆರವಣಿಗೆ ರಾತ್ರಿ 11 ಗಂಟೆಯವರೆಗೂ ಮುಂದುವರಿಯಿತು.
ಸಮಯದ ವಿಷಯದಲ್ಲಷ್ಟೇ ಅಲ್ಲ, ಸಂಖ್ಯೆಯ ವಿಚಾರದಲ್ಲೂ ಇದು ಬೃಹತ್ ಮೆರವಣಿಗೆಯೇ. ಏಕೆಂದರೆ 12 ಗಂಟೆಗಳ ಈ ಸತತ ಮೆರವಣಿಗೆಯಲ್ಲಿ ಒಟ್ಟು ಬರೋಬ್ಬರಿ ಐದು ಲಕ್ಷ ಜನರು ಭಾಗವಹಿಸಿದ್ದು, ಅದು ಕೂಡ ದಾಖಲೆ ಎಂದೆನಿಸಕೊಂಡಿದೆ.