ತಲೈವಾ ನಟನೆಯ 'ಜೈಲರ್' ಚಿತ್ರದ ರನ್​​ ಟೈಮ್​​ ಎಷ್ಟು?

Untitled design - 2023-07-24T133417.580
Published on

ತಮಿಳುನಾಡು: ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್'​ ಚಿತ್ರದ ರನ್​ಟೈಮ್​​ ಬಗ್ಗೆ ಇದೀಗ ಹೊಸ ಮಾಹಿತಿ ಲಭ್ಯವಾಗಿದೆ.

ಇತ್ತೀಚಿಗೆ ಲಭ್ಯವಾದ ಮಾಹಿತಿ ಪ್ರಕಾರ, ಚಿತ್ರವು ತನ್ನ ಸೆನ್ಸಾರ್‌ಶಿಪ್ ಪ್ರಕ್ರಿಯೆಯನ್ನು ಯಾವುದೇ ಅಡೆಚಣೆಗಳಿಲ್ಲದೆ ಪೂರ್ಣಗೊಳಿಸಿದೆ ಮತ್ತು ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಇದರೊಟ್ಟಿಗೆ ಚಿತ್ರದ ರನ್​ಟೈಮ್​ ಅವಧಿ 2 ಗಂಟೆ 49 ನಿಮಿಷಗಳು ಎಂದು ಹೇಳಲಾಗಿದ್ದು, ಒಂದೆಡೆ ಇದು ತಲೈವಾ ಅಭಿಮಾನಿಗಳಿಗೆ ಸಂತಸ ನೀಡಿದರೆ, ಮತ್ತೊಂದೆಡೆ ಬರೋಬ್ಬರಿ 3 ಗಂಟೆಗಳತ್ತ ಸಿನಿಮಾ ಸಾಗಲಿದೆ ಎಂಬುದು ಹಲವರಿಗೆ ಅಶ್ಚರ್ಯವನ್ನು ಉಂಟು ಮಾಡಿದೆ.

ಜೈಲರ್​ ಚಿತ್ರವನ್ನು ಇದೇ ಆಗಸ್ಟ್ 10, 2023 ರಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ. ಚಿತ್ರದಲ್ಲಿ ರಜನಿಕಾಂತ್​, ತಮನ್ನಾ ಭಾಟಿಯಾ, ಜಾಕಿ ಶ್ರಾಫ್, ಶಿವರಾಜ್‌ಕುಮಾರ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣನ್, ಸುನೀಲ್, ವಸಂತ್ ರವಿ ಮತ್ತು ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾ ಬಳಗವೇ ಅಭಿನಯಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net