

| ಹರ್ಷವರ್ಧನ್ ಬ್ಯಾಡನೂರು
ಈ ವರ್ಷ ಇದುವರೆಗೆ 160ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಿವೆ. ಆ್ಯಕ್ಷನ್, ಕಾಮಿಡಿ, ರೊಮ್ಯಾನ್ಸ್, ಸಸ್ಪೆನ್ಸ್, ಹಾರರ್, ಥ್ರಿಲ್ಲರ್… ಹೀಗೆ ಹಲವಾರು ಜಾನರ್ ಕಥೆಗಳು ಬಂದಿವೆ. ಆದರೆ, ವಿಶೇಷ ಅಂದರೆ ಇದುವರೆಗೆ ಬಿಡುಗಡೆಯಾದ ಶಾಲೆ, ಕಾಲೇಜಿನಲ್ಲಿ ನಡೆಯುವ ಯೂಥ್‌ುಲ್ ಕಥೆಗಳಿಗೆ ಕನ್ನಡ ಪ್ರೇಕ್ಷಕ ಫಿದಾ ಆಗಿದ್ದಾನೆ. ಶಾಲೆ, ಕಾಲೇಜು ಹಿನ್ನೆಲೆಯಲ್ಲಿ ಮೂಡಿಬಂದ ಆರು ಸಿನಿಮಾಗಳು ಥಿಯೇಟರ್‌ಗಳಲ್ಲಿ ಸದ್ದು ಮಾಡಿ, ಇದೀಗ ಒಟಿಟಿಯಲ್ಲೂ ಸುದ್ದಿ ಮಾಡುತ್ತಿವೆ.
ಮೊದಲ ಶುಕ್ರವಾರ ಭಯದ ವಾತಾವರಣ!
2023ರ ಮೊದಲ ಶುಕ್ರವಾರ (ಜ. 6) ರಿಲೀಸ್ ಆದ ಭರತ್ ಜಿ. ನಿರ್ದೇಶನದ ‘ಸ್ಪೂಕಿ ಕಾಲೇಜ್’ ಕೂಡ ಒಂದು. ವಿವೇಕ್ ಸಿಂಹ, ಖುಷಿ ರವಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಹಾರರ್ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ರೀಷ್ಮಾ ನಾಣಯ್ಯ ಕುಣಿದಿದ್ದರು.
ಯಶಸ್ಸಿನ ಸೂತ್ರ ಹೊಂದಿಸಿ ಬರೆದ ಜಗನ್ನಾಥ್
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಹೊಂದಿಸಿ ಬರೆಯಿರಿ’ ೆ.10ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಭಾವನಾ ರಾವ್, ಅರ್ಚನಾ ಜೋಯಿಸ್, ಐಶಾನಿ ಶೆಟ್ಟಿ, ಸಂಯುಕ್ತಾ ಹೊರನಾಡು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಥಿಯೇಟರ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರ ಒಟಿಟಿಯಲ್ಲೂ 7.5 ಕೋಟಿಗೂ ಹೆಚ್ಚು ನಿಮಿಷ ವೀಕ್ಷಣೆಯಾಗಿದೆ. ಈ ಬಗ್ಗೆ ನಿರ್ದೇಶಕ ಜಗನ್ನಾಥ್, ‘ಪ್ರತಿಯೊಬ್ಬರಿಗೂ ಶಾಲೆ, ಕಾಲೇಜು ದಿನಗಳು ಎಂದಿಗೂ ಎವರ್‌ಗ್ರೀನ್. ಆ ನೆನಪುಗಳಿಗೆ ರಿಲೇಟ್ ಆಗುವಂತಹ ಚಿತ್ರಗಳು ಜನರಿಗೂ ಹತ್ತಿರವಾಗುತ್ತದೆ. ‘ಕಿರಿಕ್ ಪಾರ್ಟಿ’ ಮತ್ತು ಕಳೆದ ವರ್ಷ ತೆರೆಕಂಡ ‘ಪದವಿ ಪೂರ್ವ’ ಬಳಿಕ ಇತ್ತೀಚಿನ ವರ್ಷಗಳಲ್ಲಿ ಅಂತಹ ಸಿನಿಮಾಗಳು ಬಂದಿರಲಿಲ್ಲ. ಹೀಗಾಗಿಯೇ ಬಾಲ್ಯ, ಕಾಲೇಜು ದಿನಗಳನ್ನು ನೆನಪಿಸುವ ನಾಲ್ಕೈದು ಲೈಟ್ ಹಾರ್ಟೆಡ್ ಫೀಲ್ ಗುಡ್ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿಕೊಳ್ಳುತ್ತಾರೆ.
‘ಡೇರ್‌ಡೆವಿಲ್’ ಪ್ರಯತ್ನಗಳಾಗಬೇಕು
ಶಶಾಂಕ್ ಸೋಘಾಲ್ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಚಿತ್ರ ‘ಡೇರ್‌ಡೆವಿಲ್ ಮುಸ್ತಾಾ’. ಶಿಶಿರ, ಆದಿತ್ಯ ಆಶ್ರೀ, ಪ್ರೇರಣಾ, ಪೂರ್ಣಚಂದ್ರ, ನಾಗಭೂಷಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಚಿತ್ರವಿದು. ಥಿಯೇಟರ್‌ಗಳಲ್ಲಿ 50 ದಿನ ಪೂರೈಸಿದ್ದಲ್ಲದೇ, ಒಟಿಟಿಯಲ್ಲೂ ಭರ್ಜರಿ ಮೊತ್ತಕ್ಕೆ ಸೇಲ್ ಆದ ಚಿತ್ರ. ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ಸೇರಿ ಸಿನಿಮಾ ನಿರ್ಮಿಸಿದ್ದು ಮತ್ತೊಂದು ವಿಶೇಷ. ನಿರ್ದೇಶಕ ಶಶಾಂಕ್, ‘ಆ್ಯಕ್ಷನ್ ಸಿನಿಮಾಗಳ ಅಲೆಯಲ್ಲಿ ಈ ರೀತಿಯ ಚಿತ್ರಗಳನ್ನು ನೋಡಲು ಜನ ಬರುತ್ತಾರಾ ಅಂತ ಭಯವಿರುತ್ತದೆ. ಇಂತಹ ಚಿತ್ರಗಳು ಗೆದ್ದರೆ, ಮುಂದೆ ಹೊಸ ನಿರ್ದೇಶಕರಿಗೆ ಈ ರೀತಿಯ ಸಿನಿಮಾ ಮಾಡುವ ಧೈರ್ಯ ಬರುತ್ತದೆ. ಟ್ರೆಂಡ್ ಾಲೋ ಮಾಡದೇ, ನಾವೇನು ಮಾಡಬೇಕು ಅಂತಂದುಕೊಡಿದ್ದೇವೋ ಅದನ್ನೇ ಮಾಡಬೇಕು. ನಮ್ಮ ಚಿತ್ರಕ್ಕೆ ಕಾಲೇಜ್ ಆಡಿಯನ್ಸ್‌ಗಿಂತ ಹೆಚ್ಚಾಗಿ ್ಯಾಮಿಲಿ ಆಡಿಯನ್ಸ್ ಬಂದರು. ಬೇರೆ ಬೇರೆ ವರ್ಗಗಳಿಗೆ ಸಿನಿಮಾಗಳು ಕನೆಕ್ಟ್ ಆಗುತ್ತವೆ. ಹೀಗಾಗಿ ಒಂದೇ ಟ್ರೆಂಡ್ ಾಲೋ ಮಾಡದೇ ಹೊಸ ಹೊಸ ರೀತಿಯ ಸಿನಿಮಾಗಳು ಬರಬೇಕು’ ಎನ್ನುತ್ತಾರೆ.
‘ಹಾಸ್ಟೆಲ್ ಹುಡುಗರ’ ಹವಾ
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕಳೆದ ಜು. 21ರಂದು ರಿಲೀಸ್ ಆಗಿತ್ತು. ಇತ್ತೀಚೆಗಷ್ಟೆ 50 ದಿನಗಳ ಸಂಭ್ರಮಾಚರಣೆ ಮಾಡಿದ ಚಿತ್ರತಂಡ, ಸದ್ಯ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ. ಜತೆಗೆ ತೆಲುಗಿನಲ್ಲೂ ಡಬ್ ಆಗಿ ‘ಬಾಯ್ಸ ಹಾಸ್ಟೆಲ್’ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿತ್ತು. ಮೊದಲ ನಿರ್ದೇಶನದ ಬಗ್ಗೆ ನಿತಿನ್, ‘‘ಪ್ರೇಮಲೋಕ’, ‘ಕಿರಿಕ್ ಪಾರ್ಟಿ’ ಕಾಲದಿಂದಲೂ ಜನ ಕಾಲೇಜು ಸಿನಿಮಾಗಳನ್ನು ನೋಡಿದ್ದಾರೆ, ಇಷ್ಟಪಟ್ಟಿದ್ದಾರೆ. ಜತೆಗೆ ಸಿನಿಮಾಗಳಿಗೆ ಕಾಲೇಜು ವಿದ್ಯಾರ್ಥಿಗಳೇ ಮೊದಲ ವಾರದ ಪ್ರೇಕ್ಷಕರು. ಹೀಗಾಗಿಯೇ ಇಂತಹ ಕಥೆಗಳು ನಿರ್ಮಾಪಕರಿಗೂ ಸ್ೇ’ ಎಂದು ಹೇಳಿಕೊಳ್ಳುತ್ತಾರೆ.