More

    ಟ್ರೇಲರ್‌ನಲ್ಲಿ ರಾಜಯೋಗ ; ನಿನ್ನೆ, ನಾಳೆಯದಲ್ಲ ಈ ಕ್ಷಣದ ಕಥೆ!

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ‘ರಾಮಾ ರಾಮಾ ರೇ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ಧರ್ಮಣ್ಣ ಕಡೂರ್. ಬಳಿಕ ‘ಅಂಜನೀಪುತ್ರ’, ‘ಸಖತ್’, ‘ಮದಗಜ’, ‘ಕ್ರಾಂತಿ’ ಸೇರಿ ಹಲವು ಚಿತ್ರಗಳಲ್ಲಿ ಪೋಷಕ ಕಲಾವಿದನಾಗಿ, ಹಾಸ್ಯನಟನಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ‘ರಾಜಯೋಗ’ ಚಿತ್ರದ ಮೂಲಕ ಮತ್ತೊಮ್ಮೆ ನಾಯಕನಾಗಿ ಮಿಂಚಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.

    ಇದನ್ನೂ ಓದಿ : ಧೈರ್ಯದಿಂದ ಸಹೋದರಿ ಜಾಹ್ನವಿಗಿಂತ ಎರಡು ಹೆಜ್ಜೆ ಮುಂದೆ ಹೋದ ಖುಷಿ..ಅಭಿಮಾನಿಗಳ ಮನಗೆದ್ದ ಗ್ಲಾಮರಸ್​​ ಫೋಟೋ

    ಟ್ರೇಲರ್‌ನಲ್ಲಿ ರಾಜಯೋಗ ; ನಿನ್ನೆ, ನಾಳೆಯದಲ್ಲ ಈ ಕ್ಷಣದ ಕಥೆ!

    ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಲಿಂಗರಾಜು ಉಚ್ಚಂಗಿದುರ್ಗ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದಾರೆ. ‘ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯಿದು. ನಾನೂ ಕೂಡ ಹಳ್ಳಿಯವನೇ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಒಂದಲ್ಲಾ ಒಂದು ದಿನ ರಾಜಯೋಗ ಬರುತ್ತದೆ ಎಂಬುದೇ ಚಿತ್ರದ ಕಾನ್ಸೆಪ್ಟ್. ಸೀರಿಯಸ್ ವಿಷಯವನ್ನು ಹಾಸ್ಯದ ಮೂಲಕ ಹೇಳಿದ್ದೇವೆ. ಹಿಂದೆ ನಡೆದಿದ್ದು, ಮುಂದೆ ನಡೆಯಲಿರುವುದರ ಬಗ್ಗೆ ಯೋಚಿಸದೇ ಈ ಕ್ಷಣವನ್ನು ಬದುಕಬೇಕು, ಆಗ ಜೀವನ ಚೆನ್ನಾಗಿರುತ್ತದೆ ಎಂದು ಹೇಳುವ ಕಥೆ’ ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ : ಕನ್ನಡದಲ್ಲೊಂದು ರಾವಣ್!;ರತನ್ ಚೆಂಗಪ್ಪ, ತಪಸ್ವಿನಿ ಪೂಣಚ್ಚ ಚಿತ್ರಕ್ಕೆ ಮುಹೂರ್ತ

    ಟ್ರೇಲರ್‌ನಲ್ಲಿ ರಾಜಯೋಗ ; ನಿನ್ನೆ, ನಾಳೆಯದಲ್ಲ ಈ ಕ್ಷಣದ ಕಥೆ!

    ನಾಯಕ ಧರ್ಮಣ್ಣ, ‘ಇದುವರೆಗೂ ಈ ರೀತಿಯ ಪಾತ್ರ ಮಾಡಿಲ್ಲ. ಸಂಬಂಧಗಳ ಮೌಲ್ಯವನ್ನು ಕಾಮಿಡಿ ಮೂಲಕ ಹೇಳಿದ್ದೇವೆ. ಚಿತ್ರವನ್ನು ನೋಡಿದರೆ ಅನಂತ್ ನಾಗ್ ಮತ್ತು ಶಶಿಕುಮಾರ್ ಅವರು ನೆನಪಾಗುತ್ತಾರೆ’ ಎಂದು ಹೇಳಿಕೊಂಡರು. ಧರ್ಮಣ್ಣಗೆ ನಾಯಕಿಯಾಗಿ ನಿರೀಕ್ಷಾ ರಾವ್ ನಟಿಸಿದ್ದು, ನಾಗೇಂದ್ರ ಶಾ, ಕೃಷ್ಣಮೂರ್ತಿ, ಶ್ರೀನಿವಾಸ್ ಗೌಡ, ಮಹಾಂತೇಶ್ ಹಿರೇಮಠ್, ಉಷಾ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಅಕ್ಷಯ್ ರಿಷಬ್ ಸಂಗೀತ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts