ಯಲ್ಲಮ್ಮ ದೇವಿ ಮರು ಪ್ರತಿಷ್ಠಾಪನೆ

sgr temple
ಸಾಗರದಲ್ಲಿ ಯಲ್ಲಮ್ಮ ದೇವಾಲಯದ ಮರು ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಮಹಿಳೆಯರು ಗಣಪತಿ ಕೆರೆಯಿಂದ ಪೂರ್ಣಕುಂಭ ಹೊತ್ತು ದೇಗುಲಕ್ಕೆ ಆಗಮಿಸುತ್ತಿರುವುದು.
Published on

ಸಾಗರ: ಯಲ್ಲಮ್ಮ ದೇವಿ ಮರು ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನ ಅದ್ದೂರಿಯಾಗಿ ನಡೆಯಲಿದೆ ಎಂದು ಯಲ್ಲಮ್ಮ ದೇವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ.ರಘುನಾಥ್ ಹೇಳಿದರು.

ಸಾಗರದ ಸೊರಬ ರಸ್ತೆಯಲ್ಲಿರುವ ಯಲ್ಲಮ್ಮ ದೇವಸ್ಥಾನದಲ್ಲಿ ಸೋಮವಾರ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ದೇವಸ್ಥಾನಕ್ಕೆ ಹೆಚ್ಚು ಭಕ್ತರು ಬರುತ್ತಿದ್ದು, ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ನೂತನ ಶಿಲಾಮಯ ದೇವಸ್ಥಾನ ನಿರ್ಮಿಸಲಾಗಿದೆ ಎಂದರು.

ಮಂಗಳವಾರ ಪ್ರತಿಷ್ಠಾಪನಾ ಮಹೋತ್ಸವದ ಮುಖ್ಯ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ಇರುತ್ತದೆ. ಸಂಜೆ ಭರತನಾಟ್ಯ, ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗಣಪತಿ ಕೆರೆಯಿಂದ ಗಂಗೆಯನ್ನು ತುಂಬಿಸಿಕೊಂಡು ಯಲ್ಲಮ್ಮ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತರಲಾಯಿತು. ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ಕುಮಾರ್, ಉಪಾಧ್ಯಕ್ಷ ಶಶಿಧರಮೂರ್ತಿ, ಸಹ ಕಾರ್ಯದರ್ಶಿ ಉಮೇಶ್, ಕೋಶಾಧ್ಯಕ್ಷ ಚಂದ್ರಕಾತ್ ಜಿಂಗಾಡೆ, ಮದನ್ ಸಿಂಗ್, ರಾಜೇಂದ್ರ ಸಿಂಗ್, ಕುಸುಮಾ ಸುಬ್ಬಣ್ಣ, ಜನಾರ್ದನ ಆಚಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net