ಮಾರಿಕಾಂಬಾ ದೇಗುಲದ ಮರು ಪ್ರತಿಷ್ಠೆ

24bhr 2
ಬಾಳೆಹೊನ್ನೂರಿನ ಮಾರಿಕಾಂಬಾ ದೇಗುಲದ ಮರು ಪ್ರತಿಷ್ಠೆ ಮಹೋತ್ಸವದಲ್ಲಿ ಸೇವೆ ಸಲ್ಲಿಸಿದ ಗೋವಿಂದರಾಜು ಅವರನ್ನು ದೇವಾಲಯ ಸಮಿತಿ ಮುಖ್ಯಸ್ಥ ಎಚ್.ಡಿ.ನಾಗೇಶ್ ಹೆಗ್ಡೆ ಸನ್ಮಾನಿಸಿದರು. ಹಿರಿಯಣ್ಣ, ಪ್ರಕಾಶ್ ಭಟ್ ಇದ್ದರು.
Published on

ಬಾಳೆಹೊನ್ನೂರು: ಪಟ್ಟಣದ ಮಾರಿಕಾಂಬಾ ದೇಗುಲದ ಮರುಪ್ರತಿಷ್ಠಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಮಾರಿಕಾಂಬಾ ದೇವರ ಮರುಪ್ರತಿಷ್ಠೆ ಅಂಗವಾಗಿ ದೇವಾಲಯದಲ್ಲಿ ಕಲಶ ಪ್ರತಿಷ್ಠೆ, ಪುಣ್ಯಾಹವಾಚನ, ಬಿಂಬಶುದ್ಧಿ, ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್.ಪ್ರಕಾಶ್ ಭಟ್ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಮರು ಪ್ರತಿಷ್ಠೆ ಅಂಗವಾಗಿ ಸೇವೆ ಸಲ್ಲಿಸಿದ ದಾನಿಗಳನ್ನು ಇದೇ ಸಂದರ್ಭ ಗೌರವಿಸಲಾಯಿತು.
ದೇವಾಲಯದ ಮುಖ್ಯಸ್ಥ ಎಚ್.ಡಿ.ನಾಗೇಶ್ ಹೆಗ್ಡೆ, ಪ್ರಮುಖರಾದ ಬಿ.ಕೆ.ಮಧುಸೂದನ್, ಹಿರಿಯಣ್ಣ, ಮನುಕುಮಾರ್, ಅರ್ಚಕರಾದ ಸುದರ್ಶನ್ ಭಟ್, ರವಿಶಂಕರ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net