ರೇಮಂಡ್​​​​ ಮುಖ್ಯಸ್ಥ ಗೌತಮ್​​​​ಗೆ ಭಾರಿ ಷರತ್ತು ವಿಧಿಸಿದ ವಿಚ್ಛೇದಿತ ಪತ್ನಿ ನವಾಜ್ ; ಒಪ್ಪಿಗೆ ಕೊಟ್ರಾ ಸಿಂಘಾನಿಯಾ?

raymond 1
Published on

ಮುಂಬೈ: ದೀಪಾವಳಿಯ ಮರುದಿನವೇ ಕೈಗಾರಿಕೋದ್ಯಮಿ ಮತ್ತು ರೇಮಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂಡಿ ಗೌತಮ್ ಸಿಂಘಾನಿಯಾ ವಿಚ್ಛೇದನದ ಸುದ್ದಿ ಕೇಳಿಬಂತು. 32 ವರ್ಷಗಳ ದಾಂಪತ್ಯದ ನಂತರ ಅವರು ತಮ್ಮ ಪತ್ನಿ ನವಾಜ್ ಮೋದಿ ಸಿಂಘಾನಿಯಾಗೆ ವಿಚ್ಛೇದನ ನೀಡಿದ್ದಾರೆ. ಈಗ ಅವರ ವಿಚ್ಛೇದಿತ ಪತ್ನಿ ಭಾರಿ ಷರತ್ತುಗಳನ್ನು ಹಾಕಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಗೌತಮ್ ಸಿಂಘಾನಿಯಾ ಅವರ ಒಟ್ಟು ನಿವ್ವಳ ಮೌಲ್ಯದ 75% ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.  

ಗೌತಮ್ ಸಿಂಘಾನಿಯಾ ಅವರ ನಿವ್ವಳ ಮೌಲ್ಯ 1.4 ಬಿಲಿಯನ್ ಡಾಲರ್ (ಸುಮಾರು 11,660 ಕೋಟಿ ರೂ.). ಈ ಹಿನ್ನೆಲೆಯಲ್ಲಿ ನವಾಜ್ ಮೋದಿ ಸಿಂಘಾನಿಯಾ ಅವರು ವಿಚ್ಛೇದನದ ಘೋಷಣೆಯ ನಂತರ ತಮ್ಮ ಪಾಲನ್ನು ಕೇಳಿದ್ದಾರೆ. ಈ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಇಟಿ, ಒಟ್ಟು ಆಸ್ತಿಯಲ್ಲಿ ಶೇ 75 ರಷ್ಟು ಪಾಲು ಕೇಳಿದ್ದಾರೆ ಎಂದು ಹೇಳಿದೆ.

ನವಾಜ್ ಮೋದಿ ಸಿಂಘಾನಿಯಾ ತನಗೆ ಮತ್ತು ತನ್ನ ಇಬ್ಬರು ಪುತ್ರಿಯರಾದ ನಿಹಾರಿಕಾ ಮತ್ತು ನೀಸಾಗೆ ಈ ಮೊತ್ತವನ್ನು ಕೇಳಿದ್ದಾರೆ. ಅವರು ಕೇಳಿದ ಮೊತ್ತವನ್ನು ಒಂದು ವೇಳೆ ಸಿಂಘಾನಿಯಾ ಕೊಟ್ಟರೆ ತಮ್ಮ ಸಂಪತ್ತಿನ ನಾಲ್ಕನೇ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ.

ಗೌತಮ್ ಸಿಂಘಾನಿಯಾ ಒಪ್ಪುತ್ತಾರಾ? 
ಗೌತಮ್ ಸಿಂಘಾನಿಯಾ ಅವರು ಈ ಭಾರಿ ಬೇಡಿಕೆಯನ್ನು ಒಪ್ಪಬಹುದು ಎಂದು ಮೂಲಗಳು ಹೇಳುತ್ತವೆ. ಆದರೆ ಆಸ್ತಿಯ ಈ ಲೆಕ್ಕಪತ್ರವನ್ನು ನೇರವಾಗಿ ಮಾಡಲಾಗುವುದಿಲ್ಲ. ಬದಲಿಗೆ ಫ್ಯಾಮಿಲಿ ಟ್ರಸ್ಟ್ ರಚಿಸುವಂತೆ ಸಲಹೆ ನೀಡಿದ್ದಾರೆ. ಈ ಟ್ರಸ್ಟ್ ಕುಟುಂಬದ ಎಲ್ಲಾ ಆಸ್ತಿ ಮತ್ತು ಆಸ್ತಿಗಳ ಮಾಲೀಕತ್ವದ ಹಕ್ಕುಗಳನ್ನು ಹೊಂದಿರುತ್ತದೆ. ಅವರು ಈ ಟ್ರಸ್ಟ್‌ನ ಏಕೈಕ ಟ್ರಸ್ಟಿಯಾಗಿರುತ್ತಾರೆ. ಅವರ ಮರಣದ ನಂತರ, ಅವರ ಕುಟುಂಬ ಸದಸ್ಯರು ಉಯಿಲು ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ, ನವಾಜ್ ಮೋದಿ ಸಿಂಘಾನಿಯಾ ಈ ವ್ಯವಸ್ಥೆಗೆ ಒಪ್ಪಿಗೆ ನೀಡುವ ಸಾಧ್ಯತೆಗಳು ನಗಣ್ಯ.

58 ವರ್ಷದ ಗೌತಮ್ ಸಿಂಘಾನಿಯಾ ಅವರು 1999 ರಲ್ಲಿ ಸಾಲಿಸಿಟರ್ ನಡಾರ್ ಮೋದಿಯವರ ಪುತ್ರಿ ನವಾಜ್ ಮೋದಿ ಅವರನ್ನು ವಿವಾಹವಾದರು. ಇತ್ತೀಚೆಗೆ ಅಂದರೆ ನವೆಂಬರ್ 13 ರಂದು, ಸಿಂಘಾನಿಯಾ ವಿಚ್ಛೇದನದ ಬಗ್ಗೆ ಸ್ವತಃ ಭಾವನಾತ್ಮಕ ಪೋಸ್ಟ್ ಮಾಡಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net