ಮುಂಬೈ: ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ ಅವರ ಅವಳಿ ಮಕ್ಕಳಾದ ಕೃಷ್ಣ ಮತ್ತು ಆದಿಯಾ ಅವರಿಗೆ ನವೆಂಬರ್ 19ಕ್ಕೆ ಒಂದು ವರ್ಷ ತುಂಬಿತು. ಈ ವಿಶೇಷ ದಿನದಂದು ಅಂಬಾನಿ ಕುಟುಂಬವು ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿತ್ತು, ಇದರಲ್ಲಿ ಎಲ್ಲಾ ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಶಾರುಖ್ ಖಾನ್ ಕೂಡ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದೀಗ ಪಾರ್ಟಿಯ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಶಾರುಖ್ ಖಾನ್ ಅವರು ಹಿಂದೆಂದೂ ಕಾಣದ ಅವತಾರದಲ್ಲಿ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ ವೈರಲ್ ಆಗಿರುವ ವಿಡಿಯೋದಲ್ಲಿ ಕಿಂಗ್ ಖಾನ್ ಪಾರ್ಟಿಯಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ಶಾರುಖ್ ಜೊತೆ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಕೂಡ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅನಂತ್, ಶಾರೂಖ್ ಜೊತೆ ಮಾತಾಡುತ್ತಾ ಇದ್ದಕ್ಕಿದ್ದಂತೆ ಕಿಂಗ್ ಖಾನ್ ಕೈಗೆ ಹಾವನ್ನು ಕೊಡುತ್ತಾರೆ. ಆಗ ಶಾರೂಖ್ ಶಾಂತವಾಗಿಯೇ ಇದ್ದರು, ನಗುತ್ತಿದ್ದರು. ಇಲ್ಲಿ ರಾಧಿಕಾ ಅವರು ಹಾವನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂದು ಎಸ್‌ಆರ್‌ಕೆಗೆ ತೋರಿಸಲು ಪ್ರಯತ್ನಿಸುತ್ತಾ ತಮಾಷೆ ಮಾಡುತ್ತಿದ್ದಾರೆ. ಸ್ವಲ್ಪ ಸಮಯದ ನಂತರ, ಯಾರೋ ಶಾರುಖ್ ಅವರ ಕುತ್ತಿಗೆಗೂ ಹಾವನ್ನು ಹಾಕುತ್ತಾರೆ. ಆದರೆ ಅವರು ಒಂದು ಇಂಚು ಕೂಡ ಕದಲಲಿಲ್ಲ. ಶಾರೂಖ್ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
View this post on Instagram
ಇದಾದ ನಂತರ ಶಾರುಖ್ ಈ ಹಾವುಗಳೊಂದಿಗೆ ಸಾಕಷ್ಟು ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಆದರೆ, ಹಾವು ನಿಜವೋ, ನಕಲಿಯೋ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಂಬಾನಿ ಪಾರ್ಟಿಯಲ್ಲಿ ತಾರೆಯರ ಕಲರವ
ಶಾರುಖ್ ಖಾನ್ ಹೊರತುಪಡಿಸಿ ಕಿಯಾರಾ ಅಡ್ವಾಣಿ, ಕತ್ರಿನಾ ಕೈಫ್ , ಆದಿತ್ಯ ರಾಯ್ ಕಪೂರ್, ಕರಣ್ ಜೋಹರ್, ಅನನ್ಯಾ ಪಾಂಡೆ, ಹರ್ನಾಜ್ ಸಿಂಧು ಸೇರಿದಂತೆ ಹಲವು ತಾರೆಯರು ಇಶಾ ಮಕ್ಕಳ ಮೊದಲ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯನ್ನು ಮುಂಬೈನ ಜಿಯೋ ವರ್ಲ್ಡ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿತ್ತು. ಇದರ ಥೀಮ್ ಕಂಟ್ರಿ ಫೇರ್.
ಶಾರುಖ್ ಖಾನ್ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ ಕಿಂಗ್ ಖಾನ್ ಅವರ ಚಿತ್ರ ಜವಾನ್ ಕೆಲವು ತಿಂಗಳ ಹಿಂದೆ ಬಿಡುಗಡೆಯಾಯಿತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹಣ ಮಾಡಿತು. ಈಗ ಶಾರುಖ್, ರಾಜ್‌ಕುಮಾರ್ ಹಿರಾನಿ ಜೊತೆಗಿನ ಡಂಕಿ ಚಿತ್ರದೊಂದಿಗೆ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಮುಂದಿನ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ಕಿಂಗ್ ಖಾನ್ ಅಭಿಮಾನಿಗಳು ಮತ್ತೆ ಕಾತುರದಿಂದ ಕಾಯುತ್ತಿದ್ದಾರೆ.
ಟೀಂ ಇಂಡಿಯಾ ಸೋಲಿನ ಬೆನ್ನಲ್ಲೇ ಟಿವಿ ಒಡೆದು ಕಣ್ಣೀರು ಹಾಕಿದ ಕ್ರಿಕೆಟ್ ಅಭಿಮಾನಿಗಳು