More

    ಟೀಂ ಇಂಡಿಯಾ ಸೋಲಿನ ಬೆನ್ನಲ್ಲೇ ಟಿವಿ ಒಡೆದು ಕಣ್ಣೀರು ಹಾಕಿದ ಕ್ರಿಕೆಟ್ ಅಭಿಮಾನಿಗಳು

    ಉತ್ತರಪ್ರದೇಶ: ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಆಸ್ಟ್ರೇಲಿಯಾ ಸೋಲಿಸಿದ ರೀತಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಸೋಲಿನ ನಂತರ ಭಾರತೀಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿದ್ದು, ವಿಶ್ವಕಪ್ ಗೆಲ್ಲುವ ಇಡೀ ಭಾರತದ ಕನಸು ಭಗ್ನಗೊಂಡಿದೆ. ಟೀಂ ಇಂಡಿಯಾದ ಈ ಸೋಲಿಗೆ ಕ್ರಿಕೆಟ್  ಅಭಿಮಾನಿಗಳಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಉತ್ತರಪ್ರದೇಶದ ಅಲಿಗಢ್ ಮತ್ತು ಲಖಿಂಪುರ ಖೇರಿಯಲ್ಲಿ, ಕೋಪಗೊಂಡ ಕ್ರಿಕೆಟ್ ಅಭಿಮಾನಿಗಳು ಟಿವಿಯನ್ನು ಒಡೆದರೆ, ಇನ್ನು ಅನೇಕ ಅಭಿಮಾನಿಗಳು ಕಣ್ಣೀರು ಹಾಕಿದರು.   

    2023 ರ ವಿಶ್ವಕಪ್‌ನಲ್ಲಿ ಭಾರತ ಎಲ್ಲಾ ಹತ್ತು ಪಂದ್ಯಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದ ನಂತರ, ಈ ಬಾರಿಯ ವಿಶ್ವಕಪ್ ಭಾರತದ ಪಾಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಆಗಲಿಲ್ಲ. ಇದರಿಂದ ಕ್ರಿಕೆಟ್ ಪ್ರೇಮಿಗಳು ನಿರಾಶೆಗೊಂಡಿದ್ದಾರೆ. ಟೀಂ ಇಂಡಿಯಾ ಸೋಲಿನ ನಂತರ ಅಲಿಘಢ್‌ನಲ್ಲಿ ವಾಸಿಸುವ ಅಭಿಮಾನಿಯೊಬ್ಬರು ತಮ್ಮ ಟಿವಿಯನ್ನು ಒಡೆದರು.  ನಂತರ ಇಂದು ಫೈನಲ್‌ನಲ್ಲಿ ಭಾರತ ಗೆಲ್ಲುತ್ತದೆ ಎಂಬ ಸಂಪೂರ್ಣ ಭರವಸೆ ನಮಗಿತ್ತು, ಆದರೆ ಭಾರತದ ಸೋಲಿಗೆ ನಮ್ಮ ಆತ್ಮ ಅಳುತ್ತಿದೆ ಎಂದರು.

    ಅಲಿಘಢ್‌ನಲ್ಲಿ ಟಿವಿ ಒಡೆದ ಪ್ರದೀಪ್ ವರ್ಷ್ನಿ
    “ನಾವು ಇಡೀ ದಿನ ಪಂದ್ಯವನ್ನು ನೋಡಿದ್ದೇವೆ, ಭಾರತ ವಿಶ್ವಕಪ್ ಗೆಲ್ಲಬೇಕು ಎಂಬುದು ನಮ್ಮ ಆಸೆಯಾಗಿತ್ತು, ಆದರೆ 140 ಕೋಟಿ ಜನರ ಕನಸು ಭಗ್ನಗೊಂಡಿದೆ, ನಾವು ತುಂಬಾ ಆಘಾತಕ್ಕೊಳಗಾಗಿದ್ದೇವೆ. ನನ್ನ ಜೀವನದಲ್ಲಿ ಎಂದೂ ಅನುಭವಿಸದ ತುಂಬಾ ನೋವು ಅನುಭವಿಸಿದೆ. ನಮ್ಮ ಆತ್ಮ ಅಳುತ್ತಿದೆ, ನಾವೆಲ್ಲರೂ ತುಂಬಾ ದುಃಖಿತರಾಗಿದ್ದೇವೆ. ಭಾರತ ವಿಶ್ವಕಪ್ ಗೆಲ್ಲಬೇಕು ಎಂದು ಬಹಳ ದಿನಗಳಿಂದ ಅಂದುಕೊಂಡಿದ್ದೆವು, ಆದರೆ ಗೆಲ್ಲಲಾಗಲಿಲ್ಲ. ಏನು ಆಗಬೇಕಿತ್ತು ಅದು ಸಂಭವಿಸಿತು. ಆದರೆ ಕೋಪವನ್ನು ಎಲ್ಲೋ ಹೊರಹಾಕಬೇಕು, ಅದಕ್ಕಾಗಿಯೇ ನಾವು ಟಿವಿಯನ್ನು ಒಡೆದಿದ್ದೇವೆ. ನಮ್ಮ ತಂಡವು ತಿಂಗಳುಗಳಿಂದ ಶ್ರಮಿಸುತ್ತಿದೆ” ಎಂದು ದುಃಖ ತೋಡಿಕೊಂಡರು. 

    ಸಚಿನ್ ಎಂಬ ಕ್ರಿಕೆಟ್ ಪ್ರೇಮಿ, “ಇಂದು ಉತ್ತಮ ಪಂದ್ಯ, ರೋಚಕ ಪಂದ್ಯ, ಆದರೆ ನಾವು ಗೆಲ್ಲಲು ಸಾಧ್ಯವಾಗದಿರುವುದು ಟೀಂ ಇಂಡಿಯಾದ ದೌರ್ಭಾಗ್ಯ, ಭಾರತ ಹತ್ತು ಪಂದ್ಯಗಳನ್ನು ಗೆದ್ದಿದೆ, ಹನ್ನೊಂದನೇ ಪಂದ್ಯವನ್ನೂ ಗೆಲ್ಲುತ್ತದೆ ಮತ್ತು ಗೆಲ್ಲುತ್ತೇವೆ ಎಂದು ನಾವು ಭಾವಿಸಿದ್ದೆವು. ಹಾಗೆ ಆಗಲಿಲ್ಲ. ಅದಕ್ಕಾಗಿಯೇ ನಾವು ಈ ಟಿವಿಯನ್ನು ಒಡೆದು ಹಾಕಿದ್ದೇವೆ. ಅಭಿಮಾನಿಗಳು ಎಲ್ಲರೂ ನಿರಾಶೆಗೊಂಡರು ಮತ್ತು ಟೀಂ ಇಂಡಿಯಾದ ಸೋಲಿನಿಂದ ಟಿವಿಯನ್ನು ಒಡೆದು ಹಾಕಿದೆವು” ಎಂದರು. 

    ಆರನೇ ಬಾರಿಗೆ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್
    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭದಿಂದಲೇ ಒತ್ತಡ ಹೇರಲು ಆರಂಭಿಸಿತು. ವಿಶ್ವಕಪ್‌ನುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ, ಅಂತಿಮ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ಸಾಧ್ಯವಾಗಲಿಲ್ಲ, ಬೌಲಿಂಗ್ ಮತ್ತು ಫೀಲ್ಡಿಂಗ್ ಅಷ್ಟೊಂದು ಪ್ರಬಲವಾಗಿರಲಿಲ್ಲ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ಆರಂಭದಿಂದಲೇ ಭಾರತ ತಂಡದ ಮೇಲೆ ಒತ್ತಡ ಹೇರಲು ಆರಂಭಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 241 ರನ್‌ಗಳ ಗುರಿ ತಲುಪಿತು. ಆಸ್ಟ್ರೇಲಿಯಾ ಭಾರತವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಆರನೇ ಬಾರಿಗೆ ವಿಶ್ವಕಪ್ ಗೆದ್ದಿತು. 

    ತೇವಗೊಂಡ ಕಣ್ಣು, ಭಾರವಾದ ಹೃದಯ…ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಕಂಡುಬಂದ ದೃಶ್ಯಗಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts