

ಮುಂಬೈ: ಇತ್ತೀಚೆಗೆ ಬಾಲಿವುಡ್ ನಟಿ ರವೀನಾ ಟಂಡನ್(Raveena Tandon) ಮೇಲೆ ಗುಂಪೊಂದು ಹಲ್ಲೆ ನಡೆಸಿದ ವಿಚಾರ ಗೊತ್ತೆ ಇದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡುತಿತ್ತು. ಇದೀಗ ಅದೇ ರೀತಿಯ ಘಟನೆ ಬಾಲಿವುಡ್ನ ಮತ್ತೊಬ್ಬ ನಟಿಗೂ ನಡೆದಿರುವುದಾಗಿ ರವೀನಾ ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮೇಲೆ ನಡೆದ ದಾಳಿ ಕುರಿತು ಮಾತನಾಡಿರುವ ನಟಿ, ದುರದೃಷ್ಟವಶಾತ್ ಇದು ಮುಂಬೈನಲ್ಲಿ ನಡೆಯುತ್ತಿದೆ. ಮತ್ತು ಚೆನ್ನಾಗಿ ಯೋಚಿಸಿ ನಡೆಸುತ್ತಿರುವ ಪಿತೂರಿ ಆಗಿದೆ ಎಂದು ಹೇಳಿದ್ದಾರೆ. ಈ ದಾಳಿ ಬಳಿಕ ನನ್ನ ಸ್ನೇಹಿತೆ ರಿಚಾ ಚಡ್ಡಾ ನನಗೆ ಕರೆ ಮಾಡಿ, 'ರವೀನಾ, ನೀವು ನಂಬುವುದಿಲ್ಲ. ಅದೇ ರೀತಿಯ ಘಟನೆ ನನಗೂ ಸಂಭವಿಸಿದೆ!' ಎಂದು ಹೇಳಿದರು. ನನ ಮೇಲೆ ನಡೆದು ಗುಂಪಿನ ದಾಳಿ ರಿಚಾಗೂ ಆಗಿದೆ ಎಂದು ರವೀನಾ ಹೇಳಿದರು. ದುಃಖದ ವಿಷಯವೆಂದರೆ ಅಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಒಂದು ವೇಳೆ ಸಿಸಿಟಿವಿ ಇದ್ದಿದ್ದರೆ ಅದು ಸತ್ಯವನ್ನು ತೋರಿಸುತಿತ್ತು. ವಾಸ್ತವವಾಗಿ ಆ ಘಟನೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ನಟಿ ಹಣವನ್ನು ಪಾವತಿಸಬೇಕಾಗಿತ್ತು. ಅದನ್ನು ಬಗೆಹರಿಸುವಂತೆ ಪೊಲೀಸರು ಹೇಳಿದರು.
<p>" class="alignnone size-full wp-image-2409369" height="400" src="https://www.vijayavani.net/wp-content/uploads/2024/10/Untitled-design-42.webp" width="600"/>
ಬಹುಶಃ ನನಗೆ ನಡೆದ ಘಟನೆ ನನ್ನನ್ನು ಹೆದರಿಸಲು ಮತ್ತು ಬೆದರಿಸಲು ಆಗಿರಬಹುದು. ನನಗೆ ನೆನಪಿದೆ, ಅವರು ಹಲ್ಲೆ ಮಾಡಲು ಆಕ್ರಮಣ ಮಾಡಲು ಯತ್ನಿಸುತ್ತಿದ್ದರು. ನನ್ನ ಮನೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ನನ್ನ ಮಕ್ಕಳು ಮಹಡಿಯ ಮೇಲಿದ್ದರು ಮತ್ತು ನನ್ನ ಪತಿ ಮನೆಯಲ್ಲಿ ಇರಲಿಲ್ಲ. ನನ್ನ ನೌಕರರ ಮೇಲೆ ಹಲ್ಲೆ ಮಾಡಲಾಗಿತ್ತು. ನಾನು ಮತ್ತು ನನ್ನ ಇಬ್ಬರು ಮಹಿಳಾ ಉದ್ಯೋಗಿಗಳು ಮನೆಗೆ ಯಾರೂ ಪ್ರವೇಶಿಸದಂತೆ ಗೇಟ್ ಬಳಿ ನಿಂತಿದ್ದೇವು. ಬಸ್ ಚಾಲಕನನ್ನು ಹೊರಗೆ ಕಳುಹಿಸುವಂತೆ ಒತ್ತಡ ಹೇರುತ್ತಿದ್ದರು.ಬಳಿಕ ಚಾಲಕನ ತಪ್ಪಿದ್ದರೆ ಪೊಲೀಸರ ಬರಲಿ ಕರೆದುಕೊಂಡು ಹೋಗಲಿ ಎಂದು ಹೇಳಿದ್ದಾಗಿ ಎಂದು ರವೀನಾ ತಿಳಿಸಿದರು. ಪೊಲೀಸರು ಈಗ ಈ ದಾಳಿಯನ್ನು ಬಹುಶಃ ಹಣಕ್ಕಾಗಿ ಯೋಜಿತ ದಾಳಿ ಎಂದು ಪರಿಗಣಿಸಿದ್ದಾರೆ ಎಂದರು.
ನಟಿ ರವೀನಾ ಟಂಡನ್ ಮತ್ತು ಅವರ ಚಾಲಕನ ಮೇಲೆ ಈ ವರ್ಷದ ಜೂನ್‌ನಲ್ಲಿ ಮುಂಬೈನಲ್ಲಿ ಗುಂಪೊಂದು ಹಲ್ಲೆ ನಡೆಸಿತ್ತು. ವೈರಲ್ ಆದ ವಿಡಿಯೋವೊಂದರಲ್ಲಿ ನಟಿ ರವೀನಾ ಮತ್ತು ಅವರ ಚಾಲಕ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಕಾರಿನಿಂದ ಹೊರಬಂದ ರವೀನಾ ಅವರನ್ನು ತಳ್ಳಲಾಯಿತು, ಅಷ್ಟೇ ಅಲ್ಲ, ನಟಿ ಕೂಡ ಹಲ್ಲೆಯನ್ನು ಎದುರಿಸಬೇಕಾಯಿತು. ದಯವಿಟ್ಟು ನನ್ನನ್ನು ಕೊಲ್ಲಬೇಡಿ ಎಂದು ರವೀನಾ ಹೇಳುತ್ತಿರುವುದು ಕೇಳಬಹುದು. ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.(ಏಜೆನ್ಸೀಸ್)