blank

ಸುಶಾಂತ್​​ ಸಿಂಗ್​ ಫ್ಲಾಟ್​ಗೆ ಹೋಗಬಾರದಿತ್ತು ಎಂಬುದು..; Adah Sharma ಹೇಳಿದಿಷ್ಟು.. | Bollywood

blank

ಮುಂಬೈ: ನಟಿ ಅದಾ ಶರ್ಮಾ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​ ಅವರ ಫ್ಲಾಟ್​ನಲ್ಲಿ ವಾಸಿಸುತ್ತಿರುವುದು ಗೊತ್ತೆ ಇದೆ. ಬಾಲಿವುಡ್​​​(Bollywood) ನಟ ಸುಶಾಂತ್​​ ಸಾವಿನ ಬಳಿಕ 4 ವರ್ಷಗಳು ಖಾಲಿಯಾಗಿಯೇ ಇದ್ದ ಮನೆಗೆ ನಟಿ ಆದಾ ಶಿಫ್ಟ್​ ಆಗಿದ್ದರು. ಪ್ರಸ್ತುತ ತಾವು ವಾಸವಿರುವ ಮನೆಯ ಕುರಿತು ಇತ್ತೀಚೆಗೆ ನಟಿ ಆದಾ ಶರ್ಮಾ ತಮ್ಮ ಅನುಭವವನ್ನು ಮುಕ್ತವಾಗಿ ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ: ಐ ಆ್ಯಮ್​​ ಎಂಗೇಜ್​​; ಸಂಗಾತಿ ಕುರಿತು ನಟಿ ಶ್ರದ್ಧಾ ಕಪೂರ್​ ಹೇಳಿದ್ದೇನು | Bollywood

ಇತ್ತೀಚಿಗಿನ ಸಂದರ್ಶನವೊಂದರಲ್ಲಿ ನಟಿ ಆದಾ ಶರ್ಮಾ ಅವರಿಗೆ ಈ ಫ್ಲಾಟ್​ನಲ್ಲಿರಲು ಭಯವಾಗುತ್ತದೆಯೇ ಹಾಗೂ ಹೇಗಿದೆ ವೈಬ್ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ನಟಿ ಆದಾ, ಏಕೆ ಭಯಪಡಬೇಕು? ನಾನು ಯಾವುದೇ ತಪ್ಪು ಮಾಡಿಲ್ಲ. ಅಲ್ಲದೆ ಒಬ್ಬ ವ್ಯಕ್ತಿ ಬದುಕಿರುವವರೆಗೂ ಯಾರೂ ಅವನ ಬಗ್ಗೆ ಕಾಳಜಿ ವಹಿಸುವುದಿಲ್ಲ, ಸತ್ತ ನಂತರ ಜನರು ಮಾತನಾಡುತ್ತಾರೆ. ಮನೆಯ ವೈಬ್​​ ತುಂಬಾ ಚೆನ್ನಾಗಿದೆ ಎಂದು ಹೇಳಿದರು.

ಈ ಹಿಂದಿನ ಸಂದರ್ಶನವೊಂದರಲ್ಲಿ ಸುಶಾಂತ್​ ಸಿಂಗ್ ರಜಪೂತ್​ ಅವರ ಫ್ಲಾಟ್‌ಗೆ ಶಿಫ್ಟ್ ಆಗಬಾರದಿತ್ತು ಎಂಬುದು ಜನರ ಅಭಿಪ್ರಾಯವಾಗಿತ್ತು. ಆಗ ನಾನು ನನ್ನ ಮನಸ್ಸಿಗೆ ಏನು ಮಾಡಬೇಕು ಎನ್ನಿಸಿತೋ ಅದನ್ನೇ ಮಾಡಿದೆ ಎಂದು ತಿಳಿಸಿದರು. ಇದೆ ಫ್ಲಾಟ್​ನಲ್ಲಿ ಸುಶಾಂತ್​ ಮೃತಪಟ್ಟಿದ್ದಾರೆ ಎಂದು ತಿಳಿದ ಜನರು ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಸುಶಾಂತ್ ಅವರ ಫ್ಲ್ಯಾಟ್‌ಗೆ ಬಾಡಿಗೆದಾರರು ಸಿಗುತ್ತಿಲ್ಲ ಎಂದು ವರದಿಯಾಗಿತ್ತು.

ಮುಂಬೈನ ಬಾಂದ್ರಾ ವೆಸ್ಟ್‌ನ ಕಾರ್ಟರ್ ರಸ್ತೆಯಲ್ಲಿರುವ ಮಾಂಟ್ ಬ್ಲಾಂಕ್ ಅಪಾರ್ಟ್‌ಮೆಂಟ್‌ನಲ್ಲಿ ಸುಶಾಂತ್ ವಾಸಿಸುತ್ತಿದ್ದ ಫ್ಲ್ಯಾಟ್ ಇದೆ. ಈ ಐಷಾರಾಮಿ ಫ್ಲಾಟ್ 4 ರೂಮ್​ಗಳನ್ನು ಒಳಗೊಂಡಿರುವ ಡ್ಯುಪ್ಲೆಕ್ಸ್ ಹೌಸ್​​​ ಆಗಿದೆ. ಇದು ಸಮುದ್ರ ತೀರದಲ್ಲಿದೆ ಮತ್ತು 2,500 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಈ ಫ್ಲಾಟ್‌ನಲ್ಲಿ ಟೆರೇಸ್ ಕೂಡ ಇದೆ. ಸುಶಾಂತ್ ಸಿಂಗ್ ರಜಪೂತ್ ಈ ಫ್ಲ್ಯಾಟ್ ಅನ್ನು ಮೂರು ವರ್ಷಗಳ ಕಾಲ ಬಾಡಿಗೆಗೆ ತೆಗೆದುಕೊಂಡಿದ್ದರು. ಈ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಲ್ಲಿ ಸುಶಾಂತ್ ವಾಸವಾಗಿದ್ದು ಪ್ರತಿ ತಿಂಗಳು 4.51 ಲಕ್ಷ ರೂಪಾಯಿ ಬಾಡಿಗೆ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್​​)

ನಾನು ಹೇಳಿದ್ದು ಮಾಡದಿದ್ದರೆ ಈ ವಿಡಿಯೋ ಲೀಕ್​ ಮಾಡುತ್ತೇನೆ; ಆರ್ಯನ್​ ವಿರುದ್ಧ Ananya Panday ಬ್ಲಾಕ್​​ಮೇಲ್​ ಆರೋಪ

Share This Article

ನಿಮ್ಮ ಅಂಗೈನಲ್ಲಿ ಈ ಗುರುತು ಇದೆಯಾ ಒಮ್ಮೆ ನೋಡಿ… ಇದ್ರೆ ನಿಮ್ಮಂಥ ಅದೃಷ್ಟವಂತ ಯಾರೂ ಇಲ್ಲ! Palmistry

Palmistry : ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ…

ಹೂಕೋಸನ್ನು ಯಾರು ತಿನ್ನಲೇಬಾರದು? ತಿಂದ್ರೆ ಏನಾಗುತ್ತೆ? ಇಲ್ಲಿದೆ ಉಪಯುಕ್ತ ಮಾಹಿತಿ… Cauliflower

Cauliflower : ಆರೋಗ್ಯಕರವಾಗಿರಲು ಸೀಸನಲ್​ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಬಹಳ ಮುಖ್ಯ. ಅವುಗಳಲ್ಲಿ ಹೂಕೋಸು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ