ಮುಂಬೈ: ಬಾಲಿವುಡ್ ಟಾಪ್ ನಟಿಯರಲ್ಲಿ ಅನನ್ಯಾ ಪಾಂಡೆ(Ananya Panday ) ಕೂಡ ಒಬ್ಬರು. ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಅನನ್ಯಾ ಇತ್ತೀಚೆಗೆ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾದ CTRL ಸುದ್ದಿಯಲ್ಲಿದ್ದಾರೆ. ಈ ಚಿತ್ರಕ್ಕೆ ಸಾಕಷ್ಟು ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಇದರ ಮಧ್ಯೆ ನಟಿ ಅನನ್ಯಾ ಪಾಂಡೆ ಕೆಲವೊಂದು ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಶಾರೂಖ್ ಮಗ ಆರ್ಯನ್ ಖಾನ್ ತನ್ನ ವೈಯಕ್ತಿಕ ವಿಡಿಯೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಆ ಸಿನಿಮಾದ ಬಳಿಕ 1 ತಿಂಗಳು ಕಷ್ಟವಾಗಿತ್ತು; 2-3 ದಿನ ರೂಮ್ನಲ್ಲಿ ಕುಳಿತು ಅಳುತ್ತಿದೆ ಎಂದ Triptii Dimri
ಇತ್ತೀಚಿನ ಸಂದರ್ಶನವೊಂದರಲ್ಲಿ ಅನನ್ಯಾ ಪಾಂಡೆ ಅವರು ತಮ್ಮ ದಿನಚರಿ ಬಗ್ಗೆ ಹಾಗೂ ಆರ್ಯನ್ ಖಾನ್ ನಡೆದುಕೊಂಡಿದ್ದನ್ನು ಮುಕ್ತವಾಗಿ ಮಾತನಾಡಿದ್ದಾರೆ. ಅನನ್ಯಾ ಅವರು ದೈನಂದಿನ ವ್ಲಾಗ್ಗಳನನ್ನು ವೀಕ್ಷಿಸಲು ಮತ್ತು ಮಾಡಲು ಇಷ್ಟಪಡುತ್ತಾರೆ ಎಂದು ಹೇಳಿದರು. ಅವರು ಪ್ರತಿದಿನ ವ್ಲಾಗ್ಗಳನ್ನು ಮಾಡುವುದಾಗಿ ತಿಳಿಸಿದ್ದಾರೆ. ನಾನು ಪ್ರತಿದಿನ ಏನು ಮಾಡುತ್ತೇನೆ ಹಾಗೂ ಏನು ತಿನ್ನುತ್ತೇನೆ ಎಂಬುದನ್ನು ರೆಕಾರ್ಡ್ ಮಾಡುತ್ತಿದ್ದೆ. ಆದರೆ ಅದನ್ನು ಎಲ್ಲಿಯೂ ಪೋಸ್ಟ್ ಮಾಡಲಿಲ್ಲ. ನನ್ನ ಬಳಿಯೇ ಇದೆ ಎಂದು ಹೇಳಿದರು.
ಆಗ ಆ್ಯಪಲ್ನಲ್ಲಿ ಫೋಟೋಬೂತ್ ಬಂದಿತ್ತು. ನಾನು, ಸುಹಾನಾ ಮತ್ತು ಶಾನಯಾ ನಮ್ಮ ದಿನಚರಿ ಮತ್ತು ಚಟುವಟಿಕೆಗಳನ್ನು ರೆಕಾರ್ಡ್ ಮಾಡುತ್ತಿದ್ದೆವು. ನಾವು ಆತನ ಪರವಾಗಿ ಕೆಲಸ ಮಾಡದಿದ್ದರೆ ಆ ವಿಡಿಯೋಗಳನ್ನು ಲೀಕ್ ಮಾಡುವುದದಾಗಿ ಆರ್ಯನ್ ಖಾನ್ ನಮಗೆ ಬೆದರಿಕೆ ಹಾಕುತ್ತಿದ್ದ ಎಂದು ತಿಳಿಸಿದರು.
ನೀನು ನನಗೆ ಕೆಲಸ ಮಾಡಬೇಕಾಗುತ್ತದೆ, ಮಾಡಿದಿದ್ದರೆ ನಾನು ವ್ಲಾಗ್ ಲೀಕ್ ಮಾಡುತ್ತೇನೆ ಎಂದು ಆರ್ಯನ್ ಹೇಳುತ್ತಿದ್ದ ಎಂದು ಅನನ್ಯಾ ಬಹಿರಂಗಪಡಿಸಿದ್ದಾರೆ.
ಅನನ್ಯಾ, ಶಾರೂಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತು ಸಂಜಯ್ ಕಪೂರ್ ಅವರ ಮಗಳು ಶನಯಾ ಕಪೂರ್ ಅವರೊಂದಿಗೆ ಚಿಕ್ಕಂದಿನಿಂದಲೂ ಸ್ನೇಹಿತರಾಗಿದ್ದಾರೆ. ಆರ್ಯನ್ ಖಾನ್ ಸುಹಾನಾ ಅವರ ಅಣ್ಣ. ಇದೆಲ್ಲಾ ನಮ್ಮ ಬಾಲ್ಯದ ನೆನಪುಗಳು ಎಂದು ಅನನ್ಯಾ ನಗುತ್ತಾ ಹೇಳಿದರು. (ಏಜೆನ್ಸೀಸ್)
RRR ನನ್ನ ನೆಚ್ಚಿನ ಚಿತ್ರ; ಪ್ರತಿ ಮೂರು ತಿಂಗಳಿಗೊಮ್ಮೆ ನೋಡುತ್ತೇನೆ ಎಂದ ಹಾಲಿವುಡ್ ನಟಿ