ಐ ಆ್ಯಮ್​​ ಎಂಗೇಜ್​​; ಸಂಗಾತಿ ಕುರಿತು ನಟಿ ಶ್ರದ್ಧಾ ಕಪೂರ್​ ಹೇಳಿದ್ದೇನು | Bollywood

blank

ಮುಂಬೈ: ಶ್ರದ್ಧಾ ಕಪೂರ್ ಅವರ ಹಾರರ್-ಕಾಮಿಡಿ ‘ಸ್ತ್ರೀ 2’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ. ಇತ್ತೀಚೆಗೆ ಆಗಸ್ಟ್ 15 ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನದಿಂದ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಸಿನಿಮಾದ ಸಕ್ಸಸ್​ ಸಂಭ್ರಮದ ಮಧ್ಯೆ ಬಾಲಿವುಡ್​​(Bollywood) ನಟಿ ಶ್ರದ್ಧಾ ಕಪೂರ್​​​ ತಮ್ಮ ವೈಯಕ್ತಿಕ ಜೀವನದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮದುವೆಯ ಬಗ್ಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನು ಓದಿ: ನಾನು ಹೇಳಿದ್ದು ಮಾಡದಿದ್ದರೆ ಈ ವಿಡಿಯೋ ಲೀಕ್​ ಮಾಡುತ್ತೇನೆ; ಆರ್ಯನ್​ ವಿರುದ್ಧ Ananya Panday ಬ್ಲಾಕ್​​ಮೇಲ್​ ಆರೋಪ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಶ್ರದ್ಧಾ ಕಪೂರ್​, ಮೀನಾ ರಾಶಿಗೆ ಸಂಬಂಧಿಸಿದ ಕೆಲವು ಗುಣಲಕ್ಷಣಗಳನ್ನು ಹೊಂದಿದ್ದಾರೆ. ತನ್ನ ಸಂಗಾತಿ ಇರುವವರೆಗೂ ನನಗೆ ಬೇರೆಯವರ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಹೆಸರನ್ನು ಹೇಳದೆ ಶ್ರದ್ಧಾ ಅವರು ಸಂಬಂಧದಲ್ಲಿರುವುದನ್ನು ದೃಢಪಡಿಸಿದ್ದಾರೆ. ನಾನು ನನ್ನ ಸಂಗಾತಿಯೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುತ್ತೇನೆ. ರಾತ್ರಿ ಊಟಕ್ಕೆ ಹೋಗುವುದು ಅಥವಾ ಅವರೊಂದಿಗೆ ಪ್ರಯಾಣಿಸುವುದು ಎಂದರೆ ಇಷ್ಟ ಎಂದಿದ್ದಾರೆ.

ಇದೇ ಸಮಯದಲ್ಲಿ ಮದುವೆಯಲ್ಲಿ ನಿಮಗೆ ನಂಬಿಕೆ ಇದೆಯೇ ಎಂಬ ಪ್ರಶ್ನೆಗೆ ಶ್ರದ್ಧಾ, ‘ಮದುವೆಯಲ್ಲಿ ನಂಬಿಕೆ ಇಡುವುದಲ್ಲ, ಸರಿಯಾದ ವ್ಯಕ್ತಿಯನ್ನು ಹೊಂದಲು ಮತ್ತು ಸರಿಯಾದ ಸಂಗಾತಿಯೊಂದಿಗೆ ಇರುವುದು ಎಂದಿದ್ದಾರೆ. ಯಾರಾದರೂ ಮದುವೆಯಾಗಲು ಬಯಸಿದರೆ ಅದು ಅದ್ಭುತವಾಗಿದೆ, ಆದರೆ ಅವರು ಮದುವೆಯಾಗಲು ಬಯಸದಿದ್ದರೆ ಅದು ಸರಿ ಎಂದು ಅವರು ಹೇಳಿದರು.

ಮಾರ್ಚ್ 2024ರಲ್ಲಿ ಸ್ನೇಹಿತನ ಮದುವೆಯಲ್ಲಿ ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಭಾಗವಹಿಸುವುದು ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಡೇಟಿಂಗ್ ಊಹಾಪೋಹಗಳು ಪ್ರಾರಂಭವಾಗಿದ್ದವು. ಒಟ್ಟಿಗೆ ರಜಾದಿನವನ್ನು ಆನಂದಿಸುತ್ತಿರುವ ಚಿತ್ರಗಳನ್ನು ನಟಿ ಪೋಸ್ಟ್ ಮಾಡಿದಾಗ ವದಂತಿಗೆ ಪುಷ್ಠಿ ನೀಡಿದಂತಾಗಿತ್ತು. ಆದರೆ ಈ ಬಗ್ಗೆ ಇಬ್ಬರು ಎಲ್ಲಿಯೂ ಮಾತನಾಡಿರಲಿಲ್ಲ. (ಏಜೆನ್ಸೀಸ್​)

ಉತ್ತರ ಪತ್ರಿಕೆಯಲ್ಲಿನ ವಿದ್ಯಾರ್ಥಿ ಕೈಬರಹಕ್ಕೆ ಶಾಕ್​ ಆಗದವರೇ ಇಲ್ಲ; ಮಿಸ್​ ಮಾಡ್ದೆ ನೀವು ನೋಡಿ | Viral Video

Share This Article

ಚಳಿಗಾಲ ಶುರುವಾಗ್ತಿದೆ ಜೇನುತುಪ್ಪ ಸೇವಿಸಿದ್ರೆ ಈ ಆರೋಗ್ಯ ಸಮಸ್ಯೆಗಳು ನಿಮ್ಮತ್ರ ಸುಳಿಯೋದೇ ಇಲ್ಲ! Honey in Winter

Honey in Winter : ಚಳಿಗಾಲ ಇನ್ನೇನು ಶುರುವಾಗಲಿದೆ. ಈ ಚಳಿಗಾಲ ನಮ್ಮ ಚರ್ಮಕ್ಕೆ ತುಂಬಾನೇ…

ಇಲ್ಲಿದೆ ಜೀವನದ ಗುಟ್ಟು… ಅಪ್ಪಿತಪ್ಪಿಯೂ ಈ ವಿಚಾರಗಳನ್ನು ಎಂದಿಗೂ ಯಾರೊಂದಿಗೂ ಹೇಳಿಕೊಳ್ಳಬೇಡಿ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

ನಿಮ್ಮ ಅಂಗೈನಲ್ಲಿ ಈ ಗುರುತು ಇದೆಯಾ ಒಮ್ಮೆ ನೋಡಿ… ಇದ್ರೆ ನಿಮ್ಮಂಥ ಅದೃಷ್ಟವಂತ ಯಾರೂ ಇಲ್ಲ! Palmistry

Palmistry : ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ