ಶಾಲೆಯಿಂದ ಕಾಲೇಜಿನವರೆಗು ಹಾಗೂ ನಮ್ಮ ಪ್ರತಿಯೊಂದು ಬರವಣಿಗೆಗೆ ಬಹಳ ಪ್ರಾಮುಖ್ಯತೆ ಇದೆ. ಬಾಲ್ಯದಿಂದಲೂ ಪಾಲಕರು ಮಕ್ಕಳ ಬರವಣಿಗೆಯನ್ನು ಸುಧಾರಿಸಲು ಹೆಚ್ಚಿನ ಒತ್ತು ನೀಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ(Viral Video) ವಿದ್ಯಾರ್ಥಿಯ ಬರವಣಿಗೆಯು ಹರಿದಾಡುತ್ತಿದೆ. ಪರೀಕ್ಷೆಯಲ್ಲಿನ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆಯಲ್ಲಿನ ಬರವಣಿಗೆಯೂ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಈ ವಿಡಿಯೋ ಪಾಕಿಸ್ತಾನದ್ದೂ ಎನ್ನಲಾಗಿದೆ.
ಇದನ್ನು ಓದಿ: ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಶಿಕ್ಷಕರ ಎಡವಟ್ಟು; ₹64 ಲಕ್ಷ ದಂಡ ವಸೂಲಿ | State Education Department
ವೈರಲ್ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬನ ಸ್ವಚ್ಛವಾದ ಉತ್ತರ ಪತ್ರಿಕೆಯಲ್ಲಿ ಮುದ್ದಾದ ಅಕ್ಷರಗಳನ್ನು ನೋಡಬಹುದು. ಅ ಹುಡುಗ 8ನೇ ತರಗತಿಯ ವಿದ್ಯಾರ್ಥಿ ಎಂಬುದು ಸ್ಪಷ್ಟವಾಗುತ್ತದೆ. ಆತ ತನ್ನ ಉತ್ತರಪತ್ರಿಕೆಯನ್ನು ಕ್ಯಾಲಿಗ್ರಫಿಯಲ್ಲಿ ಬರೆದಿದ್ದಾನೆ. ಎಷ್ಟು ಸುಂದರವಾಗಿ ಕಾಣುತ್ತದೆ ಎಂದರೆ ಅದು ಆತ ಬರೆದಿರುವುದೋ ಅಥವಾ ಕಂಪ್ಯೂಟರ್ನಿಂದ ಪ್ರಿಂಟ್ ತೆಗೆದಿರುವುದೋ ಎಂದು ಗೊಂದಲಕ್ಕೆ ಒಳಗಾಗುವುದಂತು ನಿಜ.
ಯಾರಿಗೆ ತುಂಬಾ ಸಮಯವಿದೆ? ಎಂಬ ಶೀರ್ಷಿಕೆಯಡಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಈ ಉತ್ತರ ಪತ್ರಿಕೆಯಲ್ಲಿನ ಬರವಣಿಗೆಯನ್ನು ಒಮ್ಮೆ ನೋಡಿದ ನಂತರ ಯಾರೇ ಆದರೂ ಮತ್ತೊಮ್ಮೆ ನೋಡಲು ಬಯಸುತ್ತಾರೆ. ಉತ್ತರಗಳ ಹೆಡ್ಲೈನ್ ಮತ್ತು ಉತ್ತರ ಸಂಖ್ಯೆಯನ್ನು ಸುಂದರವಾಗಿ ಹೈಲೈಟ್ ಮಾಡಿದ್ದಾನೆ.
ಈ ಪೋಸ್ಟ್ ಇದುವರೆಗೆ 7 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. 13 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅನೇಕರ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಚಲಿಸುವ ಮುದ್ರಣ ಯಂತ್ರದಂತೆ ತೋರುತ್ತಿದೆ, ಪ್ರತಿ ತರಗತಿಯಲ್ಲಿ ಅಂತಹ ವಿದ್ಯಾರ್ಥಿ ಇರುತ್ತಾನೆ, ಅವನು ವಿದ್ಯಾರ್ಥಿಯೋ ಅಥವಾ ಮುದ್ರಕನೋ?, ಅವರ ಉತ್ತಮ ಕೈಬರಹಕ್ಕಾಗಿ 10 ಅಂಕಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಕರು ಕಾಪಾಡಲು ಹೆಬ್ಬಾವನ್ನು ಹಿಂಸಿಸುತ್ತಿರುವ ಜನರು; ವಿಡಿಯೋ ನೋಡಿ ನೆಟ್ಟಿಗರು ಹೀಗೆಳಿದ್ದೇಕೆ.. | Viral Video