VIDEO| ಅಮೆರಿಕ ಚಾನೆಲ್​ ಎಬಿಸಿಗೆ 'ನಮಸ್ತೆ' ಪಾಠ ಮಾಡಿದ ಬಾಲಿವುಡ್​ ನಟಿ ರವೀನಾ ಟಂಡನ್​!

Raveena Tandon
Published on

ಮುಂಬೈ: "ನಮಸ್ತೆ" ಎಂದು ನೇರವಾಗಿ ಹೇಳುವ ಬದಲು "ಪಾರ್ಥನೆ ರೀತಿಯ ಸಂಕೇತ" ಎಂದಿರುವ ಅಮೆರಿಕನ್​ ನ್ಯೂಸ್​ ಚಾನೆಲ್​ 'ಎಬಿಸಿ'ಗೆ ಬಾಲಿವುಡ್​ ನಟಿ ರವೀನಾ ಟಂಡನ್​ ಸಖತ್ತಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಎಬಿಸಿ ಚಾನೆಲ್​ ತನ್ನ ಟ್ವಿಟರ್​ ಖಾತೆಯಲ್ಲಿ ಯುನೈಟೆಂಡ್​ ಕಿಂಗ್​ಡಮ್ ಪ್ರಿನ್ಸ್​ ಚಾರ್ಲ್ಸ್​ ಅವರ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ.

ವಿಡಿಯೋದಲ್ಲಿ ಏನಿದೆ?: ಕಾರ್ಯಕ್ರಮಕ್ಕೆ ಆಗಮಿಸುವ ಪ್ರಿನ್ಸ್​ ಚಾರ್ಲ್ಸ್​ ಕಾರಿನಿಂದ ಇಳಿದ ಬಳಿಕ ತಮ್ಮನ್ನು ಸ್ವಾಗತಿಸುವ ವ್ಯಕ್ತಿಗೆ ಶೇಕ್​ ಹ್ಯಾಂಡ್​ ಮಾಡಲು ಮುಂದಾಗುತ್ತಾರೆ. ಈ ವೇಳೆ ಕರೊನಾ ಭೀತಿ ಅರಿವಾಗಿ ತಕ್ಷಣ ತಮ್ಮ ಕೈಗಳನ್ನು ಹಿಂತೆಗೆದುಕೊಂಡು ಭಾರತೀಯ ಸಂಸ್ಕೃತಿಯಂತೆ ಎರಡು ಕೈಗಳನ್ನು ಜೋಡಿಸಿ ನಮಸ್ತೆ ಮಾಡುತ್ತಾರೆ. ಬಳಿಕ ಎಲ್ಲ ಅತಿಥಿಗಳ ಮುಂದೆ ಅದನ್ನೇ ಪಾಲಿಸುತ್ತಾರೆ.

ಕರೊನಾ ಕಾಳಜಿಯಿಂದ ಅತಿಥಿಗಳೊಂದಿಗೆ ಹ್ಯಾಂಡ್​ ಶೇಕ್​ ಮಾಡದೆ ಪ್ರಿನ್ಸ್​ ಚಾರ್ಲ್ಸ್​ ಪಾರ್ಥನೆ ರೀತಿಯ ಸಂಕೇತವನ್ನು ಬಳಸಿದ್ದಾರೆ ಎಂದು ಎಬಿಸಿ ಟ್ವಿಟರ್​ನಲ್ಲಿ ಬರೆದುಕೊಂಡಿದೆ.

ಇದಕ್ಕೆ ರೀಟ್ವೀಟ್​ ಮಾಡಿರುವ ರವೀನಾ ಟಂಡನ್​, ಅದು ಪಾರ್ಥನೆ ರೀತಿಯ ಸಂಕೇತವಲ್ಲ. ಅದನ್ನು ನಮಸ್ತೆ ಎಂದು ಕರೆಯುತ್ತಾರೆ. ಸಾರ್ವಜನಿಕವಾಗಿ ಹೇಳುವ ಮುನ್ನ ಅದೇನೆಂದು ತಿಳಿಯಲು ಮನೆಯಲ್ಲಿ ಸ್ವಲ್ಪ ಹೋಮ್​ವರ್ಕ್​ ಮಾಡಿಕೊಳ್ಳಿ ಎಂದು ಎಬಿಸಿಗೆ ರವೀನಾ ನಮಸ್ತೆ ಪಾಠ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net