More

    ಹೀಗೆ ಮಾಡಿದರೆ ಕರೊನಾ ವೈರಸ್​ನಿಂದ ತಪ್ಪಿಸಿಕೊಳ್ಳಬಹುದು: ವೃದ್ಧನ ಪ್ಲಾನ್​ಗೆ ಭೇಷ್​ ಎಂದ ನೆಟ್ಟಿಗರು

    ರೋಮ್​: ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್​ ವಿಶ್ವದಾದ್ಯಂತ ಹರಡಿದೆ. ಚೀನಾದ ನಂತರ ಇಟಲಿಯಲ್ಲಿ ಅತಿ ಹೆಚ್ಚು ಜನರಲ್ಲಿ ಕರೊನಾ ವೈರಸ್​ ಪತ್ತೆಯಾಗಿದ್ದು, ಅಲ್ಲಿನ ಜನರು ಭಯಭೀತರಾಗಿದ್ದಾರೆ. ಕರೊನಾ ವೈರಸ್​ನಿಂದ ತಪ್ಪಿಸಿಕೊಳ್ಳುವುದಕ್ಕೆಂದು ವೃದ್ಧನೊಬ್ಬ ಒಂದು ಉಪಾಯ ಮಾಡಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳಲಾರಂಭಿಸಿದೆ.

    ರೋಮ್​ನ ಮರ್ಕಾಟೋ ಟೆಸ್ಟಾಸಿಯೊ ನಗರದಲ್ಲಿ ವೃದ್ಧನೊಬ್ಬ ತನ್ನ ಸುತ್ತ ವೃತ್ತಾಕಾರದ ಆಕೃತಿಯೊಂದನ್ನು ಧರಿಸಿಕೊಂಡಿದ್ದು ತನ್ನ ಸುತ್ತ ಮುತ್ತ ಒಂದು ಮೀಟರ್​ ಅಂತರದಲ್ಲಿ ಯಾರೂ ಸುಳಿದಾಡದಂತೆ ರಕ್ಷಿಸಿಕೊಂಡಿದ್ದಾನೆ. ಇದರಿಂದಾಗಿ ವೈರಸ್​ ಸೋಂಕಿತರು ಸೇರಿದಂತೆ ಯಾರೊಬ್ಬರೂ ತನ್ನ ಹತ್ತಿರ ಸುಳಿಯುವುದಕ್ಕೆ ಆಗುವುದಿಲ್ಲವಾದ್ದರಿಂದ ತಾನು ಕರೊನಾ ಇಂದ ಬಚಾವಾಗುತ್ತೇನೆ ಎನ್ನುವುದು ಆತನ ಉಪಾಯ.

    ವೃದ್ಧನ ಈ ಉಪಾಯನ್ನು ವಿಡಿಯೋ ಮಾಡಲಾಗಿದ್ದು ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಳಿ ವಯಸ್ಸಿನಲ್ಲಿ ಆತ ತೋರಿರುವ ಚಾಣಾಕ್ಷತನದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ.

    ಇಟಲಿಯಲ್ಲಿ ಈವೆರಗೆ 15,113 ಜನರಲ್ಲಿ ಕರೊನಾ ವೈರಸ್​ ಇರುವುದು ಪತ್ತೆಯಾಗಿದ್ದು, 1,016 ಜನರು ವೈರಸ್​ನಿಂದಾಗಿ ಮೃತರಾಗಿರುವುದು ವರದಿಯಾಗಿದೆ.(ಏಜೆನ್ಸೀಸ್​)

    ಊಬರ್​ನಲ್ಲಿ ಇಂತದ್ದನ್ನೂ ಬಿಟ್ಟು ಹೋಗುತ್ತಾರಾ? ಶಾಕಿಂಗ್​ ಆಗಿದೆ ಊಬರ್​ ನೀಡಿರುವ ಮಾಹಿತಿ

    ಕೆಜಿಎಫ್-2​ ಸಿನಿಮಾ ಅಡ್ಡದಿಂದ ಬಂತು ಬ್ರೇಕಿಂಗ್​ ನ್ಯೂಸ್​: ಬಿಡುಗಡೆ ದಿನಾಂಕ ಘೋಷಿಸಿದ ರಾಕಿ ಭಾಯ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts