'ಸರಳ ಬರ್ತಡೆ ಪಾರ್ಟಿಯ ಸಂಭ್ರಮದ ಆ ದಿನಗಳು' ನೆನಪಿನಾಳಕ್ಕಿಳಿದಿದ್ದಾರೆ ನಟಿ ರವೀನಾ

raveena
Published on

ನವದೆಹಲಿ: ಖ್ಯಾತ ನಟಿ ರವೀನಾ ಟೆಂಡನ್ ಆಗಾಗ ನೆನಪಿನಾಳಕ್ಕಿಳಿಯುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿನ ಅವರ ಪೋಸ್ಟ್​​ಗಳೇ ಇದಕ್ಕೆ ಸಾಕ್ಷಿ.

ಸದ್ಯ ಅವರು ತಮ್ಮ ಬಾಲ್ಯದ ಹುಟ್ಟುಹಬ್ಬದ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ನೆನಪಿನ ದೋಣಿಯಲ್ಲಿ ಪಯಣಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.

“ಬಾಲ್ಯದ ದಿನಗಳ ಸರಳ ಹುಟ್ಟುಹಬ್ಬದ ಸಂಭ್ರಮ, ಪಾರ್ಟಿ, ಪಾರ್ಸೆಲ್, ಚಟ್ನಿ ಸ್ಯಾಂಡ್‌ವಿಚ್‌ಗಳು, ಕೇಕ್ ತಯಾರಿಸುವ ಕ್ಷಣಗಳು, ತಾಯಿ ಮತ್ತು ಎಲ್ಲರೊಂದಿಗೆ ಆಚರಿಸಿಕೊಂಡ ಸಂಭ್ರಮದ ಹುಟ್ಟು ಹಬ್ಬದ ಕ್ಷಣಗಳು” ಎಂದು ನೆನಪನ್ನು ಮೆಲುಕು ಹಾಕಿದ್ದಾರೆ. ಚಿತ್ರದಲ್ಲಿ 3 ವರ್ಷದ ಪುಟ್ಟ ಬಾಲಕಿ ರವೀನಾ, ಚಿಕ್ಕಮ್ಮನ ತೊಡೆ ಮೇಲೆ ಕುಳಿತು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ರವೀನಾ ಆಗಾಗ ತಮ್ಮ ಬದುಕಿನ, ಸುಂದರ ಕ್ಷಣಗಳನ್ನು, ನೆನಪುಗಳನ್ನು ಹಂಚಿಕೊಳ್ಳುತ್ತಾರೆ -ಕೆಲವು ದಿನಗಳ ಹಿಂದೆ, ಮಗ ರಣಬೀರ್​​ ವರ್ಧನ್ 13ರ ಹರೆಯಕ್ಕೆ ಕಾಲಿಡುತ್ತಿದ್ದಂತೆ ಅವರ ಒಂದೆರಡು ಚಿತ್ರಗಳನ್ನು ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು.

ತಮ್ಮ ತಂದೆ ತಾಯಿಯ 54 ನೇ ವಿವಾಹ ವಾರ್ಷಿಕೊತ್ಸವದಂದು ಫೋಟೋಗಳನ್ನು ಹಂಚಿಕೊಂಡು ಶುಭಾಶಯ ಕೋರಿದ್ದರು.

ರವೀನಾ, ಖೇಲ್ ಖೇಲ್ ಮೇ (1975), ಮಜ್ಬೂರ್ ಮತ್ತು ಖುದ್ದಾರ್ (1982) ಚಿತ್ರಗಳ ಮೂಲಕ ಹೆಸರುವಾಸಿಯಾದ ಅನುಭವಿ ನಿರ್ದೇಶಕ ಮತ್ತು ನಿರ್ಮಾಪಕ ರವಿ ಟಂಡನ್ ಅವರ ಪುತ್ರಿ.

ರವೀನಾ 90 ರ ದಶಕದಲ್ಲಿ ದೊಡ್ಡ ತಾರೆಯಾಗಿದ್ದು, ಮೊಹ್ರಾ, ಅಂದಾಜ್ ಅಪ್ನಾ ಅಪ್ನಾ, ಮೈ ಖಿಲಾಡಿ ತೂ ಅನಾಡಿ ಮುಂತಾದ ಯಶಸ್ವಿ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು.

ಚಿತ್ರ ವಿತರಕ ಅನಿಲ್ ಥದಾನಿ ಅವರನ್ನು ವರಿಸಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ರವೀನಾ ಮದುವೆಗೆ ಮೊದಲು ಇಬ್ಬರು ಹುಡುಗಿಯರನ್ನು ದತ್ತು ಪಡೆದು ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈ ಹಿಂದೆ ಅವರು ದತ್ತು ಮಗಳು ಛಾಯಾ ಅವರ ವಿವಾಹದ ಚಿತ್ರಗಳನ್ನು ಹಂಚಿಕೊಂಡಿದ್ದರು. ಕಳೆದ ವರ್ಷ ಅವರಿಗೆ ಮೊಮ್ಮಗು ಜನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net