

ಸಿನಿಮಾ ಇಂಡಸ್ಟ್ರಿಯಲ್ಲಿ ಮೂರು ವರ್ಷಗಳ ಪ್ರಯಾಣ ಮುಗಿಸಿರುವ ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ ನಿನ್ನೆ #RashmikaReplies ಮೂಲಕ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿಸಿದ್ದರು. ಅಭಿಮಾನಿಗಳ ಪ್ರಶ್ನೆಗಳ ಮಹಾಪೂರ ನೋಡಿದ ಬಳಿಕ ಭಾನುವಾರ ಬೆಳಗ್ಗೆ 11 ಗಂಟೆಗೆ ಲೈವ್ ಮೂಲಕ ಉತ್ತರ ನೀಡುವುದಾಗಿ ಹೇಳಿದ್ದರು.
ನಿನ್ನೆ ಅವರು #RashmikaReplies ಮೂಲಕ ಪ್ರಶ್ನೆ ಕೇಳುವಂತೆ ಕೋರಿದಾಗ ಅವರು ಕೂಡಲೇ ಉತ್ತರಿಸುತ್ತಾರೆ ಎಂದು ಭಾವಿಸಿದ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಅವರ ಮುಂದಿರಿಸಿದ್ದರು. ಉತ್ತರ ಬಾರದೇ ಇದ್ದಾಗ ನಿರಾಶರಾಗಿ ಚಿತ್ರ ವಿಚಿತ್ರವಾಗಿ ಪ್ರತಿಕ್ರಿಯೆ ನೀಡಲಾರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ಕೆಲ ಹೊತ್ತಿನ ನಂತರ ಭಾನುವಾರ ಬೆಳಗ್ಗೆ 11 ಗಂಟೆಗೆ ನೇರ ಪ್ರಸಾರದಲ್ಲಿ ಉತ್ತರಿಸುವುದಾಗಿ ಹೇಳಿದ್ದರು.
ಅದರಂತೆ ಈಗ ನೇರ ಪ್ರಸಾರ ಆರಂಭಿಸಿದ್ದು, ಸಿನಿಮಾ ಜರ್ನಿಯ ಅನುಭವ ಮತ್ತು ಇತರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ.