ಈ ನಿರ್ದೆಶಕನೊಂದಿಗೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ ಸೌತ್ ಬ್ಯೂಟಿ ರಶ್ಮಿಕಾ ಮಂದಣ್ಣ

WhatsApp Image 2024-05-28 at 10.13.58 AM
Published on

ಆಂಧ್ರಪ್ರದೇಶ: ಕನ್ನಡ ಚಿತ್ರರಂಗದಿಂದ ಹೆಜ್ಜೆಯಿಟ್ಟು ಇಂದು ಟಾಲಿವುಡ್​, ಬಾಲಿವುಡ್​ನಲ್ಲಿ ಅಪಾರ ಯಶಸ್ಸನ್ನು ನೋಡಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಸ್ಟಾರ್ ನಿರ್ದೇಶಕರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಪ್ರಸ್ತುತ 'ಪುಷ್ಪಾ 2' ಚಿತ್ರದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾ, ಚಿತ್ರೀಕರಣದ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ಈ ಚಿತ್ರ ಇದೇ ಆಗಸ್ಟ್​ 15ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ನಿನ್ನೆಯಷ್ಟೇ 'ಗಂ ಗಂ ಗಣೇಶ' ಚಿತ್ರದ ಪ್ರೀ-ರಿಲೀಸ್ ಈವೆಂಟ್​ನಲ್ಲಿ ಪಾಲ್ಗೊಂಡ ರಶ್ಮಿಕಾ, ನನಗೆ ಹೆಸರಾಂತ ನಿರ್ದೇಶಕ ಸಾಯಿ ರಾಜೇಶ್ ಅವರೊಂದಿಗೆ ಕೆಲಸ ಮಾಡುವ ಹಂಬಲವಿದೆ. ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ನಾನು ನಟಿಸಬೇಕು ಎಂಬ ಆಸೆಯಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ಪುಷ್ಟಿ, ಸಾಯಿ ರಾಜೇಶ್ ನಿರ್ದೇಶನದ ತೆಲುಗಿನ ಬ್ಲಾಕ್​ಬಸ್ಟರ್​ 'ಬೇಬಿ' ಸಿನಿಮಾ. ಹೌದು, ಈ ಚಿತ್ರವನ್ನು ನೋಡಿದ ರಶ್ಮಿಕಾ, ಚಿತ್ರದ ಕಥೆಯನ್ನು ಪರದೆಯ ಮೇಲೆ ನೋಡಿ, ಕಣ್ಣೀರಿಟ್ಟಿದ್ದರು.

ಈ ಸಿನಿಮಾದಲ್ಲಿನ ಅತ್ಯದ್ಭುತ ಕೆಲಸ ನೋಡಿ ಸಾಯಿ ರಾಜೇಶ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟಿ, ನಿಮ್ಮೊಂದಿಗೆ ಖಂಡಿತ ಒಂದು ಸಿನಿಮಾ ಮಾಡುವ ಆಸೆಯಿದೆ ಎಂದು ಹೇಳಿದ್ದರು. ಸದ್ಯ ರಾಜೇಶ್​ ಇದನ್ನು ಹೇಗೆ ಪರಿಗಣಿಸುತ್ತಾರೆ? ರಶ್ಮಿಕಾ ಅವರಿಗೆ ಹೊಸ ಪಾತ್ರವನ್ನು ರೂಪಿಸಲಿದ್ದಾರಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net