ರಶ್ಮಿಕಾ ಮಂದಣ್ಣ ಕಣ್ಣುಗಳು ಅತ್ಯಂತ ಶುದ್ಧ: 'ಛಾವ' ನಿರ್ದೇಶಕ ಓಪನ್​ ಟಾಕ್​ | Rashmika Mandanna

ವಿಜಯವಾಣಿ - 2025-01-26T124531.108
Published on

Rashmika Mandanna: ದಕ್ಷಿಣ ಭಾರತದಿಂದ ಹಿಡಿದು ಉತ್ತರ ಭಾರತದವರೆಗೂ ತನ್ನ ಖ್ಯಾತಿಯನ್ನು ಪಸರಿಸಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಇತ್ತೀಚೆಗಷ್ಟೇ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಮೂಲಕ ಸಿನಿಪ್ರೇಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದರು.

ಸಖತ್ ಸದ್ದು

ಬಾಲಿವುಡ್​ ನಟ ವಿಕ್ಕಿ ಕೌಶಲ್​ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಛಾವ' ಚಿತ್ರಕ್ಕೆ ನಾಯಕಿ ಆಗಿ ಆಯ್ಕೆಯಾಗಿರುವ ರಶ್ಮಿಕಾ ಮಂದಣ್ಣ, ಪ್ರಥಮ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಸಿನಿಪ್ರಿಯರ ಮುಂದೆ ಹಾಜರಾಗಲು ಸಜ್ಜಾಗಿದ್ದಾರೆ. ಇದಕ್ಕಾಗಿ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ರಾಣಿ ಯೇಸುಬಾಯಿ ಪಾತ್ರದಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ, ಇದೊಂದು ಪಾತ್ರದಿಂದಲೇ ಕಳೆದ ಕೆಲವು ದಿನಗಳಿಂದ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ಯೇಸುಬಾಯಿ ಪಾತ್ರ

ಯಾವ ಚಿತ್ರರಂಗಕ್ಕೆ ಕಾಲಿಟ್ಟರು ಕೂಡ ಯಶಸ್ಸು ನೋಡುತ್ತಿರುವ ರಶ್ಮಿಕಾ, ಸ್ಯಾಂಡಲ್​ವುಡ್​, ಟಾಲಿವುಡ್​ನಲ್ಲಿ ಅಬ್ಬರಿಸಿದ ನಂತರ ಮುಖ ಮಾಡಿದ್ದೇ ಬಾಲಿವುಡ್​. 'ಅನಿಮಲ್'​ ಚಿತ್ರದ ಮೂಲಕ ಹಿಂದಿ ಅಂಗಳಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಅಲ್ಲಿನ ಪ್ರೇಕ್ಷಕರ ಮನಸು ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದೀಗ 'ಛಾವ' ಸಿನಿಮಾದಲ್ಲಿನ ರಾಣಿ ಯೇಸುಬಾಯಿ ಪಾತ್ರದಲ್ಲಿ ಮಿಂಚಲು ಎದುರುನೋಡುತ್ತಿರುವ ರಶ್ಮಿಕಾಗೆ ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದುಬರುತ್ತಿವೆ. ಈ ಮಧ್ಯೆ ಚಿತ್ರದ ನಿರ್ದೇಶಕರು ಮಾತನಾಡಿ, ತಾವು ಏಕೆ ಯೇಸುಬಾಯಿ ಪಾತ್ರಕ್ಕೆ ರಶ್ಮಿಕಾರನ್ನೇ ಆಯ್ಕೆ ಮಾಡಿಕೊಂಡರು ಎಂಬುದನ್ನು ಬಹಿರಂಗವಾಗಿ ತಿಳಿಸಿದ್ದಾರೆ.

"ಮರಾಠಿ ರಾಣಿ ಛತ್ರಪತಿ ಸಂಭಾಜಿ ಮಹಾರಾಜರ ಪತ್ನಿ ರಾಣಿ ಯೇಸುಬಾಯಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಇಷ್ಟೇ, ನನಗೆ ರಶ್ಮಿಕಾ ಅವರ ಕಣ್ಣುಗಳು ಬಹಳ ಶುದ್ಧವಾಗಿ ಕಂಡಿತು. ಅವರ ಕಣ್ಣುಗಳಲ್ಲಿ ಆ ಶುದ್ಧತೆಯಿದೆ, ಇದು ಆ ಪಾತ್ರಕ್ಕೂ ತುಂಬ ಅಗತ್ಯವಿದೆ. ಹೀಗಾಗಿ ಅವರನ್ನು ಆಯ್ಕೆ ಮಾಡಿಕೊಂಡೆ" ಎಂದು ನಿರ್ದೇಶಕ ಲಕ್ಷ್ಮಣ್ ಉಟ್ಕರ್​ ನಟಿಯ ಅಭಿನಯವನ್ನು ಸಹ ಮೆಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net