

ಕೆನಡಾ: ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇಂದಿನ ಯುವ ಪೀಳಿಗೆ ಅವರಿಗೆ ಪ್ರತಿನಿತ್ಯ ಕೊಡಿಸಿದರು ಪಿಜ್ಜಾ ತಿನ್ನುವ ಯುವಕ-ಯುವತಿಯರಿದ್ದಾರೆ. ಆದರೆ ನೀವು ಸಾವಿರಾರೂ ರೂಪಾಯಿ ಕೊಟ್ಟಿ ಪಿಜ್ಜಾ ತಿಂದಿರಬಹುದು. ಆದರೆ ನಾವು ಇಂದು ಹೇಳುತ್ತಿರುವ ಪಿಜ್ಜಾ ಕೋಟಿ ಕೋಟಿ ಬೆಲೆ ಬಾಳುತ್ತದೆ.
ರ‍್ಯಾಪರ್ ಡ್ರೇಕ್ ಅರ್ಧ ತಿಂದ ಪಿಜ್ಜಾ ಸ್ಲೈಸ್ ಅನ್ನು 500,000 ಅಮೆರಿಕ ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ 4 ಕೋಟಿ ರೂ. ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಡ್ರೇಕ್‌ನ ಆಪ್ತ ಸ್ನೇಹಿತ ರ‍್ಯಾಪರ್ ಲಿಲ್ ಯಾಚ್ಟಿ ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾನೆ. ಇದು ಜೂನ್ 2 ರಂದು ಲೈವ್ ಸ್ಟ್ರೀಮ್ ಸಮಯದಲ್ಲಿ ಪ್ರಾರಂಭವಾಯಿತು ಮತ್ತು ಮೂಲತಃ ತಮಾಷೆಗಾಗಿ ಉದ್ದೇಶಿಸಲಾಗಿತ್ತು. ಆದರೂ, ಜನರು ಈ ಬಗ್ಗೆ ಕುತೂಹಲ ತೋರುತ್ತಿದ್ದಾರೆ ಮತ್ತು 'ಹಾಟ್‌ಲೈನ್ ಬ್ಲಿಂಗ್' ಗಾಯಕ ಅರ್ಧ ತಿಂದ ಪಿಜ್ಜಾ ಸ್ಲೈಸ್ ಬಗ್ಗೆ ಕೇಳಲು ಪ್ರಾರಂಭಿಸಿದರು. ಬಳಿಕ, "ಈ ಡ್ರೇಕ್ ಬಿಟ್ ಸ್ಲೈಸ್ ಪಿಜ್ಜಾವನ್ನು 500k ಗೆ ಮಾರಾಟ ಮಾಡುತ್ತಿದ್ದೇನೆ" ಎಂದು ಬರೆದಿದ್ದಾರೆ.
ಈ ಪೋಸ್ಟ್ ನೋಡಿದ ನೆಟ್ಟಿಗರು,"ನಾನು ಅದನ್ನು ಖರೀದಿಸುತ್ತಿದ್ದೇನೆ, ಏನಿದು ನನಗೆ ಅರ್ಥವಾಗುತ್ತಿಲ್ಲ" ಎಂದು ವಿಚಿತ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಅರ್ಧ ತಿಂದು ಬಿಟ್ಟಿರುವ ಪಿಜ್ಜಾ ಖರೀದಿ ಮಾಡುವ ಬಗೆ ಹೇಗೆ ಎಂದು ವಿಚಾರಿಸುತ್ತಿದ್ದಾರೆ.