ತಂದೆಯಿಂದ ಬಚಾವಾಗಲು ಮನೆ ಬಿಟ್ಟಳು; ರಕ್ಷಣೆ ಕೊಡ್ತೇವೆ ಎಂದ ಪರರ ನಂಬಿ ಕೆಟ್ಟಳು!

harassment
Published on

ಜೈಪುರ: ಆಘಾತಕಾರಿ ಘಟನೆ ಒಂದರಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಮೇಲೆ 68 ವರ್ಷದ ತಂದೆ ಸೇರಿದಂತೆ ಇನ್ನಿಬ್ಬರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯೂ ಜೂನ್​ 22ರಂದು ನಡೆದಿದ್ದು, ಅಪ್ರಾಪ್ತ ವಯಸ್ಕಳನ್ನು ಆಕೆಯ ತಂದೆಯಿಂದ ರಕ್ಷಿಸುವ ನೆಪದಲ್ಲಿ ಇನಬ್ಬರು ದುರುಳರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಂದೆಯಿಂದಲೇ ಕೃತ್ಯ

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು ಜೂನ್​ 26ರಂದು ಬಾಲಕಿಯ ತಂದೆ ಪೊಲೀಸ್​ ಠಾಣೆಯಲ್ಲಿ ತಮ್ಮ ಮಗಳು ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿರುವುದರ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪ್ರಾಪ್ತ ವಯಸ್ಕಳನ್ನು ರಕ್ಷಿಸಿದಾಗ ನೀಚ ಕೃತ್ಯ ಬೆಳಕಿಗೆ ಬಂದಿದೆ.

Rajasthan Police

ಜೂನ್​ 22ರಂದು ಘಟನೆ ನಡೆದಿದ್ದು, ಅಪ್ರಾಪ್ತ ವಯಸ್ಕಳ ಮೇಲೆ ಆಕೆಯ ತಂದೆ(68) ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ತನ್ನ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ಸಹಿಸಲಾಗದೆ ಬಾಲಕಿಯೂ ಮನೆ ಬಿಟ್ಟು ಬಂದಿದ್ದಾಳೆ. ಈ ವೇಳೆ ದಾರಿ ಮಧ್ಯೆ ಆಕೆಗೆ 29 ವರ್ಷದ ವ್ಯಕ್ತಿಯೋರ್ವ ಪರಿಚಯವಾಗಿದ್ದು, ಆತನ ಬಳಿ ತನಗಾದ ಕುರಿತು ಹೇಳಿಕೊಂಡಿದ್ದಾಳೆ.

ರಕ್ಷಿಸುವ ನೆಪದಲ್ಲಿ ದೌರ್ಜನ್ಯ

ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಯೂ ಆಕೆಗೆ ತನ್ನ ತಂದೆಯಿಮದ ರಕ್ಷಣೆ ಕೊಡಿಸುವುದಾಗಿ ಪುಸಲಾಯಿಸಿ ಬೇರೊಂದು ಸ್ಥಳಕ್ಕೆ ಕರೆದೊಯ್ದು ತನ್ನ ಸ್ನೇಹಿತನ ಜತೆಗೂಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಜೂನ್​ 30ರಂದು ಬಾಲಕಿಯನ್ನು ದುರುಳರಿಂದ ರಕ್ಷಿಸಲಾಗಿದ್ದು, ಆಕೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರಕರಣ ಸಂಬಂಧ ಬಾಲಕಿಯ ತಂದೆ ಹಾಗೂ ಆಕೆಗೆ ರಕ್ಷಣೆ ಕೊಡುವ ನೆಪದಲ್ಲಿ ದುರುಪಯೋಗ ಮಾಡಿಕೊಂಡ ಇನ್ನಿಬ್ಬರ ವಿರುದ್ಧ ಭಾರತ ದಂಡ ಸಂಹಿತೆ(IPC Section) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net