7 ತಿಂಗಳ ಮಗುವಿನ ಮೇಲೆ ಅತ್ಯಾಚಾರ; ಆರೋಪಿ ಬಂಧನ | Arrest

arrest (1)
Published on

ಕೋಲ್ಕತ್ತಾ: ಕಳೆದ ತಿಂಗಳು ನ.30ರಂದು ನಗರದಲ್ಲಿ 7 ತಿಂಗಳ ಮಗುವಿನ ಮೇಲೆ ಅತ್ಯಾಚಾರವಾಗಿರುವ ಅಘಾತಕಾರಿ ಘಟನೆ ಇದೀಗ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು(Arrest) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಂದ ಹಿನ್ನೆಲೆ..

ಇದೇ ನ.30 ರಂದು ನಗರದ ಪೂರ್ವ ಭಾಗದಲ್ಲಿರುವ ಬುರ್ಟೋಲ್ಲ ಪ್ರದೇಶದಲ್ಲಿ ಮಗು ಆಳುತ್ತಿರುವುದು ಕಂಡು ಬಂದಿದೆ. ಅಲ್ಲಿನ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮಗುವನ್ನು ಠಾಣೆಗೆ ಕರೆದೊಯ್ದಿದ್ದಾರೆ. ಕೆಲ ಸಮಯದ ನಂತರ ಇಬ್ಬರು ಪುಟ್ಪಾತ್​ ನಿವಾಸಿಗಳು ಠಾಣೆಗೆ ಬಂದು ಮಗು ಕಳೆದಿರುವ ಬಗ್ಗೆ ದೂರು ನೀಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಮಗುವನ್ನು ಆ ಇಬ್ಬರಿಗೆ ತೋರಿಸಿದ್ದಾರೆ. ನಿವಾಸಿಗಳಿಬ್ಬರು ಮಗುವನ್ನು ಗುರುತಿಸಿದ್ದಾರೆ. ಬಳಿಕ ಮಗುವನ್ನು ಪರೀಕ್ಷೆಗೆಂದು ಆಸ್ಪತ್ರಗೆ ದಾಖಲಿಸಿದಾಗ ಅತ್ಯಾಚಾರ ನಡೆದಿರುವುದರ ಬಗ್ಗೆ ಗೊತ್ತಾಗಿದೆ.

ತತಕ್ಷಣ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ, ಕೂಡಲೇ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್​ಗಳಡಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net